About Us Advertise with us Be a Reporter E-Paper

Breaking Newsದೇಶಪ್ರಚಲಿತ

30 ವರ್ಷಗಳಿಂದ ಕೇವಲ ಟೀ ಕುಡಿದೇ ಬದುಕಿದ್ದಾಳೆ ಈಕೆ….!

ಕೊರಿಯಾ: ಚಳಿಗಾಲದಲ್ಲಿ ಒಂದು ಕಪ್ ಬಿಸಿ ಬಿಸಿ ಟೀ ಕುಡಿಯುವುದಕ್ಕಿಂತ ಯಾವುದು ಹೆಚ್ಚು ಸುಖ ಕೊಡುವುದಿಲ್ಲ, ಆದರೆ ಒಬ್ಬ ವ್ಯಕ್ತಿ 30 ವರ್ಷಗಳಿಂದ ಕೇವಲ ಟೀ ಕುಡಿದೇ ಬದುಕಿರಲು ಸಾಧ್ಯವೇ?

ಛತ್ತೀಸ್‌ಗಢ್‌ದ ಕೊರಿಯಾ ಜಿಲ್ಲೆಯ ಬರಾಡಿಯಾ ಗ್ರಾಮದಲ್ಲಿ ಪಿಲ್ಲೀ ದೇವಿ ಎಂಬ ಮಹಿಳೆ ಕಳೆದ 33 ವರ್ಷಗಳಿಂದ ಬರೀ ಟೀ ಕುಡಿದುಕೊಂಡಿದ್ದಾಳೆ, ಕೇವಲ ಬದುಕಿರುವುದು ಮಾತ್ರವಲ್ಲ , ಅವರು ಉತ್ತಮ ಆರೋಗ್ಯವನ್ನೂ ಹೊಂದಿದ್ದಾಳೆ.

ಪಿಲ್ಲೀ ದೇವಿ ತಾನು 11 ವರ್ಷದವಳಿದ್ದಗ ಸೇವನೆ ತ್ಯಜಿಸಿದ ಅಂದಿನಿಂದ ಆಕೆ ಟೀ ಕುಡಿದೇ ಬದುಕುತ್ತಿದ್ದಾಳೆ, ಅದಾಗಿ ಈಗ 33 ವರ್ಷಗಳು ಕಳೆದು ಹೋಗಿವೆ. ಆದರೆ ಪಿಲ್ಲೀ ದೇವಿ ಇಂದಿಗೂ ಅನ್ನಾಹಾರ ಸೇವಿಸುವುದಿಲ್ಲ, ನೀರನ್ನೂ ಕುಡಿಯುವುದಿಲ್ಲ, ಆಕೆ ಸೇವಿಸುವುದು ಕೇವಲ ಟೀ ಮಾತ್ರ ಹಾಗಾಗಿ ಆಕೆ ಗ್ರಾಮದಲ್ಲಿ ಚಾಯ್ ವಾಲ್ ಚಾಚಿ ಎಂದೇ ಪ್ರಸಿದ್ದವಾಗಿದ್ದಾರೆ.

ಆಕೆ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಯಾವುದೇ ಆಹಾರ ಸೇವಿಸದಿರಲು ನಿರ್ಧರಿಸಿದಳು, ಅಂದಿನಿಂದ ಆಕೆ ಏನನ್ನೂ ಸೇವಿಸುತ್ತಿಲ್ಲ, ಹಾಗೇ ಒಂದು ಪಿಲ್ಲೀ ಪಾಟ್ನಾ ಶಾಲೆಯ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ತೆರಳಿದ್ದಳು, ಅಂದು ವಾಪಸ್ ಬಂದಾಗಿನಿಂದ ಆಕೆ ನೀರು ಮತ್ತು ಆಹಾರ ತ್ಯಜಿಸಿದಳು ಎಂದು ಆಕೆಯ ತಂದೆ ರತಿ ರಾಮ್ ಹೇಳಿದ್ದಾರೆ.

ಮೊದಲಿಗೆ ಟೀ ಜೊತೆ ಬಿಸ್ಕಿಟ್ಸ್ ಮತ್ತು ಬ್ರೆಡ್ ತಿನ್ನುತ್ತಿದ್ದಳು, ಕೆಲ ತಿಂಗಳ ನಂತರ ಅದನ್ನು ತಿನ್ನುವುದನ್ನು ಬಿಟ್ಟಳು, ನಂತರ ಆಕೆ ಯಾವುದಾದರೂ ರೋಗದಿಂದ ಬಳಲುತ್ತಿದ್ದಾಳೆಯೇ ಎಂಬ ಬಗ್ಗೆ ಆಕೆಯ ಸಹೋದರ ಬಿಹಾರ ಲಾಲ್ ರಾಜವಾಡೆ ಆಕೆಯನ್ನು ಬಳಿ ಪರೀಕ್ಷಿಸಿದ್ದಾರೆ, ಆದರೆ ಆಕೆಗೆ ಯಾವುದೇ ಕಾಯಿಲೆ ಇಲ್ಲ ಎಂದು ವೈದ್ಯರು ದೃಢ ಪಡಿಸಿದರು ಎಂದು ಆಕೆಯ ಸಹೋದರ ತಿಳಿಸಿದ್ದಾರೆ.

ಮತ್ತೆ ನಾವು ಆಕೆಯನ್ನು ಬೇರೆ ಬೇರೆ ವೈದ್ಯರಲ್ಲಿ ಒಯ್ದೆವು, ಆಕೆ ಟೀ ಮಾತ್ರವೇ ಯಾಕೆ ಸೇವಿಸುತ್ತಾಳೆ ಎಂಬುದಕ್ಕೆ ಯಾವ ವೈದ್ಯರಿಂದಲೂ ನಮಗೆ ಉತ್ತರ ಸಿಗಲಿಲ್ಲ. ಇಂದಿಗೂ ಅದು ನಮಗೆಲ್ಲ ನಿಗೂಢವೇ ಆಗಿದೆ. ಮನೆಯಿಂದ ಆಕೆ ಹೊರ ಹೊಗುವುದು ಅಪರೂಪ,ಯಾವಾಗಲೂ ಶಿವಧ್ಯಾನದಲ್ಲಿ ಮುಳುಗಿರುತ್ತಾಳೆ.

ನಿಜಕ್ಕೂ ಅಚ್ಚರಿಯ ವಿಷಯ: ಜಿಲ್ಲಾಸ್ಪತ್ರೆಯ ವೈದ್ಯ ಎಸ್ ಕೆ ಗುಪ್ತಾ
ಇದು ನಿಜಕ್ಕೂ ಅಚ್ಚರಿಯ ವಿಷಯ. ವೈಜ್ಞಾನಿಕವಾಗಿ ಹೇಳುವುದಾದರೆ ಯಾವುದೇ ಮನುಷ್ಯ 33 ವರ್ಷಗಳ ಕಾಲ ಟೀ ಕುಡಿದು ಬದುಕಿರಲು ಸಾಧ್ಯವಿಲ್ಲ. ನವರಾತ್ರಿಯ ವೇಳೆ 9 ದಿನ ಉಪವಾಸ ಮಾಡುವವರು ಟೀ ಮಾತ್ರವೇ ಕುಡಿದಿರುವುದು ಇದೆ. ಆದರೆ 33 ವರ್ಷ ಕಾಲ ಟೀ ಕುಡಿದೇ ಬದುಕಿರುವುದು ಅಸಾಧ್ಯ. ಇದೊಂದು ಅಚ್ಚರಿಯ, ನಿಗೂಢ ಸಂಗತಿ.

Tags

Related Articles

Leave a Reply

Your email address will not be published. Required fields are marked *

Language
Close