About Us Advertise with us Be a Reporter E-Paper

Breaking Newsಸಿನಿಮಾಸ್

ನೆರೆ ಸಂತ್ರಸ್ತರಿಗೆ ಮಿಡಿದ ಸೆಲೆಬ್ರಿಟಿ ಮನಗಳು..!

ಕೊಡಗಿನ ಮಳೆಯನ್ನು ಮಹಾ ಮಳೆಯೆನ್ನಬೇಕೋ? ರಕ್ಕಸ ಮಳೆಯೆನ್ನಬೇಕೋ? ಎನ್ನುವ ಸಂಶಯದಲ್ಲಿ ನಾವಿದ್ದೇವೆ. ಬಿಡುವು ಕೊಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗಿನ ಜನಜೀವನ ತತ್ತರಿಸಿ ಹೋಗಿದೆ. ಮನೆ ನೀರಡಿಯಲ್ಲಿಯಾದರೆ, ಜೀವ ನೀರ ಮೇಲಿನ ಗುಳ್ಳೆಯಂತಾಗಿದೆ.

ಯಾವಾಗ ಎಲ್ಲಿ ತೇಲಿ ಹೋಗುತ್ತೇವೋ? ಎಲ್ಲಿ ಭೂಮಿ ಬಾಯ್ಬಿಟ್ಟು ನಮ್ಮನ್ನು ನುಂಗಿ ಹಾಕುವುದೋ ಎನ್ನುವ ಭಯದಲ್ಲೇ ನೆರೆ ಕೇಂದ್ರಗಳ ಮೊರೆ ಹೋಗಿದ್ದಾರೆ ಕೊಡಗಿನ ಜನ. ಅಲ್ಲಿ ಬೇಕಾಗಿರುವುದು ಸಹಾಯ ಹಸ್ತಗಳಷ್ಟೇ. ಜೀವ ಕೈಯಲ್ಲಿಟ್ಟು ಬದುಕುತ್ತಿರುವ ಕೊಡಗಿನ ಜನರಿಗೆ ಹಣದ ಜತೆ ಅಗತ್ಯ ವಸ್ತುಗಳ ಅವಶ್ಯಕತೆಯಿದೆ. ಕರ್ನಾಟಕದ ಮೂಲೆ ಮೂಲೆಯಿಂದ ಜನ ಸಹಾಯಕ್ಕೆ ಮುಂದಾಗುತ್ತಿದ್ದಾರೆ. ಅದರಂತೆ ನಮ್ಮ ಸ್ಯಾಂಡಲ್‌ವುಡ್‌ನ ಪ್ರಮುಖರು ಕೂಡ ಕೊಡಗಿನ ಜತೆ ನಿಂತಿದ್ದಾರೆ.

ರ‍್ಯಾಪರ್ ಚಂದನ್ ಶೆಟ್ಟಿ, ಹರ್ಷಿಕಾ, ಯಶ್, ಪುನೀತ್, ದರ್ಶನ್, ಸುದೀಪ್, ಜಗ್ಗೇಶ್ ಹೀಗೆ ಹಲವರು ಕೊಡಗಿನ ಜನತೆಗೆ ಸಹಾಯ ಹಸ್ತ ಚಾಚಿದ್ದಾರೆ.  ಸ್ಟಾರ್ ಯಶ್ ತಮ್ಮ ‘ಯಶೋಮಾರ್ಗ’ ಮೂಲಕ ಕೊಡಗಿನ ಸುಂಟಿಕೊಪ್ಪದಲ್ಲಿರುವ ಸಂತ್ರಸ್ತರಿಗೆ ಹಲವು ಅಗತ್ಯ ವಸ್ತುಗಳನ್ನು ಕಳುಹಿಸಿಕೊಡುವ ಮೂಲಕ ನೆರವು ನೀಡುತ್ತಿದ್ದಾರೆ.

ನವರಸ ನಾಯಕ ಜಗ್ಗೇಶ್ ಕೂಡ ಅನೇಕ ಅಗತ್ಯ ವಸ್ತುಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಅದರ ಜತೆಗೆ ನಟಿ ಸಂಯುಕ್ತ ಹೊರ್ನಾಡ್ ಕೂಡ ಅಗತ್ಯ ವಸ್ತುಗಳನ್ನು ಕಳುಹಿಸಿ ಸಂತ್ರಸ್ತರಿಗೆ ನೆರವಾಗಿದ್ದಾರೆ. ನಟ ಚೇತನ್ ಅನೇಕ ಸಂಘಟನೆಗಳ ಜತೆ ಸೇರಿ ಕೊಡಗಿನ ಸಂತ್ರಸ್ತರಿಗೆ ಸಹಾಯ ಧನ ಸಂಗ್ರಹದಲ್ಲಿ ತೊಡಗಿದ್ದಾರೆ.

ಹಣದ ಅವಶ್ಯಕತೆ ಹೆಚ್ಚಾಗಿರುವುದರಿಂದ ಆದಷ್ಟು ಸೆಲೆಬ್ರಿಟಿಗಳು ಹಣ ಸಹಾಯ ಮಾಡಲಿ ಎನ್ನುವುದು ನಮ್ಮ ಆಶಯ. ನಾಡಿನ ಜನ ಕೇವಲ ಸೋಶಿಯಲ್ ಮೀಡಿಯಾಗಳಲ್ಲಿ ತೋರಿಕೆಗಾಗಿ ಸಹಾಯ ಮಾಡದೆ ತುಂಬು ಮನಸ್ಸಿನಿಂದ ತಿಂಗಳ ಸಂಬಳವನ್ನು ನಮ್ಮ ನಾಡಿನಿಂದ ಹೆಮ್ಮೆಯ ವೀರರನ್ನು ದೇಶಕ್ಕೆ ಕೊಡುತ್ತಿರುವ ಜಿಲ್ಲೆಯ ಜನರಿಗೆ ಕೊಟ್ಟು ಸಹಕರಿಸೋಣ.

Tags

Related Articles

Leave a Reply

Your email address will not be published. Required fields are marked *

Language
Close