About Us Advertise with us Be a Reporter E-Paper

Breaking Newsರಾಜ್ಯ

ಚಿನ್ನದ ಸರಗಳ್ಳತನ: ಟೀ ಕುಡಿಯುವ ನೆಪದಲ್ಲಿ ಬಂದು ಈ ಕೃತ್ಯ

ಕೆ.ಆರ್.ಪೇಟೆ: ಬೈಕ್‍‍ನಲ್ಲಿ ಬಂದ ಅಪರಿಚಿತರಿಬ್ಬರು ಟೀ ಅಂಗಡಿಯ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದಾರೆ.

ಇಲ್ಲಿನ ಸುಭಾಷ್ ನಗರದಲ್ಲಿ ಸೋಮವಾರ ಬೆಳಗ್ಗೆ 5.30ಕ್ಕೆ ಈ ಘಟನೆ ನಡೆದಿದ್ದು, ರತ್ನಮ್ಮ ಚಿನ್ನದ ಸರ ಕಳೆದುಕೊಂಡ ಮಹಿಳೆ.

ಸುಭಾಷ್ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡದಲ್ಲಿ ಇರುವ ತಮ್ಮ ಟೀ ಕ್ಯಾಂಟೀನ್ ಆರಂಭಿಸಲು ಅಂಗಡಿ ಮುಂದೆ ಕಸ ಗುಡಿಸುವಲ್ಲಿ ನಿರತರಾಗಿದ್ದರು. ಈ ವೇಳೆ ಟೀ ಕುಡಿಯುವ ಸೋಗಿನಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಇಬ್ಬರು ವ್ಯಕ್ತಿಗಳು ಹಿಂದಿನಿಂದ ಬಂದು ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ ಎಂದು ರತ್ನಮ್ಮ ಮಾಹಿತಿ ನೀಡಿದ್ದಾರೆ.

ಕಳೆದ ವಾರ ಬೈಕ್‍‍ನಲ್ಲಿ ಬಂದ ಅಪರಿಚಿತರು ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯ ಹೇಮಗಿರಿ ರಸ್ತೆಯ ಜಗದಾಂಬ ಎಂಬುವರ ಮಾಂಗಲ್ಯ ಸರವನ್ನು ಇದೇ ಮಾದರಿಯಲ್ಲಿ ಕಸಿದು ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Tags

Related Articles

Leave a Reply

Your email address will not be published. Required fields are marked *

Language
Close