About Us Advertise with us Be a Reporter E-Paper

ಸಿನಿಮಾಸ್

‘ಅಮರ್’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್

ಅಂಬರೀಶ್ ನಿಧನರಾದರು ಎಂಬ ಸುದ್ದಿ ಬಂದಾಗಿನಿಂದ ಅಂತಿಮ ವಿಧಿ ವಿಧಾನಗಳು ಪೂರ್ಣವಾಗುವವರೆಗೂ ಮನೆ ಮಗನಂತೆ ಇದ್ದದ್ದು ಸ್ಟಾರ್ ದರ್ಶನ್. ಇದೇ ಭಾಂದವ್ಯ ಅಂಬರೀಶ್ ಇದ್ದಾಗಲೂ ಅವರೊಡನೆ ಇತ್ತು. ಅಂಬರೀಶ್ ಅವರಿಗೆ ತಮ್ಮ ಮಗನ ಸಿನಿಮಾವನ್ನು ನೋಡಬೇಕು, ಅದಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಬೇಕು ಎಂಬ ಆಸೆ ಇತ್ತು.

ಆದರೆ ವಿಧಿಯ ಲೆಕ್ಕಾಚಾರ ಬೇರೆಯಾಗಿತ್ತು. ಈ ವಿಷಯವನ್ನು ಅರಿತಿರುವ ದರ್ಶನ್ ಅಭಿಷೇಕ್ ವೃತ್ತಿ ಬದುಕಿಗೆ ಒಂದು ಭದ್ರ ಅಡಿಪಾಯ ಹಾಕಲೇ ಬೇಕು ಎಂಬ ದೃಢ ನಿರ್ಧಾರ ಮಾಡಿದ್ದಾರೆ. ಇದೇ ಕಾರಣಕ್ಕೆ ‘ಅಮರ್’ ಸಿನಿಮಾದಲ್ಲಿ ದರ್ಶನ್ ಅಥಿತಿ ಕಾಣಿಸಿ ಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್, ದೇವರಾಜ್ ಹಾಗೂ ನಿರೂಪ್ ಭಂಡಾರಿ ಅಭಿನಯದಲ್ಲಿ ಹಾಡೊಂದರ ಚಿತ್ರೀಕರಣ ನಗರದ ದಿ ಕ್ಲಬ್‌ನಲ್ಲಿ ನಡೆಯಿತು.

ಧನಂಜಯ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಡಿನ ಚಿತ್ರೀಕರಣವಲ್ಲದೆ ಮಾತಿನ ಭಾಗದ ಚಿತ್ರೀಕರಣದಲ್ಲೂ ದರ್ಶನ್ ಅವರು ಅಭಿನಯಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ, ರಾಜರಾಜೇಶ್ವರಿ ನಗರ ಮುಂತಾದ ಕಡೆ ಮಾತಿನ ಬಾಗದ ಚಿತ್ರೀಕರಣ ನಡೆದಿದೆ. ನಿರೂಪ್ ಭಂಡಾರಿ ಸಹ ಚಿತ್ರದ ವಿಶೇಷ ಪತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಹಾಗೂ ಸ್ವಿಜರ್ ಲ್ಯಾಂಡ್‌ನಲ್ಲೂ ಚಿತ್ರದ ಚಿತ್ರೀಕರಣವಾಗಿದೆ. ಫೆಬ್ರವರಿ 11ರಿಂದ ಸಿಂಗಾಪುರದಲ್ಲಿ ಚಿತ್ರೀಕರಣ ನಡೆಯಲಿದೆ.

ಅತಿಹೆಚ್ಚು ಲೊಕೇಶನ್‌ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ. ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್‌ಸ್ ಅಡಿಯಲ್ಲಿ ಸಂದೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಅಂಬರೀಶ್ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದ ಸಂದೇಶ ನಾಗರಾಜ್ ಅವರು ಈಗ ಅವರ ಪುತ್ರನ ಸಿನಿಮಾಗೆ ಹಣ ಹೂಡುತ್ತಿದ್ದಾರೆ. ನಾಗಶೇಖರ್ ಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಸತ್ಯ ಹೆಗಡೆ ಛಾಯಾಗ್ರಹಣ, ಹರ್ಷ ಸಂಕಲನ, ಧನಂಜಯ್, ಇಮ್ರಾನ್, ಕಲೈ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ಥ್ರಿಲ್ಲರ್ ಮಂಜು, ಅಂಬು ಅರಿವು ಅವರ ಸಾಹಸ ನಿರ್ದೇಶನವಿದೆ.

Tags

Related Articles

Leave a Reply

Your email address will not be published. Required fields are marked *

Language
Close