About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಚಾರಣಿಗರ ನೆಚ್ಚಿನ ಗಿರಿ ಬೆಟ್ಟ

ವೀರಮಲಕುನ್ನು ಕಾಸರಗೋಡು ಜಿಲ್ಲೆಯ ಪ್ರವಾಸಿ ಆಕರ್ಷಣೆ. ನೀಲೇಶ್ವರದ ಚೆರುವ ತ್ತೂರಿನ ಸಮೀಪವಿರುವ ವೀರಮಲ ಬೆಟ್ಟ ಪ್ರದೇಶ ಚಾರಣಿಗರ ಅಚ್ಚುಮಚ್ಚಿನ ಗಿರಿ ಪ್ರದೇಶ. 18 ನೇ ಶತಮಾನದ ಡಚ್ಚರ ಕೋಟೆ ಇರುವ ವೀರಮಲ ಇತಿಹಾಸದ ಪುಟ ಗಳನ್ನು ತೆರೆದಿಡುತ್ತದೆ. ಕಾರ್ಯಾಂಗೋಡು ಹೊಳೆ ತೇಜಸ್ವಿನಿ ನದಿಯ ವೀರಮಲ ಬೆಟ್ಟದ ತಟ ಪ್ರದೇಶವನ್ನು ಹಾದು ಹೋಗು ತ್ತದೆ. ರಾ.ಹೆ 66 ರ ಸಮೀಪವಿರುವ ವೀರಮಲ ಐತಿಹಾಸಿಕ ವಾಗಿಯೂ ವಾಣಿಜ್ಯ ವ್ಯಾಪಾರ ಹೊಂದಿದ್ದ ಪ್ರದೇಶ ವಾಗಿತ್ತು. ಚೆರವತ್ತೂರು ಪೇಟೆಯು ಕಾಞಂಗಾಡಿನಿಂದ 16 ಕಿ.ಮೀ ದೂರವಿದ್ದು, ಬೇಕಲ ಕೋಟೆಯಿಂದ 29 ಕಿ.ಮೀ ದೂರ ವಿದೆ. ಪ್ರಸ್ತುತ ರಾಜ್ಯ ಸರಕಾರವು ವೀರಮಲ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಜಿಲ್ಲೆಯ ಐತಿಹಾಸಿಕ ಕೋಟೆ ಕೊತ್ತಲಗಳು, ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಸಹಿತ ಜಿಲ್ಲೆಯ ಹಿನ್ನೀರ ನದಿಗಳು ಪ್ರವಾಸಿ ಆಕರ್ಷಣೆಯಾಗಿದೆ.

ವೀರಮಲ ಪ್ರದೇಶವನ್ನು ಪ್ರವಾಸಿ ಆಕರ್ಷಣೆಯ ಕೇಂದ್ರ ವಾಗಿಸಲು ನಿಸರ್ಗ ರಮಣೀಯ ಸ್ಥಳವನ್ನು ಉನ್ನತ ಅಧಿಕಾರಿಗಳ ತಂಡ ವೀರಮಲ ಪ್ರದೇಶದ ಪ್ರವಾಸಿ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಿದೆ. ಕೋಟೆಯನ್ನು ಹೊರತುಪಡಿಸಿ ಉಳಿದ ಸ್ಥಳದಲ್ಲಿ ಪ್ರವಾಸಿಗರಿಗೆ ಅನುಕೂಲಕರ ವಾಗಿರುವ ನಿಟ್ಟಿನಲ್ಲಿ ಉದ್ಯಾನವನ್ನು ನಿರ್ಮಿಸಲಾಗುವುದು. ವೀರಮಲಕುನ್ನು ಪ್ರದೇಶದ 44 ಎಕರೆ ಭೂ ಪ್ರದೇಶ ಸಾಮೂಹಿಕ ಅರಣ್ಯದ ಭಾಗವಾಗಿದೆ. ಉಳಿದ 10 ಎಕರೆ ಭೂ ಪ್ರದೇಶ ಕಂದಾಯ ಇಲಾಖೆ ಅಧೀನದಲ್ಲಿದೆ. ಈ ಎರಡು ಸ್ಥಳಗಳನ್ನು ಸೇರಿಸಿ ಪ್ರವಾಸಿ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು. ಸಾರ್ವಜನಿಕರ ಸಹಾಯದೊಂದಿಗೆ ಪ್ರದೇಶದ ಎರಡು ಕಿ.ಮೀ ವ್ಯಾಪ್ತಿಯಲ್ಲಿನ ಜನರ ಸಹಭಾಗಿತ್ವದೊಂದಿಗೆ ವನ ಸಂರಕ್ಷಣ ಸಮಿತಿ ರಚಿಸಲಾಗುವುದು. ತದನಂತರ ಒಂದು ತಿಂಗ ಳೊಳಗಾಗಿ ತೆಯ್ಯಂ, ಭಾಷಾ ಗ್ಯಾಲರಿ, ಹಿರಿಯ ನಾಗರಿಕರಿಗಾಗಿ ವಿಶ್ರಮ ಕೇಂದ್ರ, ತೇಜಸ್ವಿನಿ ನದಿ ತೀರದ ಪ್ರವಾಸಿ ಸಾಧ್ಯತೆಗಳು ಸಹಿತ ಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ವೈವಿಧ್ಯಮಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಮಾದರಿ ಗ್ರಾಮವನ್ನು ಅನಾವರಣಗೊಳಿಸಲಾಗುವುದು. ನೀಲೇಶ್ವರ ನಗರ ಸಭೆ, ಕಯ್ಯೂರುಚೀಮೇನಿ ಗ್ರಾ.ಪಂ, ಪಿಲಿಕೋಡ್, ಚೆರು ವತ್ತೂರು ಗ್ರಾ.ಪಂ ಗಳಲ್ಲಿನ ಪ್ರವಾಸಿ ಸಾಧ್ಯತೆಗಳನ್ನು ಟೂರಿಸಂ ಸರ್ಕ್ಯೂಟ್ ಒಳಗೆ ಸೇರ್ಪಡೆಗೊಳಿಸಲಾಗುವುದು, ವೀರಮಲ ಪ್ರವಾಸಿ ಕೇಂದ್ರವಾಗಿಸಲು ಅಗತ್ಯವಿರುವ ಎಲ್ಲ ಕ್ರಮ ಗಳನ್ನು ಕೈಗೊಳ್ಳಲಾಗುವುದು ಎಂದು ತ್ರಿಕರಿಪುರ ಶಾಸಕ ಎಂ.ರಾಜಗೋಪಾಲ್ ಭರವಸೆಯನ್ನಿತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close