ಅಂಬಿಪುತ್ರನ ಚೊಚ್ಚಲ ಚಿತ್ರಕ್ಕೆ ಚೇತನ್ ಸಾರಥ್ಯ

Posted In : ಸಿನಿಮಾ ಸಮಾಚಾರ

ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕರೆತರುವ ಕಸರತ್ತು ಜೋರಾಗಿ ನಡೆಯು ತ್ತಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಂಬಿ ಪುತ್ರನ ಹೊಸ ಚಿತ್ರ ನಿರ್ಮಾಣ ವಾಗುವುದು ಬಹು ತೇಕ ಖಚಿತವಾಗಿದ್ದು, ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಜೋರಾಗಿ ನಡೆಯುತ್ತಿದೆ.

ಇನ್ನು ಈ ಮೊದಲು ಅಭಿಷೇಕ್ ಗೌಡ ಅವರ ಚೊಚ್ಚಲ ಚಿತ್ರವನ್ನು ಯುವ ನಿರ್ದೇಶಕ ಪವನ್ ಒಡೆಯರ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಗಾಂಧಿನಗರದ ಮೂಲಗಳ ಪ್ರಕಾರ, ಹೊಸ ಬೆಳವಣಿಗೆಯಲ್ಲಿ ಚಿತ್ರದ ನಿರ್ದೇಶನದ ಜವಾಬ್ದಾರಿ ಪವನ್ ಒಡೆಯರ್ ಅವರಿಂದ ಬಹದ್ದೂರ್ ಚೇತನ್ ಅವರ ಹೆಗಲಿಗೆ ಏರಿದೆಯಂತೆ.

ಪವನ್ ಒಡೆಯರ್ ಸದ್ಯಕ್ಕೆ ಬೇರೊಂದು ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿರುವುದರಿಂದ, ಸಮಯಾವಕಾಶ ಮತ್ತು ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಚೇತನ್ ಕುಮಾರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿರುವ ಸಂದೇಶ್ ಪ್ರೊಡಕ್ಷನ್ಸ್, ಶೀಘ್ರದಲ್ಲಿಯೇ ಚಿತ್ರದ ಬೆಳವಣಿಗೆ ಮತ್ತು ಇತರ ಸಂಗತಿಗಳ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದಿದೆ.

ಚೇತನ್ ಕುಮಾರ್ ಅವರ ಚಿತ್ರಕಥೆಯನ್ನೇ ಈ ಚಿತ್ರದಲ್ಲಿ ಬಳಸಲಾಗುತ್ತಿದ್ದು, ಔಟ್ ಅಂಡ್ ಔಟ್ ಮಾಸ್ ಕಮರ್ಷಿಯಲ್ ಎಲಿಮೆಂಟ್ಸ್ ಈ ಸಿನಿಮಾದಲ್ಲಿರಲಿದೆ. ಚೇತನ್ ಅವರ ನಿರೂಪಣೆ ಶೈಲಿ ಕೂಡ ನಿರ್ಮಾಪಕರಿಗೆ ಇಷ್ಟವಾಗಿದ್ದು, ಅದೇ ರೀತಿಯಲ್ಲಿ ಸಿನಿಮಾ ಬಂದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ನಿರ್ಮಾಪಕರದ್ದಾಗಿದೆ ಎನ್ನಲಾಗುತ್ತಿದೆ.

ಈಗಾಗಲೇ ಹಲವು ಚಿತ್ರಗಳಿಗೆ ಸಂಭಾಷಣೆ, ಸಾಹಿತ್ಯ ಜತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಚೇತನ್ ಕುಮಾರ್, ‘ಬಹ ದ್ದೂರ್’ ಮತ್ತು ‘ಭರ್ಜರಿ’ ಎಂಬ ಎರಡು ಹಿಟ್ ಚಿತ್ರಗಳನ್ನು ಬ್ಯಾಕ್ ಟು ಬ್ಯಾಕ್ ನೀಡುವ ಮೂಲಕ ಸ್ಟಾರ್ ನಿರ್ದೇಶಕ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಇನ್ನು ದರ್ಶನ್ ಅಭಿನಯದ, 51ನೇ ಇನ್ನೂ ಹೆಸರಿಡದ ಚಿತ್ರಕ್ಕೆ ಕೂಡ ಚೇತನ್ ಸಂಭಾಷಣೆ ಬರೆಯು ತ್ತಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ಯುಗಾದಿ ವೇಳೆಗೆ ಅಂಬಿ ಪುತ್ರನ ಹೊಸ ಚಿತ್ರ ಅಧಿಕೃತವಾಗಿ ಸೆಟ್ಟೇರ ಲಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

nineteen + one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top