About Us Advertise with us Be a Reporter E-Paper

ಅಂಕಣಗಳು

ದೂರದೃಷ್ಟಿಯ ಆಶಾದಾಯಕ ಬಜೆಟ್!

- ಮೋಹನ್ ಕುಮಾರ್ ಬಿ. ಎನ್

ಮೋದಿಯೆಂದರೆ ಸುದ್ದಿ. ಯಾವಾಗಲೂ, ಏನಾದರೂ ಸುದ್ದಿಯಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಅಂತಹದರಲ್ಲಿ ಬಜೆಟ್ ಎಂದರೆ ಏನಾದರೆಂದು ಹೊಸತನ ಇರಲೇಬೇಕು. ಅದರಲ್ಲಿಯೂ ಯಾರೂ ಊಹಿಸಿರದ ರೀತಿಯಲ್ಲಿ ಹೊರಬಂದು ಏನಾದರೊಂದು ಹೊಸತನ್ನು ನೀಡುವುದರಲ್ಲಿ ನಿಸ್ಸೀಮರು. ಇದೇ ನಿಟ್ಟಿನಲ್ಲಿ 2019ರ ಮೇಲೂ ಜನರ ನಿರೀಕ್ಷೆ ತುಂಬಾ ಇತ್ತು. ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲದಿದ್ದರೂ ವಿತ್ತ ಸಚಿವರಾದ ಪಿಯೂಶ್ ಗೋಯೆಲ್‌ರವರು ಬಜೆಟ್ ಮಂಡಿಸಿರುವ ರೀತಿಯಂತೂ ಪೂರ್ಣ ಪ್ರಮಾಣದ ಬಜೆಟ್‌ನ ರೀತಿಯೇ ಇತ್ತು.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕೇಂದ್ರ ಸರಕಾರ ಮೇಲೆ ಒತ್ತಡವೂ ಹೆಚ್ಚಿತ್ತು, ಅದರಲ್ಲಿಯೂ ರೈತಾಪಿ ವರ್ಗಕ್ಕೆ ಮೋದಿ ಏನೂ ಮಾಡಿಲ್ಲವೆಂಬ ಕೂಗಂತು ಎಲ್ಲೆಡೆಯೂ ಕೇಳಿ ಬರುತ್ತಿತ್ತು. ಸಾಲಮನ್ನಾವೆಂಬ ಒಂದೇ ಒಂದು ವಿಚಾರಧಾರೆ ಬಿಜೆಪಿಯನ್ನು ಛತ್ತಿಸ್‌ಗಢದಲ್ಲಿ ಹೇಳಹೆಸರಿಲ್ಲದಾಗಿ ಪ್ರಧಾನಿ ಮೋದಿಯವರು ಮೊದಲಿನಿಂದ ಆರ್ಥಿಕ ಶಿಸ್ತು ಪರಿಪಾಲಿಸುವುದರಲ್ಲಿ ನಿಸ್ಸೀಮರು, ಅವರು ಮೊದಲೇ ಹೇಳಿದ ಹಾಗೇ ಸಾಲಮನ್ನಾವನ್ನು ಯಾವುದೇ ಕಾರಣಕ್ಕೂ ಕೇಂದ್ರವು ಮಾಡುವುದಿಲ್ಲ ಎಂಬುದನ್ನು ಪಾಲಿಸಿದ್ದಾರೆ. ಹಾಗಾಗಿಯೇ ಈ ಬಾರಿಯ ಬಜೆಟ್‌ನಲ್ಲಿ ಸಾಲಮನ್ನಾವನ್ನು ಮಾಡಲಿಲ್ಲ.

ಇವರ ಬದಲಿಗೆ ತೆಲಂಗಾಣ ಸರಕಾರದ ಮಾದರಿ, ರೈತರ ಪ್ರತಿಯೊಂದು ಎಕರೆಗೆ 6000 ರುಪಾಯಿಗಳ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ. ಈ ಯೋಜನೆಯು ಕೇವಲ 5 ಎಕರೆಯವರೆಗೂ ಜಮೀನು ಇರುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಅದರಲ್ಲಿಯೂ ವರ್ಷಕ್ಕೆ ಕಂತುಗಳಲ್ಲಿ 2000ರುಪಾಯಿನಂತೆ ರೈತರ ಖಾತೆಗಳಿಗೆ ನೇರವಾಗಿ ಹಾಕಲಾಗುವುದು. ಈಗಾಗಲೇ ಹಳ್ಳಿಗಳಲ್ಲಿ ಹಲವಾರು ಜನರ ಬಳಿ ಜನಧನ ಖಾತೆಗಳು ಇರುವುದರಿಂದ ಈ ಹಣದ ವರ್ಗಾವಣೆಯು ರೈತರನ್ನು ತಲುಪುವುದರಲ್ಲಿ ಯಾವುದೇ ಅಡೆತಡೆಗಳಿಲ್ಲ. 2016ರ ನಂತರ ಭಾರತದಲ್ಲಿ ಸುಮಾರು 36 ಕೋಟಿ ಜನಧನ ಖಾತೆಗಳು ಹೊಸದಾಗಿ ಸೇರ್ಪಡೆಯಾಗಿವೆ. ಈಗಾಗಲೇ ಗೊಬ್ಬರ ಪ್ರೋತ್ಸಾಹ ಧನವು ರೈತರ ಖಾತೆಗಳಿಗೆ ನೇರವಾಗಿ ಬರುತ್ತಿರುವುದರಿಂದ ಸಾಮಾನ್ಯವಾಗಿ ಈ ಬಜೆಟ್‌ನ ಹೊಸ ಫಲಾನುಭವಿಗಳು ಸಹ ಅವರೇ ಆಗಿರುತ್ತಾರೆ. ಒಂದು ಅಂದಾಜಿನ ಭಾರತದ ಒಟ್ಟಾರೆ ರೈತರ ಬಳಿ ಈ 70ರಷ್ಟು ರೈತರ ಜಮೀನು ಸುಮಾರು 2 ಎಕರೆಗಿಂತ ಕಡಿಮೆ ಇದೆ.

ಆದರಿಂದ ಶೇ.70ರಷ್ಟು ರೈತರು ಈ ಯೋಜನೆಯಡಿ ಫಲಾನುಭವಿಗಳು ಆಗಬೇಕಿದೆ. ಇಲ್ಲಿರುವ ಒಂದು ಸಮಸ್ಯೆಯೆಂದರೆ ಪಾಲುದಾರಿಕೆಯ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಈ ಯೋಜನೆಯ ಲಾಭವು ಭೂಮಿಯ ಒಡೆಯನಿಗೆ ಸಿಗಲಿದೆ ಹಾಗೂ 5 ಎಕರೆಗಿಂತಲೂ ಹೆಚ್ಚಿನ ಭೂಮಿಯಿರುವ ಎಷ್ಟೋ ರೈತರಿಗೂ ಸಹ ಪ್ರೋತ್ಸಾಹದ ಅವಶ್ಯಕತೆಯಿದೆ. ಉದಾಹರಣೆಗೆ ಬಯಲು ಸೀಮೆ ಪ್ರದೇಶಗಳಾದ ಗುಲಬರ್ಗಾ, ರಾಯಚೂರು, ಬೀದರ್, ಯಾದಗಿರಿ, ಬಳ್ಳಾರಿಯಂತಹ ಜಿಲ್ಲೆಗಳಲ್ಲಿ 5 ಎಕರೆಗಿಂತಲೂ ಹೆಚ್ಚಿನ ಭೂಮಿಯಿದ್ದರೂ ಸಹ ಅಲ್ಲಿನ ರೈತರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅವರಿಗೆ ನೀರಿಲ್ಲ, ಮಳೆಯಿಲ್ಲ, ಆಳುಗಳಿಲ್ಲ, ಅಂತಹವರ ಸಮಸ್ಯೆಗಳು ಈ ಯೋಜನೆಯಡಿ ಪರಿಹಾರವಾಗುವುದಿಲ್ಲ.

ಇನ್ನು ಈ ಬಾರಿಯ ಬಜೆಟ್‌ನ ಇನ್ನೊಂದು ವಿಶೇಷವೆಂದರೆ ನೈಸರ್ಗಿಕವಾಗಿ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿ ಹೋಗಿರುವಂತಹ ರೈತರ ಬೆಳೆಗಳ ಮೇಲಿನ ಸಾಲದ ಮೇಲೆ 2% ಬಡ್ಡಿಯ ಪ್ರೋತ್ಸಾಹ ಧನವನ್ನು ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಸರಿಯಾದ ಸಮಯದಲ್ಲಿ ಮರು ಪಾವತಿಸಿದ ರೈತರಿಗೆ ಇನ್ನೂ 3% ರಷ್ಟು ಹೆಚ್ಚಳವಾಗಿ ಸಬ್ಸಿಡಿ ಧನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಿದರೆ ಸಾಲಮನ್ನಾವೆಂಬ ಹಳೆಯ ನೀತಿಯೇ ಬೇಕಾಗುವುದಿಲ್ಲ. 2014ರಿಂದ 2019ರ ವರೆಗಿನ ಬಜೆಟ್‌ಗಳನ್ನು ನೋಡಿದರೆ ನಿಧಾನವಾಗಿ 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವೆಡೆ ದೂರದೃಷ್ಟಿಯ ಯೋಜನೆ ಇದೆಂದು ನಿಖರವಾಗಿ ಕಾಣುತ್ತದೆ. ಮೊದಲಿಗೆ ರೈತರಿಗೆ ಬಹು ಮುಖ್ಯವಾಗಿ ಕಾಡುತ್ತಿದ್ದ ಯೂರಿಯಾ ಸಮಸ್ಯೆಯನ್ನು ಬೇವು ಲೇಪನೆಯಿಂದ ಸರಿಪಡಿಸಿ, ನೇರವಾಗಿ ಗೊಬ್ಬರಿ ಸಿಗುವಂತೆ ಮಾಡಿ, ಇಳುವರಿಯನ್ನೂ ಹೆಚ್ಚಿಸಲಾಯಿತು. ಫಸಲ್‌ಬೀಮಾ ಯೋಜನೆಯಡಿ ಬೆಳೆಯ ವಿಮೆ ತರಲಾಯಿತು. ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬಲೆಯನ್ನು ಘೋಷಿಸಲಾಯಿತು. ಈಗ ಎಕರೆಗೆ ಇಂತಿಷ್ಟು ಎಂದು ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಇದೇ ರೀತಿ ಸ್ವಾಮಿನಾಥನ್ ವರದಿಯನ್ನು ನಿಧಾನವಾಗಿ ಒಂದೊಂದರಂತೆ ಅನುಷ್ಢಾನಕ್ಕೆ ತಂದರೆ ರೈತರ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಯುವುದರಲ್ಲಿ ಅನುಮಾನವಿಲ್ಲ.

ಮಾರುಕಟ್ಟೆಯ ವಿಸ್ತರಣೆ ಮಾಡುವುದರಲ್ಲಿ ಇನ್ನೂ ಸ್ವಲ್ಪ ಹೆಜ್ಜೆ ಮುಂದೆ ಇಡಬೇಕಾದಂತಹ ಯೋಜನೆಗಳು ಇಂದಿನ ಬಜೆಟ್‌ನಲ್ಲಿ ಕಾಣಲಿಲ್ಲ. ಸಮಸ್ಯೆಯನ್ನು ಪ್ರತಿಪಕ್ಷಗಳು ಯಾವಾಗಲೂ ಮೋದಿಯ ಮೇಲೆ ಹೇರುತ್ತಿರುವುದರಿಂದ ಅದರ ಬಗ್ಗೆ ಕೆಲವು ಯೋಜನೆಗಳನ್ನು ಅಳವಡಿಸಬೇಕಿತ್ತು ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಹೊಸದೊಂದು ಯೋಜನೆಯನ್ನು ಬಜೆಟ್‌ನಲ್ಲಿ ಬಾಯಿಮಾತಿಗೆ ಘೋಷಿಸುವುದರ ಬದಲು ಇರುವ ಮುದ್ರಾ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿದರೆ ಸಾಕು ಎಂದು ಇನ್ನು ಕೆಲವರ ವಾದ. ಅಲ್ಲದೆ ಇಂದಿನ ಕಾಲಘಟ್ಟದಲ್ಲಿ ಸಮಸ್ಯೆಗಳಿರುವುದು ತರಬೇತಿಯಲ್ಲಿಯೇ ಹೊರತು ಉದ್ಯೋಗದಲ್ಲಲ್ಲ. ಉದ್ಯೋಗ ಸಂಬಂಧಿತ ತರಬೇತಿಯನ್ನು ಶಾಲಾ ಕಾಲೇಜುಗಳಲ್ಲಿಯೇ ಕೊಡಬೇಕೇ ಹೊರತು ಸರಕಾರದ ಮೇಲೆ ಬಿಡುವುದಲ್ಲ. ಅದನ್ನು ಎಷ್ಟು ಮಾಡಿದರೂ ಪ್ರಯೋಜನ ಕಾಣುತ್ತಿಲ್ಲ.

ಎಲ್ಲರಿಗೂ ತಿಳಿದಿರುವಂತೆ ಕೆಲಸಗಳು ಹಲವಾರಿವೆ, ಆದರೆ ಅದಕ್ಕೆ ತಕ್ಕಂತಹ ತರಬೇತಿ ಇಂದಿನ ಯುವ ಪೀಳಿಗೆ ಪಡೆದುಕೊಂಡಿಲ್ಲ. ಎಲ್ಲರೂ ಬೇರೆಯವರ ಕೆಳಗಡೆಯೇ ಕೆಲಸ ಮಾಡಬೇಕೆಂದಿಲ್ಲ. ಆದ್ದರಿಂದಲೇ ಮುದ್ರಾ ಯೋಜನೆಯ ಅನುಷ್ಠಾನ ಮಾಡಿ ಸುಮಾರು 15 ಕೋಟಿಯಷ್ಟು ಯುವಕ ಯುವತಿಯರಿಗೆ ಸಾಲ ನೀಡಲಾಗಿದೆ. ಹಾಗಾದರೆ ಇದೆಲ್ಲವೂ ಉದ್ಯೋಗ ಸೃಷ್ಟಿಯಲ್ಲದೇ ಮತ್ತೇನು?. ನಮ್ಮ ರಾಜ್ಯದಲ್ಲಿಯೇ ನೀವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಹೆಣ್ಣು ಮಕ್ಕಳು ಈ ಯೋಜನೆಯಡಿ ಪಡೆದು ಮನೆಯಲ್ಲಿ ಮೀನಿನ ಖಾದ್ಯಗಳನ್ನು ತಯಾರಿಸಿ ಹತ್ತಿರದ ಹೋಟೆಲ್‌ಗಳಿಗೆ ಮಾರಾಟ ಮಾಡಿ ತಿಂಗಳಿಗೆ ಸಂಪಾದನೆ ಮಾಡಿ ಜೀವನ ಮಾಡುತ್ತಿದ್ದಾರೆ. ಆದರೆ ಕೆಲ ಬಿಜೆಪಿ ನಾಯಕರು ಮಾತ್ರ ಈ ಯೋಜನೆಗಳನ್ನು ನೆಲ ಮಟ್ಟದಲ್ಲಿ ಅನುಷ್ಠಾನಗೊಳಿಸಿರುವುದರಲ್ಲಿ ಮಾತ್ರ ಸಫಲವಾಗಿಲ್ಲ. ಅನ್ನೋದು ಅಷ್ಟೇ ಸತ್ಯದ ಮಾತು.

ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಈ ಯೋಜನೆಯು ಈಗಾಗಲೇ ತುಂಬಾ ಯಶಸ್ಸು ಕಂಡಿದೆ. 2019ರ ಬಜೆಟ್‌ನಲ್ಲಿ ಏನೋ ಒಂದು ಹೊಸದನ್ನು ಘೋಷಿಸುವ ಬದಲು ಇರುವ ಹಳೆಯ ಜಾರಿಗೊಳಿಸುವ ನಿಟ್ಟಿನಲ್ಲಿ ಯೋಚಿಸಲಾಗಿದೆ ಎಂದರೆ ತಪ್ಪಿಲ್ಲ. ಇನ್ನು ಮಧ್ಯಮ ವರ್ಗದವರಿಗಂತೂ ಈ ಬಜೆಟ್ ಬಂಪರ್ ಎಂದರೆ ತಪ್ಪಿಲ್ಲ. ಆದಾಯ ತೆರಿಗೆಯಲ್ಲಿ ಬಹು ದೊಡ್ಡ ರಿಲೀಫ್ ನೀಡಲಾಗಿದ್ದು, ಅವರ್ಯಾರು ತೆರಿಗೆ ಕಟ್ಟುವ ಅಗತ್ಯತೆಯಿಲ್ಲ. ಇದರಿಂದ ಸುಮಾರು 12,500 ರುಪಾಯಿಯಷ್ಟು ಉಳಿತಾಯವಾಗುತ್ತದೆ. ಇದರಿಂದ ಸರಕಾರಕ್ಕೆ ಸುಮಾರು 18 ಸಾವಿರ ಕೋಟಿಯಷ್ಟು ನಷ್ಟವಾಗುತ್ತದೆಯೆಂದು ಅಂದಾಜಿಸಲಾಗಿದೆ. 20 ಲಕ್ಷ ಕೋಟಿಯ ಬಜೆಟ್‌ನಲ್ಲಿ 18 ಸಾವಿರ ಕೋಟಿಯೇನು ದೊಡ್ಡಮಟ್ಟದಲ್ಲ. ಹಾಗಾಗಿ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಹಲವು ಪ್ರಕಾರ ಇದು ಕೇವಲ ಚುನಾವಣಾ ಗಿಮಿಕ್ ಆಗಿದ್ದು, ವೋಟಿಗಾಗಿ ಹೀಗೆ ಮಾಡಲಾಗಿದೆ ಎನ್ನಲಾಗುತ್ತಿದೆ. ಒಂದು ವಿಷಯವನ್ನು ಇಲ್ಲಿ ಅರ್ಥ ಮಾಡಿಕೊಳ್ಳಬೇಕು, ನೋಟ್ಯಂತರವಾದ ಮೇಲೆ ತೆರಿಗೆಯ ಸಂಗ್ರಹದಲ್ಲಿ ಶೇ.70 ರಷ್ಟು ಏರಿಕೆಯಾಗಿದೆ.

ಇದರ ಜೊತೆಗೆ ತೆರಿಗೆಯನ್ನು ಕಟ್ಟುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ರೀತಿಯಾದ ಏರಿಕೆಯಾದಾಗ ಮಾತ್ರ ತೆರಿಗೆಯನ್ನು ಕಡಿಮೆ ಮಾಡಬೇಕೇ ಹೊರತು ಪ್ರತಿ ವರ್ಷವೂ ಮಾಡಲಿಕ್ಕಾಗುವುದಿಲ್ಲ. ಅದಕ್ಕಾಗಿಯೇ ಇದರ ಲಾಭವನ್ನು ಈ ಬಜೆಟ್‌ನಲ್ಲಿ ನೀಡಲಾಗಿದೆ. ವಿತ್ತ ಸಚಿವರಾದ ಗೋಯೆಲ್ ಇಂದು ತೆರಿಗೆದಾರರನ್ನು ಮೊದಲ ಬಾರಿಗೆ ಹೊಗಳಿದ್ದು ನೋಡಿ ಖುಷಿಯಾಯಿತು. ಯಾವಾಗಲೂ ಅಷ್ಟೇ. ತೆರಿಗೆಯನ್ನು ಪಾವತಿಸುತ್ತಿದ್ದವರು ಮಧ್ಯಮ ವರ್ಗದವರು. ಆದರೆ ಅದರ ಫಲಾನುಭವಿಗಳು ಹೆಚ್ಚಾಗಿ ಮೇಲ್ವರ್ಗದವರು ಇಲ್ಲವೇ ಕೆಳ ವರ್ಗದವರಾಗಿರುತ್ತಿದ್ದರು. ಇದರಿಂದಾಗಿ ಮಧ್ಯಮ ವರ್ಗವೇ ಯಾವಾಗಲೂ ಕಷ್ಟದಲ್ಲಿ ಸಿಲುಕುತ್ತಿತ್ತು. ಇದರ ಜೊತೆಗೆ ಸುಮಾರು 10ಲಕ್ಷ ರು. ಸಂಬಳ ತೆಗೆದುಕೊಳ್ಳುವವರು ಸರಿಯಾಗಿ ಯೋಜನೆ ಮಾಡಿದರೆ ಒಂದು ರುಪಾಯಿಯೂ ತೆರಿಗೆ ಕಟ್ಟುವಂತಿಲ್ಲ. ಒಟ್ಟಿನಲ್ಲಿ ಇದನ್ನು ಒಂದು ಮಾಸ್ಟರ್ ಸ್ಟ್ರೋಕ್ ಎಂದರೆ ತಪ್ಪಿಲ್ಲ.

ಎರಡೆರಡು ಮನೆಗಳನ್ನು ಕಟ್ಟಿಸಿಕೊಂಡು, ಒಂದು ಮನೆಯಲ್ಲಿ ತಾವಿದ್ದು, ಇನ್ನೊಂದು ಮನೆಯಲ್ಲಿ ಕೆಲಸದ ಪ್ರಯುಕ್ತ ಅಪ್ಪ-ಅಮ್ಮನನ್ನು ಬಿಡುತ್ತಿದ್ದ ತೆರಿಗೆದಾರರು ಈ ಹಿಂದೆ ತಮ್ಮ ಎರಡನೆಯ ಮನೆಯ ಮೇಲೆ ತೆರಿಗೆ ಕಟ್ಟಬೇಕಾಗಿತ್ತು. ಆದರೆ ಈ ಬಜೆಟ್‌ನಲ್ಲಿ ಅವರಿಗೂ ರಿಲೀವ್ ಮಾಡಿ ಎರಡೂ ಮನೆಗಳನ್ನು ತೆರಿಗೆಮುಕ್ತಗೊಳಿಸಲಾಗಿದೆ. ಇದರಿಂದ ಬೇರೆ ಬೇರೆ ಊರುಗಳಲ್ಲಿ ಕೆಲಸದ ನಿಮಿತ್ತ ತೆರಳಿ ಮನೆ ತೆಗೆದುಕೊಂಡಿರುವವರಿಗೆ ತುಂಬ ಅನುಕೂಲವಾಗಲಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಿಗೆ 2% ರಷ್ಟು ಬಡ್ಡಿಯ ಧನವನ್ನು ನೀಡಲು ನಿರ್ಧರಿಸಲಾಗಿದೆ. ಆದರೆ ಯಾಕೋ ಇದು ಕೊಂಚ ಕಡಿಮೆಯಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜಿಎಸ್‌ಟಿಯನ್ನು ಸಣ್ಣ ಕೈಗಾರಿಕೆಗಳು ಬ್ಯಾಂಕ್‌ನಿಂದ ಸಾಲ ತಂದು ಕಟ್ಟುವುದರಿಂದ ಸಾಲದ ಮೇಲಿನ ಬಡ್ಡಿಯನ್ನು ಈಗ ಇರುವ 13%ಗಿಂತ ಇನ್ನೂ ಕೊಂಚ ಏರಿಕೆ ಮಾಡಬಹುದಿತ್ತು ಎನ್ನಲಾಗುತ್ತಿದೆ. ಇನ್ನು ಅಸಂಘಟಿತ ವಲಯದಲ್ಲಿ ವಯಸ್ಸಾದವರಿಗೆ ಯಾವ ರೀತಿಯ ಯೋಜನೆಯೂ ಇರಲಿಲ್ಲ. ಅಂತಹವರಿಗೆ ಅಂತಲೇ ತಿಂಗಳಿಗೆ 3000 ರುಪಾಯಿಯ ಪೆನ್ಷನ್ ಯೋಜನೆಯನ್ನು ತರಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಕೇಂದ್ರ ಹಾಗೂ ವಲಯದವರು ಇಬ್ಬರೂ ಸೇರಿ 55% ರೂಪಾಯಿಗಳಿಗೆ ಈ ಯೋಜನೆಯಡಿ ಸೇರಬಹುದಾಗಿದೆ. ಇದರಿಂದಾಗಿ ಬೀದಿ ಬದಿಯ ವ್ಯಾಪಾರಿಗಳು, ಕೂಲಿ ಮಾಡುವುವವರು, ಹಾಗೂ ಪೇಪರ್ ಹಾಕುವವರಿಗೆ ಉಪಯೋಗವಾಗಲಿದ್ದು ಸುಮಾರು 10 ಕೋಟಿಯಷ್ಟು ಫಲಾನುಭವಿಗಳು ಇದರ ಲಾಭವನ್ನು ಪಡೆಯಲಿದ್ದಾರೆಯೆಂದು ಅಂದಾಜಿಸಲಾಗಿದೆ.

ಉದ್ಯೋಗ ಖಾತ್ರಿಯೋಜನಯಡಿ ಅತಿ ಹೆಚ್ಚು ಅಂದರೆ 60.000 ಕೋಟಿಯಷ್ಟು ಹಣವನ್ನು ಮೀಸಲಿದಲಾಗಿದ್ದು, ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿಯಲ್ಲಿ ಇನ್ನುಷ್ಟು ಬಲ ಬಂದತಾಗಿದೆ. ಈ ಹಿಂದೆ ಹೇಳಿದಂತೆ ಹಣವನ್ನ ಅವರ ಖಾತೆಗೆ ಹಾಕಿದ್ದರಿಂದ ಸುಮಾರು 85.000 ಕೋಟಿಯಷ್ಟು ಹಣವನ್ನು ಉಳಿತಾಯ ಮಾಡಲಾಗಿತ್ತು, ಈ ಉಳಿತಾಯದ ಲಾಭವನ್ನು ಪುನಹ ಅದೇ ಕಾರ್ಯಕ್ಕೆ ಬಳಸಲಾಗಿದ್ದು ಇದು ಈವರೆಗಿನ ಅತೀ ಹೆಚ್ಚಿನ ಅನುದಾನವಾಗಿದೆ. ನಮ್ಮ ದೇಶದಲ್ಲಿ ರಕ್ಷಣಾ ವಲಯವನ್ನು ಮತ್ತಷ್ಟು ಬಲಪಡಿಸಲು ಪ್ರತಿ ವರ್ಷದಂತೆ ಈ ವರ್ಷವೂ ಸಹ 3.00.00 ಕೋಟಿಯಷ್ಟು ಹಣವನ್ನು ಮೀಸಲಿಡಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಇನ್ನೂ ಹೆಚ್ಚು ಬಲಗೊಳಿಸಬೇಕಿರುವುದರಿಂದ ಇಷ್ಟು ದೊಡ್ಡ ಮೊತ್ತ ತೆಗೆದಿರಿಸುವುದು ಅಗತ್ಯವಾಗಿದೆ. ಇನ್ನು ಸುಮಾರು ಕೋಟಿಯಷ್ಟು ಅಕ್ರಮ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೆಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರ ಜತೆಗೆ ಸುಮಾರು 40.000 ಕೋಟಿಯಷ್ಟು ಬೇನಾಮಿ ಹಣವೂ ಇದೆ.

ಒಟ್ಟಾರೆ ಈ ಬಜೆಟ್ ನೋಡಿದರೆ ಯಾವುದೇ ಹೊಸತೊಂದು ಯೋಜನೆಯನ್ನು ಘೋಷಣೆಯನ್ನು ಮಾಡಿ ಮೂಗಿಗೆ ತುಪ್ಪ ಸವರಿರುವಂತೆ ಕಾಣುತ್ತಿಲ್ಲ. ಹಳೆಯ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದ್ದು, ಅವನ್ನು ಇನ್ನೂ ಹೆಚ್ಚಾಗಿ ಅನುಷ್ಠಾನಗೊಳಿಸುವ ಕಡೆಗೆ ಗಮನ ನೀಡಲಾಗಿದೆ. ಬಹುದಿನಗಳ ಬೇಡಿಕೆಯಾಗಿದ್ದ ಮಧ್ಯಮ ವರ್ಗದ ತೆರಿಗೆ ವಿನಾಯಿತಿಯನ್ನು ನೀಡುವುದು ತುಂಬಾ ಅವಶ್ಯಕವಾಗಿತ್ತು.

ಇತ್ತೀಚಿನ ನೋಡಿದರೆ ಬಜೆಟ್ ಮಂಡಿಸಿ ವೋಟ್ ಗಿಟಿಸಿಕೊಳ್ಳವ ಕಾಲವೆಲ್ಲಾ ಹೋಗಿದೆ. 2018ರ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯನ್ನು 5 ತಾಸು ಮಾಡಲಾಯಿತು, ಅಷ್ಟು ಮಾಡಿದರೂ ಸಹ ಕಾಂಗ್ರೆಸಿಗೆ ಜನರು ವೋಟ್ ಹಾಕಿ ಗೆಲ್ಲಿಸಲಿ ಅದೃಷ್ಟಿಯಿಂದ ನೋಡಿದರೆ ಕಾಂಗ್ರೆಸಿಗೆ ಸುಮಾರು 150 ಸೀಟು ಬರಬೇಕಿತ್ತು, ಹಾಗಾಗಿ ಬಜೆಟ್‌ನಿಂದ ಎಲೆಕ್ಷನ್ ಗೆಲ್ಲಿವ ಕಾಲ ಹೋಯಿತು. ಒಂದು ಪೂರ್ತಿ ದಿನ ಇರುತ್ತಿದ್ದ ರೈಲ್ವೆ ಬಜೆಟ್ ಕೇವಲ ಅರ್ಧಗಂಟೆಯಲ್ಲಿ ಮುಗಿದು ಹೋಯಿತ್ತು, ದೂರ ದೃಷ್ಟಿಯಿಂದ ನೋಡಿದರೆ ಆಶಾದಾಯಕ ಬಜೆಟ್ ಎನ್ನುವುದರಲ್ಲಿ ಯಾವ ಅನುಮಾನವನ್ನು ಇಲ್ಲ. ಕೇಂದ್ರ ಸರಕಾರವು ಇದೇ ಬಜೆಟ್‌ನಲ್ಲಿ ತನ್ನ ಮುಂದಿನ 10 ವರ್ಷಗಳ ಕನಸನ್ನೂ ಪ್ರಸ್ತಾಪಿಸಿದ್ದು ಅವಿಸ್ಮರಣೀಯ. ರೈತರ ಆದಾಯ ದ್ವಿಗುಣ, ಎಲೆಕ್ಟ್ರಿಕ್ ಗಾಡಿಗಳ ಬಳಕೆ, ಚಂದ್ರಯಾನ, ಎರಡು ಅಂಕೆಯ ಜಿಡಿಪಿ ಬೆಳವಣಿಗೆಯ ಗುರಿ, ಮಾಡಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close