About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಒಂದಾದ ಎಸ್ಪಿ-ಬಿಸ್ಪಿ: ಕಾಂಗ್ರೆಸ್, ಬಿಜೆಪಿ ವಿರುದ್ಧ ರಣಕಹಳೆ

ಲಖನೌ: ಕಾಂಗ್ರೆಸ್, ಬಿಜೆಪಿಗೆ ಸಡ್ಡು ಹೊಡೆದು ಮೈತ್ರಿ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವ ಎಸ್​ಪಿ ಹಾಗೂ ಬಿಎಸ್​ಪಿ ಮುಖಂಡರಾದ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮೈತ್ರಿ ವಿಚಾರದ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಬಿಎಸ್​ಪಿ ಪಕ್ಷದ ಮಾಯಾವತಿ ಅವರು ಮಾತನಾಡಿ, ಬಿಜೆಪಿಯಂತಹ ಘೋರ ಜಾತಿವಾದಿ, ಸಂಪ್ರದಾಯವಾದಿ ಪಕ್ಷವನ್ನು ಹೊಡೆದೋಡಿಸಲು ಹೊಸ ಸರ್ಕಾರ ಬೇಕು. ಉತ್ತರಪ್ರದೇಶ ಸೇರಿ ಇಡೀ ರಾಷ್ಟ್ರದಲ್ಲಿ ಬಿಜೆಪಿಯನ್ನು ಮಣಿಸಬೇಕಿದೆ ಎಂದರು.

ಪ್ರಧಾನಿ ಮೋದಿ ಹಾಗೂ ಅಮಿತ್​ ಶಾರ ನಿದ್ದೆ ಕೆಡಿಸುತ್ತೇವೆ. ಬಾಬಾ ಸಾಹೇಬ ಅಂಬೇಡ್ಕರ್​ರ ಕನಸು ನನಸು ಮಾಡುತ್ತೇವೆ. ಎರಡು ಪಕ್ಷಗಳ ಈ ಮೈತ್ರಿ ಬಡವರ, ಯುವಕರ, ರೈತರ, ದಲಿತರ, ಶೋಷಿತರ, ಆದಿವಾಸಿ, ಅಲ್ಪಸಂಖ್ಯಾತರ ರಕ್ಷಣೆಗಾಗಿ ರೂಪುಗೊಂಡ ಒಂದು ಶಕ್ತಿಯಾಗಿದೆ. ಲೋಕಸಭೆ ಹಾಗೂ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸೋಲಿಸಲು ಎರಡು ಪಕ್ಷಗಳು ಒಂದಾಗಿ ಹೊಸ ಪರ್ವ ಆರಂಭಿಸಿದ್ದೇವೆ ಎಂದು ಹೇಳಿದರು. ಈ ಬಾರಿ ಉತ್ತರ ಪ್ರದೇಶದವರೇ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅಖಿಲೇಶ್ ಯಾದವ್, ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿ ತನಕ ಏನು ಮಾಡಿದೆ ಎಂದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ನಿಂದ ಯಾವುದೇ ಲಾಭವಿಲ್ಲ ಅದಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ಕಾಂಗ್ರೆಸ್ ಆಡಳಿತದಿಂದ ಭ್ರಷ್ಟಾಚಾರ, ಬಡತನ ಹೆಚ್ಚಾಗಿದೆ. ಬಿಜೆಪಿ, ಕಾಂಗ್ರೆಸ್​ ಕಂಪನಿಗಳ ಪರವಾಗಿವೆ. ಧರ್ಮದ ಹೆಸರಿನಲ್ಲಿ ಬಿಜೆಪಿ ಜನರಲ್ಲಿ ವೀಷ ಬೀಜ ಬಿತ್ತುತ್ತಿದೆ. ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಜನರ ಧಾರ್ಮಿಕ ಭಾವನೆಗಳ ಜತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅಮೇಥಿ ಹಾಗೂ ರಾಯ್‍ಬರೇಲಿ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಮಾಹಿತಿ ನೀಡಿದರು. ಎರಡೂ ಪಕ್ಷಗಳ ನಡುವೆ 76 ಕ್ಷೇತ್ರಗಳ ಹಂಚಿಕೆಯಾಗಿದೆ. 38 -38 ಸ್ಥಾನಗಳನ್ನು ಬಿಎಸ್​ಪಿ, ಎಸ್​ಪಿ ಸಮಾನವಾಗಿ ಹಂಚಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

Tags

Related Articles

Leave a Reply

Your email address will not be published. Required fields are marked *

Language
Close