About Us Advertise with us Be a Reporter E-Paper

ಅಂಕಣಗಳು

ಧಾರ್ಮಿಕ ಚೌಕಟ್ಟಿನಲ್ಲಿಯೇ ಬದಲಾಯಿಸಿ

ಎಚ್.ಆರ್. ಶ್ರೀಪಾದ ಭಾಗಿ, ಹೆಗ್ಗೋಡು

ಬಾಲ ಸನ್ಯಾಸಿಗಳ ಆಯ್ಕೆ ಮತ್ತು ಸನ್ಯಾಸ ದೀಕ್ಷೆ ಬಹಳ ಹಿಂದಿನಿಂದಲೂ ನಮ್ಮ ದೇಶದಲ್ಲಿ ನಡೆದುಕೊಂಡು ಬಂದಿದೆ. ಹೊಯೇ ಅಂತಹ ವ್ಯಕ್ತಿಗಳು  ಬಂದ ನಂತರ ಯಾವುದೇ ಸಮಯದಲ್ಲೂ ಧಾರ್ಮಿಕ ಅನಾಚಾರದ ವಿಷಯದಲ್ಲೋ, ಅತ್ಯಾಚಾರದ ವಿಷಯದಲ್ಲೋ, ಸಂಪ್ರದಾಯ ವಿರೋಧೀ ನಡತೆಯಿಂದಲೋ ಅನೇಕ ಬಾರಿ ಸನ್ಯಾಸಾಶ್ರಮ ತೊರೆಯುವ, ಸಂಸಾರ ನೌಕೆಯನ್ನೇರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇಲ್ಲಿ ನಮ್ಮ ಮುಂದೆ ಬರುವ ಮುಖ್ಯ ಪ್ರಶ್ನೆ, ಮನಸ್ಸು ಪಕ್ವಗೊಳ್ಳುವ ಮತ್ತು ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ಪಡೆಯುವ ಮುನ್ನವೇ ಬಾಲಕನೊಬ್ಬನನ್ನು ಸನ್ಯಾಸಜೀವನಕ್ಕೆ ತಳ್ಳುವುದು ಧರ್ಮವೇ, ನ್ಯಾಯವೇ ಮತ್ತು ಉಚಿತವೇ ಎಂಬುದು. ಸಂಸಾರ ಜೀವನದ ಅನುಭವ ಹೊಂದಿ ಅಲ್ಲಿಂದ  ಅಥವಾ ಹೊರಬರಲು ತಯಾರಾದ ವ್ಯಕ್ತಿಗಳನ್ನು ಮಠಾಧಿಪತಿಯಾಗಿ ನೇಮಿಸುವುದು ಸೂಕ್ತವಲ್ಲವೇ ಎಂಬ ವಿಚಾರವೂ ಇದೇ ಸಂಬಂಧ ಮೂಡುತ್ತದೆ. ದೇಶದ ಎಷ್ಟೋ ಮಠಗಳಲ್ಲಿ ಸಂಸಾರಜೀವನ ಅನುಭವಿಸಿದ ವ್ಯಕ್ತಿಗಳನ್ನು ಮಠಾಧಿಪತಿಯಾಗಿ ನೇಮಿಸುವ ಸಂಪ್ರದಾಯವಿದೆ. ಕೆಲವು ಮಠಗಳಲ್ಲಿ ಸಂಸಾರಿಯಾಗಿದ್ದೂ ಮಠಾಧಿಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಾಹರಣೆಗಳೂ ಇವೆ.

 ಧರ್ಮಾಧ್ಯಕ್ಷ ಅಥವಾ ಧಾರ್ಮಿಕ ನಾಯಕ ಎನಿಸಿಕೊಂಡಿರುವವರು ತಮ್ಮ ಭಕ್ತರನ್ನು ಬುದ್ಧಿಶಕ್ತಿಯಿಂದ ಒಲಿಸಿಕೊಂಡೋ ಅಥವಾ ಬೆದರಿಸಿಯೋ ಅವರೊಡನೆ ದೈಹಿಕ ಸಂಬಂಧ, ಅಥವಾ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿರುವುದು ಜನಸಾಮಾನ್ಯರಿಗೆ ತಿಳಿದಿದೆ. ಇಷ್ಟಿದ್ದರೂ,  ಅಥವಾ ಧರ್ಮಪೀಠದ ಗೌರವವನ್ನು ಕಾಪಾಡುವ ಉದ್ದೇಶದಿಂದಲೋ ಅಥವಾ ಇದರ ಉಸಾಬರಿ ನಮಗೇಕೆ ಎಂಬ ಉಪೇಕ್ಷೆಯಿಂದಲೋ ಈ ಎಲ್ಲಾ ಪ್ರಕರಣಗಳು ಕೆಲವು ಕಾಲ ಸದ್ದುಮಾಡಿ ಸತ್ತು ಹೋಗುವ ಸುದ್ದಿಗಳಾಗುತ್ತಿವೆ. ಅನೇಕ ಸಂದರ್ಭಗಳಲ್ಲಿ ರಾಜಕಾರಣಿಗಳ, ಸಿರಿವಂತರ ಮತ್ತು ಪ್ರಭಾವಿಗಳ ಕೈವಾಡ ಅಥವಾ ಸಂಬಂಧವಿದ್ದ ಪಕ್ಷದಲ್ಲಿ, ಜನಮಾನಸದಿಂದ ಘಟನೆ ಮರೆಯಾಗುವವರೆಗೂ ಪ್ರಕರಣದ ತೀರ್ಮಾನವೇ ಆಗುವುದಿಲ್ಲ.

ಮಠಗಳು ಜನಸಾಮಾನ್ಯರ, ಭಕ್ತರ ಶ್ರದ್ಧಾಕೇಂದ್ರಗಳು. ಅಲ್ಲಿ ಪೀಠಾಧಿಪತಿಗಳಾಗಿರುವ ಸನ್ಯಾಸಿಗಳ ಅಥವಾ ಮಠಾಧಿಪತಿಗಳ ಮೇಲೆ ಭಕ್ತರಿಗೆ ಬಹಳ ನಂಬಿಕೆಯಿರುತ್ತದೆ.  ಬಾರಿ ಅವರು ತಪ್ಪು ಮಾಡಿದ್ದರೂ ಭಕ್ತರು ನಂಬಲು ಸಿದ್ಧರಿರುವುದಿಲ್ಲ ಮತ್ತು ಅವರನ್ನು ರಕ್ಷಿಸಲು ಹೋರಾಡುತ್ತಾರೆ. ಅನೇಕ ಮಠಾಧಿಪತಿಗಳು ಜನರ ಇಂತಹ ಮನೋಭಾವವನ್ನು ಬಂಡವಾಳವಾಗಿಸಿಕೊಂಡು ತಮ್ಮ ಆಟ ನಡೆಸುತ್ತಿರುತ್ತಾರೆ. ಆದರೆ ಜಗದ ನಿಯಮವೆಂದರೆ, ತಪ್ಪು-ಅನಾಚಾರ-ಅತ್ಯಾಚಾರಗಳು ಶಾಶ್ವತವಾಗಿ ಗುಪ್ತವಾಗಿರುವುದು ಸಾಧ್ಯವಿಲ್ಲ. ಒಂದಿಲ್ಲೊಂದು ದಿನ ಹೊರಬರಲೇಬೇಕು. ಇವು ಈ ಹಿಂದೆಯೂ ಅನೇಕ ಭಾರಿ ಆಗಿದ್ದವು ಮತ್ತು ಈಗ ಶ್ರೀ ಲಕ್ಷ್ಮೀವರತೀರ್ಥರ ಮರಣದ ಬಳಿಕ ಪುನರಾವರ್ತನೆಯಾಗುತ್ತಿದೆ ಅಷ್ಟೇ.

ಇಂತಹ ಘಟನೆಗೂ ಬಾಲಸನ್ಯಾಸ, ಪ್ರೌಢಸನ್ಯಾಸ ಅಥವಾ  ಪೂರ್ವ ಸನ್ಯಾಸ ವ್ಯವಸ್ಥೆಗೂ ಯಾವ ತರ್ಕಬದ್ಧವಾದ ಸಂಬಂಧವನ್ನೂ ಕಲ್ಪಿಸುವುದು ಕಷ್ಟ. ಪ್ರೌಡಾವಸ್ಥೆಗೆ ತಲುಪಿದ ಬಾಲಸನ್ಯಾಸಿಯೇ ಆಗಿರಲಿ, ಅಥವಾ ಪ್ರೌಢನಾದಮೇಲೆ ಸನ್ಯಾಸಿ ಅಥವಾ ಮಠಾಧಿಪತಿಯಾಗಿ ನೇಮಕವಾದ ಧರ್ಮಾಧ್ಯಕ್ಷನಾಗಿರಲಿ ದಾರಿ ತಪ್ಪಿ, ಸನ್ಯಾಸ ಧರ್ಮಕ್ಕೆ ಮತ್ತು ಮಠದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಅನೇಕ ಉದಾಹರಣೆಗಳಿವೆ.

ಇತಿಹಾಸದಲ್ಲಿ ಬಾಲಸನ್ಯಾಸಿಗಳಾಗಿ ಲೋಕಸೇವೆ ಮಾಡಿದ ಕೆಲವೇ ಮಹೋನ್ನತ ವ್ಯಕ್ತಿಗಳಿದ್ದಾರೆ. ಶಂಕರ, ಮಧ್ವ, ರಾಮಾನುಜನಾಚಾರ್ಯರು, ಬಸಣ್ಣನವರು, ಶಿರಡಿ ಸಾಯಿಬಾಬಾ ಮುಂತಾದವರು. ಹಿಂದಿನಿಂದಲೂ ಮಠಗಳಲ್ಲಿ ಕೆಲವು ಕಟ್ಟುಪಾಡುಗಳಿದ್ದವು. ಮಠಾಧಿಪತಿಗಳು,  ಸ್ತ್ರೀಯರಿಂದ ದೂರವಿರಬೇಕಾಗಿತ್ತು, ಮಾತನಾಡುವುದಕ್ಕಿಂತ ಸಾಧನೆ ಮತ್ತು ಅಧ್ಯಯನಕ್ಕೆ ಹೆಚ್ಚು ಪ್ರಾಧಾನ್ಯ ಇತ್ತು. ಇಂದಿನಂತೆ ಅಗತ್ಯಕ್ಕಿಂತ ಹೆಚ್ಚು ಧನ ಸಂಗ್ರಹವಾಗುತ್ತಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ, ಮಠಾಧಿಪತಿಗಳು, ಸ್ತ್ರೀಯರ, ರಾಜಕೀಯ ನಾಯಕರ ಮತ್ತು ಶ್ರೀಮಂತರ ಸಂಪರ್ಕಕ್ಕೆ ಸುಲವಾಗಿ ಬರುತ್ತಿದ್ದಾರೆ. ತಮ್ಮ ತಮ್ಮ ಉಪಯೋಗಕ್ಕಾಗಿ ಇವರು ಅಪವಿತ್ರ ಸಂಬಂಧಗಳನ್ನು ಸೃಷ್ಟಿಸಿಕೊಂಡು ಕಾಲಕ್ರಮೇಣ ಅದರಿಂದ ಮತ್ತೊಬ್ಬರ ಮೇಲೆ ಪ್ರಭಾವವನ್ನು ಬೆಳೆಸಿಕೊಂಡು ಅವರನ್ನು ನಿಯಂತ್ರಿಸಲು ಪ್ರಾಂಭಿಸಿತ್ತಾರೆ. ಒಮ್ಮೆ ಈ ವಿಷಜಾಲದಲ್ಲಿ ಸಿಲುಕಿಕೊಂಡ ವ್ಯಕ್ತಿ ಅಥವಾ  ಅದರಿಂದ ಹೊರಬರಲಾಗದ ಸ್ಥಿತಿಗೆ ತಲುಪುತ್ತಾರೆ. ಇಂತಹವರನ್ನು ಸನ್ಯಾಸಿಯಾಗಿಸಬೇಕೆಂಬುದನ್ನು ಧಾರ್ಮಿಕ ಚೌಕಟ್ಟಿನಲ್ಲಿ, ಈಗಿನ ಕಾಲಮಾನಕ್ಕನುಗುಣವಾಗುವಂತೆ ಬದಲಾಯಿಸುವ ಅಗತ್ಯವಿದೆ.

ಪದವಿಗೇರಿದ ಮಠಾಧಿಪತಿಗಳಿಗೆ ಅವರ ಕಾರ್ಯವ್ಯಾಪ್ತಿಯನ್ನು ಧರ್ಮಕಾರ್ಯಗಳಿಗೆ, ಧರ್ಮಾಚರಣೆಯ ವಿಧಿ-ವಿಧಾನಗಳ ಪರಿಚಯಕ್ಕೆ, ಧರ್ಮ ಪ್ರಸಾರಕ್ಕೆ, ಧಾರ್ಮಿಕ ಸಂಸ್ಕಾರಗಳ ಮಾರ್ಗದರ್ಶನಕ್ಕೆ ಸೀಮಿತಗೊಳಿಸುವ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅರಿವಿರದ ಮುಗ್ಧ ಮನಸ್ಸಿನ ದುರುಪಯೋಗ ಪಡೆದುಕೊಂಡು, ಭವಿಷ್ಯದಲ್ಲಿ ಅವರನ್ನು ಶಾಶ್ವತವಾಗಿ ಸಂಸಾರ ಸುಖಗಳಿಂದ ವಿಮುಖರನ್ನಾಗಿ ಮಾಡುವ ಪದ್ದತಿಯ ಬಗ್ಗೆ ಕೂಲಂಕಷವಾಗಿ ಧಾರ್ಮಿಕ ನೆಲೆಗಟ್ಟಿನಲ್ಲಿ ಚರ್ಚಿಸಿ ಸೂಕ್ತ ಬದಲಾವಣೆಗಳನ್ನು  ಅಗತ್ಯವಿದೆ. ಧಾರ್ಮಿಕ ಪದ್ದತಿಗಳು ನ್ಯಾಯಾಲಯ ವ್ಯವಸ್ಥೆಗಳು ಜಾರಿಗೆ ಬರುವ ಮೊದಲೇ ಬೆಳೆದು ಬಂದಿದ್ದರಿಂದ ಧಾರ್ಮಿಕ ಸಮಸ್ಯೆಗಳಿಗೆ ನ್ಯಾಯಾಲಯಗಳಿಂದ ಸೂಕ್ತ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಸಾಧುವಾಗಲಾರದು.

Tags

Related Articles

Leave a Reply

Your email address will not be published. Required fields are marked *

Language
Close