About Us Advertise with us Be a Reporter E-Paper

Breaking Newsರಾಜ್ಯ

ಶಿಕ್ಷಣದಲ್ಲಿ ಮಾರ್ಪಾಡು: ಕಾಲೇಜುಗಳಿಗೆ ಕೌಶಲಾಭಿವೃದ್ಧಿ ತರಬೇತಿ, ವಿವಿಗಳಿಗೆ ಕುಲಪತಿಗಳ ನೇಮಕ ಶೀಘ್ರವಾಗಲಿದೆ: ಸಚಿವ ಜಿ.ಟಿ.ದೇವೇಗೌಡ

ಬೆಂಗಳೂರು: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದಲ್ಲಿ ಸಾಕಷ್ಟು ಮಾರ್ಪಾಡಾಗಬೇಕಾಗಿದೆ. ಎಲ್ಲ ಕಾಲೇಜುಗಳಲ್ಲಿ ಕೌಶಲಾಭಿವೃದ್ಧಿ ತರಬೇತಿಗಳು ಏಕಕಾಲಕ್ಕೆ ಪ್ರಾರಂಭಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, 102 ಪದವಿ ಕಾಲೇಜುಗಳಿಗೆ ಕಟ್ಟಡಗಳೇ ಇಲ್ಲ. 3800 ಉಪನ್ಯಾಸಕರ ಅಗತ್ಯವಿದೆ. 10 ಸಾವಿರ ಅತಿಥಿ ಉಪನ್ಯಾಸಕರನ್ನು ಮುಂದುವರೆಸುತ್ತೇವೆ. ಸ್ಕಿಲ್ ಡೆವಲಪ್‍‍ಮೆಂಟ್ ಗೆ ಎಲ್ಲ ಕಾಲೇಜುಗಳಲ್ಲಿ ಏಕಕಾಲಕ್ಕೆ ಕೋರ್ಸ್ ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ವಿಶೇಷವಾಗಿ ಕಟ್ಟಡಗಳಿಗೆ 250 ಕೋಟಿ ರು. ಬಜೆಟ್‍‍ನಲ್ಲಿ ಮೀಸಲಿಡುತ್ತೇವೆ. ವಿಶ್ವಬ್ಯಾಂಕ್ ಅವರ ಜತೆ ಸಭೆ ನಡೆಸಲು ಮುಂದಾಗಿದ್ದೇವೆ. ವಿಶ್ವಬ್ಯಾಂಕ್ ನಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯುವ ಕುರಿತು ಸಭೆ ನಡೆಸಲಿದ್ದೇವೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ಆರ್ಥಿಕ ನೆರವು, ವಿವಿಗಳಿಗೆ ಕುಲಪತಿಗಳ ನೇಮಕ: ಹಿಂದಿನ ಸರಕಾರದಲ್ಲಿ ಹೇಗೇಗೋ ನೇಮಕ ಮಾಡಲಾಗಿತ್ತು. ನಮ್ಮ ಸರಕಾರ ಬಂದ ಮೇಲೆ ವಿವಿ ಕುಲುಪತಿಗಳ ನೇಮಕವಾಗಿಲ್ಲ. ಯಾವ ಯಾವ ವಿವಿಗಳಲ್ಲಿ ಕುಲಪತಿಗಳ ಹುದ್ದೆ ಖಾಲಿ ಇವೆ, ಎಷ್ಟು ವರ್ಷದಿಂದ ಖಾಲಿ ಇವೆ ಎಂಬ ಮಾಹಿತಿ ತರಿಸಿಕೊಂಡಿದ್ದೇವೆ.
ಇನ್ನೊಂದು ತಿಂಗಳಲ್ಲಿ ಖಾಲಿ ಇರುವ ಕುಲಪತಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸಚಿವ ಜಿ.ಟಿ.ದೇವೇಗೌಡ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಟಾಂಗ್ ಕೊಟ್ಟರು.

Tags

Related Articles

2 Comments

Leave a Reply

Your email address will not be published. Required fields are marked *

Language
Close