About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಚೇತೇಶ್ವರ ಪೂಜಾರ, ರಿಷಬ್ ಪಂತ್ ಶತಕ: 622ರನ್​ ಗಳಿಸಿ ಡಿಕ್ಲೇರ್​ ಮಾಡಿದ ಭಾರತ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್​​-ಗವಾಸ್ಕರ್​ ಟ್ರೋಫಿಯ ಕೊನೆ ಟೆಸ್ಟ್​ ಪಂದ್ಯದಲ್ಲಿ 622 ರನ್​ಗಳಿಗೆ ಟೀಂ ಇಂಡಿಯಾ ಡಿಕ್ಲೇರ್​ ಮಾಡಿಕೊಂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಭಾರತ ಉತ್ತಮ ಆರಂಭದೊಂದಿಗೆ ಬೃಹತ್​ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. 7 ವಿಕೆಟ್ ನಷ್ಟಕ್ಕೆ 622 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ 193 ರನ್ ಹಾಗೂ ರಿಷಬ್ ಪಂತ್ ಅಜೇಯ 159 ರನ್ ಪೇರಿಸಿದ್ದು ಟೀಂ ಇಂಡಿಯಾ ಅಧಿಕ ಮೊತ್ತ ಪೇರಿಸಲು ಸಾಧ್ಯವಾಯಿತು. ಮಾಯಾಂಕ್ ಅಗರವಾಲ್ 77, ವಿರಾಟ್ ಕೊಹ್ಲಿ 23, ಅಜಿಂಕ್ಯ ರಹಾನೆ 18, ಹನುಮ ವಿಹಾರಿ 42 ಹಾಗೂ ರವೀಂದ್ರ ಜಡೇಜಾ 81 ರನ್ ಗಳಿಂದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಆಸೀಸ್ ಪರ ನೇಥನ್ ಲಿಯಾನ್​ 4, ಜೋಶ್ ಹೇಜಲ್​ವುಡ್​​ 2 ಹಾಗೂ ಮಿಚಲ್ ಸ್ಟಾರ್ಕ್ಸ್​ 1 ವಿಕೆಟ್ ಪಡೆದುಕೊಂಡರು.  ಆಸ್ಟ್ರೇಲಿಯಾ ಪರ ಹ್ಯಾರಿಸ್​ ಮತ್ತು ಕವಾಜಾ ಬ್ಯಾಟಿಂಗ್​ ಆರಂಭಿಸಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ 10 ಓವರ್​ಗಳಲ್ಲಿ 24 ರನ್​ ಗಳಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close