About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ಐ-ಟಿ, ಇಡಿ ಅಧಿಕಾರದ ಮೇಲೆ ಕಡಿವಾಣ ಕೋರಿ ಸುಪ್ರೀಂ ಮೆಟ್ಟಿಲೇರಲು ನಾಯ್ಡು ಚಿಂತನೆ

ದೆಹಲಿ: ಸಿಬಿಗೆ ಆಂಧ್ರ ಪ್ರದೇಶ ಪ್ರವೇಶಿಸಲು ಇದ್ದ ಅನುಮತಿಯನ್ನು ಹಿಂಪಡೆದುಕೊಂಡಿರುವ ಚಂದ್ರಬಾಬು ನಾಯ್ಡು ಸರಕಾರ ಇದೀಗ, ಮುಂಬರುವ ಲೋಸಭಾ ಚುನಾವಣೆವರೆಗೆ ಆದಾಯ ತೆರಿಗೆ(ಐಟಿ) ಹಾಗು ಜಾರಿ ನಿರ್ದೇಶನಾಲಯ(ಇಡಿ)ಯದ ಅಧಿಕಾರಗಳಿಗೆ ತಡೆಯೊಡ್ಡಲು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ಬಣ ನಿರ್ಮಾಣವಾದ ಬಳಿಕ, ಎಲ್ಲ ವಿರೋಧ ಪಕ್ಷಗಳೂ ಸೇರಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಸಿದ್ಧ ಪಡಿಸಲಾಗುವುದು ಎಂದು ಟಿಡಿಪಿ ಸಂಸದರೊಬ್ಬರು ತಿಳಿಸಿದ್ದಾರೆ. ಕೇಂದ್ರ ಸರಕಾರದ ರಾಜಕೀಯ ಶಡ್ಯಂತ್ರ ನಡೆಸುತ್ತಿದ್ದು, ಇದನ್ನು ಬೆಂಬಲಿಸದಂತೆ ಕೇಂದ್ರ ಸರಕಾರದ ಸಂಸ್ಥೆಗಳಿಗೆ ತಿಳಿಸುವುದಾಗಿ ಈ ಸಂಸದರು ಹೇಳಿದ್ದಾರೆ. ಈ ವಿಚಾರವಾಗಿ, “ಅಗತ್ಯವಿದ್ದಲ್ಲಿ” ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಟಿಡಿಪಿ ಚಿಂತನೆ ನಡೆಸಿದೆ.

ಈ ಕುರಿತು ಮಾತನಾಡಿದ್ದ ಟಿಡಿಪಿಯ ಮತ್ತೊಬ್ಬ ನಾಯಕರೊಬ್ಬರು, “ಸಂಸದ ಸಿ ಎಂ ರಮೇಶ್‌, ಶಾಸಕ ಪೋತುಲ ರಾಮರಾವ್‌ ಹಾಗು ಮಾಜಿ ಶಾಸಕ ಬೀಡಾ ಮಸ್ತಾನ್‌ ರಾವ್‌ ಸೇರಿದಂತೆ ಅನೇಕ ಟಿಡಿಪಿ ನಾಯಕರ ಮಾಲೀಕತ್ವದ ಬ್ಯುಸಿನೆಸ್‌ ಹೌಸ್‌ಗಳ ಮೇಲೆ ಐ-ಟಿ ಇಲಾಖೆ ದಾಳಿ ನಡೆಸುತ್ತಿರುವುದು ಬಹಿರಂಗ ಸತ್ಯ. ಎನ್‌ಡಿಎ ಬಣದಿಂದ ಹಿಂದೆ ಸರಿದ ನಂತರವೇ ಈ ಬೆಳವಣಿಗೆಗಳು ಸಂಭವಿಸುತ್ತಿವೆ” ಎಂದು ಆಪಾದಿಸಿದ್ದಾರೆ.

ನವೆಂಬರ್‌ 22ರಂದು ದೆಹಲಿಯಲ್ಲಿ ಶರದ್‌ ಪವಾರ್‌, ಸ್ಟಾಲಿನ್‌ ಹಾಗು ಮುಲಾಯಂ ಸಿಂಗ್‌ ಯಾದವ್‌ರೊಂದಿಗೆ ಈ ಕುರಿತಂತೆ ಸಭೆ ಸೇರಲು ನಾಯ್ಡು ನಿರ್ಧರಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close