ಇನ್ನು ಟಿವಿ ನೋಡುವಾಗ ಎಚ್ಚರ! ಎಚ್ಚರ!

Posted In : ದೇಶ

ದೆಹಲಿ: ಇನ್ನು ಮುಂದೆ ಕೇಂದ್ರ ಸರಕಾರ ನಿಮ್ಮ ಮನೆಯ ಸೆಟ್‌ಟಾಪ್ ಬಾಕ್ಸ್ಗಳಲ್ಲಿ ಒಂದು ಚಿಪ್ ಅಳವಡಿಸಿ ನೀವು ಯಾವ ಕಾರ್ಯಕ್ರಮ ನೋಡುತ್ತೀರಿ ಎಂಬುದರ ಮೇಲೆ ಕಣ್ಣಿಡಲು ನಿರ್ಧರಿಸಿದೆ ಎಂದು ವರದಿಗಳು ಬಂದಿವೆ. ಈ ವರದಿಗಳ ಬೆನ್ನಲ್ಲೇ ಕಾಂಗ್ರೆಸ್ ಕೇಂದ್ರದ ವಿರುದ್ಧ ಹರಿಹಾಯ್ದಿದ್ದು, ಜನರ ಖಾಸಗಿ ಜೀವನದಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದೆ.

ಈ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲ ಅವರು, ‘ಕೇಂದ್ರ ಸರಕಾರ ಜನರ ಬೆಡ್ ರೂಮ್‌ಒಳಗೆ ಹೋಗುವ ಪ್ರಯತ್ನ ಮಾಡುತ್ತಿದೆ’ ಎಂದು ಕಿಡಿಕಾರಿದ್ದಾರೆ.

‘ಮತ್ತೊಂದು ಮಹತ್ವದ ಸುದ್ದಿ. ಬಿಜೆಪಿ ಮುಂದಿನ ಹಂತದ ಕಣ್ಗಾವಲು ಬಯಲಾಗಿದೆ. ದೇಶದ ಜನರ ಖಾಸಗಿತನಕ್ಕೆ ಧಕ್ಕೆ ಮಾಡಿ, ನೀವು ನಿಮ್ಮ ಮನೆಯ ಟಿವಿಗಳಲ್ಲಿ ಏನು ನೋಡುತ್ತೀರಿ ಎಂಬುದರ ಬಗ್ಗೆ ಸ್ಮೃತಿ ಇರಾನಿ ಅವರಿಗೆ ಮಾಹಿತಿ ಬೇಕಂತೆ. ನಮ್ಮ ಮನೆಯ ಗೋಡೆ ಮಧ್ಯೆ, ನಿಮ್ಮ ಅನುಮತಿ ಇಲ್ಲದೇ ಕೇಂದ್ರ ಸರಕಾರ ಮೂಗು ತೂರಿಸುವ ಅಗತ್ಯವೇನು?’ ಎಂದು ಅವರು ಟೀಕಿಸಿದ್ದಾರೆ.

ತನ್ನ ನಿರ್ಧಾರದ ಪ್ರಸ್ತಾವನೆಯನ್ನು ಟ್ರಾಯ್‌ಗೆ ನೀಡಿರುವ ಕೇಂದ್ರ ಸರಕಾರ, ‘ಸೆಟ್‌ಟಾಪ್ ಬಾಕ್ಸ್ಗಳಲ್ಲಿ ಚಿಪ್ ಅಳವಡಿಸಿ ಜನರು ಯಾವ ರೀತಿಯ ಕಾರ್ಯಕ್ರಮ ನೋಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯುವುದರಿಂದ, ಜಾಹೀರಾತುದಾರರು ತಮ್ಮ ಹಣವನ್ನು ಉಪಾಯವಾಗಿ ವೆಚ್ಚ ಮಾಡಲು ನೆರವಾಗುತ್ತದೆ’ ಎಂದು ತನ್ನ ನಿರ್ಧಾರ ಸಮರ್ಥಿಸಿಕೊಂಡಿದೆ.ಏ

Leave a Reply

Your email address will not be published. Required fields are marked *

eighteen + three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top