About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಛತ್ತೀಸ್‍ಗಢದಲ್ಲಿ ಪ್ರಧಾನಿ ರ್ಯಾಲಿ, ರಾಹುಲ್ ರೋಡ್ ಶೋ

ರಾಯ್ಪುರ್: ಪಂಚರಾಜ್ಯಗಳ ಚುನಾವಣೆ ಕಾವು ಜೋರಾಗುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ಪ್ರಚಾರದಲ್ಲಿ ತೊಡಗಿವೆ.

ಛತ್ತೀಸ್‍ಗಢದಲ್ಲಿ ಇಂದು ಪ್ರಧಾನಿ ನರೇಂದ್ರಮೋದಿ ಹಾಗು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಬಸ್ಟರ್ ಜಿಲ್ಲೆಯ ಜಗದಲ್ಪುರ್ ನಲ್ಲಿ ಪ್ರಧಾನಿ ರ್ಯಾಲಿ ನಡೆಸಲಿದ್ದಾರೆ. ಇನ್ನು ಎರಡು ದಿನದ ಛತ್ತೀಸ್‍ಗಢ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ಮುಖ್ಯಮಂತ್ರಿ ರಮಣ್ ಸಿಂಗ್ ಕ್ಷೇತ್ರವಾದ ರಾಜ್ನಂದಗಾವ್ ನಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಪ್ರಧಾನಿ ಮೋದಿ ರಾಯ್ಪುರ್  ವಿಮಾನನಿಲ್ದಾಣಕ್ಕೆ ಬೆಳಗ್ಗೆ 11.20ರ ವೇಳೆಗೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮುಖಾಂತರ ಜಗದಲ್ಪುರ್ ತೆರಳಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 2ಗಂಟೆಗೆ ಪ್ರಧಾನಿ ವಾಪಸ್ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags

Related Articles

Leave a Reply

Your email address will not be published. Required fields are marked *

Language
Close