About Us Advertise with us Be a Reporter E-Paper

ವಿ +

ಬಾಲ್ಯದ ಆಟ, ಆ ಹುಡುಗಾಟ..

• ವೀರೇಶ ಪಿ. ಅರ್ಕಸಾಲಿ

ಮಾನವನ ಬಾಲ್ಯವೆಂಬುವುದು ಅವಿ ಸ್ಮರಣೀಯ  ಶಿಕ್ಷಣ ಸಂಸ್ಕಾರ ಗಳೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸಮಯ. ಸಹಜ ತುಂಟಾಟ. ಸದ್ದು, ಗದ್ದಲಗಳ ಮುಖಾಂತರ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತ ಪ್ರಕೃತಿ ಯ ಸೌಂದರ್ಯ ಸವಿಯುತ್ತಾ ಚಿಟ್ಟೆಯಂತೆ ಹಾರಾಡಿಕೊಂಡು ಕಳೆಯುವ ಕಾಲ. ತಮ್ಮದೇ ಆದ ಲೋಕದಲ್ಲಿ ತುಂಟಾಟ ಮಾಡುತ್ತಾ ಅನೇಕರಿಂದ ಬೈಗುಳ, ಹೊಡೆತ ತಿಂದರೂ ಮುಂದಿನ ಭವಿಷ್ಯದ ಬಗ್ಗೆ ಕಿಂಚಿತ್ತೂ ಚಿಂತೆ ಯಿಲ್ಲದ ಮುಗ್ಧ ಮನಸ್ಸಿನ ವಯಸ್ಸದು.

ಹೀಗಾಗಿಯೇ ಬಾಲ್ಯದ ಬಗ್ಗೆ ನಮ್ಮ ಜನಪದರು ಸುಂದರವಾದ ಸಾಲುಗಳನ್ನು ನೀಡಿದ್ದಾರೆ.

 ಬಾ ನನ್ನ ಕಂದ ಅಂಗಾಲು ತೋಳದೇನ

ತೆಂಗಿನ ಕಾಯಿ ತಿಳಿ ನೀರು ತಕ್ಕೊಂಡು

ಬಂಗಾರ ಮೋರೆ ತೊಳದೇನ..’

ಬಾಲ್ಯದ ಬಗ್ಗೆ ಜನಪದರ ಈ ತ್ರಿಪದಿಯಲ್ಲಿ ತಾಯಿಗೆ ಮಗುವಿನ ಮೇಲಿನ ಪ್ರೀತಿ, ಕಾಳಜಿ, ಮುಗ್ಧತೆ ಕಾಣುತ್ತದೆ.

ಹಸಿಗೊಡೆಗೆ ಎಸೆದ ಕಲ್ಲು ಹೇಗೆ ಅಂಟಿಕೊಳ್ಳುವುದೋ ಹಾಗೇ ಮಕ್ಕಳ ಮನಸ್ಸು. ಎಳೆಯ ವಯಸ್ಸಿನ ಮಕ್ಕಳಿಗೆ ಅವರ ಭವಿಷ್ಯಕ್ಕೆ ದಾರಿ ದೀಪವಾಗುವ ಶಿಕ್ಷಣ, ಸಂಸ್ಕಾರ ನೀಡುವ ಜವಾಬ್ದಾರಿ ಹೆತ್ತವರ ಮೇಲಿದೆ. ಇಂದಿನ ಮಕ್ಕಳು ಆಧುನಿಕ  ಭರಾಟೆಯಲ್ಲಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರನ್ನು ಕಾಪಾಡಬೇಕಿದೆ.

ನಾವು ಚಿಕ್ಕವರಿದ್ದಾಗ ಶಾಲೆ ಮುಖ ನೋಡಿದ್ದೆ ಕಡಿಮೆ. ಯಾವಾಗಲೂ  ಬರಿ ಆಟ, ಜಗಳ ಗದ್ದಲ ಇದರೆಲ್ಲೇ ಬಾಲ್ಯ ಕಳೆದು ಬಿಟ್ಟೆವು. ನಮ್ಮ ಬಾಲ್ಯದ ದಿನಗಳ ಆಟಗ ಳೆಂದರೆ ಚೌಕಾಬಾರ, ಲಗೋರಿ, ಬುಗುರಿ, ಕಳ್ಳ- ಪೊಲೀಸ್, ಆಣೆ-ಕಲ್ಲು, ಹುಲಿಮನಿ,  ಗೋಲಿಯಾಟ, ಡಬ್ಬಾಡುಬ್ಬಿ, ಮುಟ್ಟಾಟ, ಜಾರಗುಂಡಿ, ಹೇಳುತ್ತಾ ಹೋದರೆ ಲೆಕ್ಕಕ್ಕೆ ಸಿಗದಷ್ಟು ಆಟಗಳು. ಇಂದು ಮಕ್ಕಳು ಮನೆಯಿಂದ ಹೊರಗೆ ಹೆಜ್ಜೆ  ದೊಡ್ಡ ಸಂಗತಿ. ಅಂಥದ್ದರಲ್ಲಿ ಹೆಚ್ಚಿನ ಗ್ರಾಮೀಣ ಕ್ರೀಡೆಗಳು ಕೇವಲ ನಾಮಮಾತ್ರಕ್ಕೆ ಸೀಮಿತವಾಗಿವೆ. ಕಾರಣ ಸಾಮಾಜಿಕ ಜಾಲತಾಣಗಳಂತಹ ಹೊಸ ತಂತ್ರಜ್ಞಾನಗಳ ಹಾವಳಿ ಎಂದರೂ ತಪ್ಪಾಗದು. ಮಕ್ಕಳ ಪರಿಸ್ಥಿತಿ ನೈಸರ್ಗಿಕ ಪ್ರಪಂಚದ ಪರಿಚಯ, ಜ್ಞಾನವಿಲ್ಲದೆ ಆಧುನಿಕ ಮಾಧ್ಯಮಗಳ ಬಳಕೆಯಲ್ಲೇ ದಿನ ಕಳೆಯುವಂತಾಗಿದೆ.

‘ಕೂಸು ಇದ್ದ ಮನೆಗೆ ಬಿಸಣಿಕೆ ಯಾತಕೇ

ಕೂಸು ಕಂದಯ್ಯ ಒಳಹೊರಗ ಆಡಿದರೇ

ಬಿಸಣಕಿ ಗಾಳಿ ಸುಳಿದ್ಹಾಂಗ..’

‘ನಾನು ಚಿಕ್ಕವನಿದ್ದಾಗ ಎಲ್ರೂ ಕೇಳ್ತಿದ್ರು ದೊಡ್ಡವ ನಾದ್ಮೇಲೆ ಏನಾಗ್ತೀಯಾ? ಅಂತ. ಅದಕ್ಕೆ  ಈಗ ಉತ್ತರ ಸಿಕ್ಕಿದೆ, ದೊಡ್ಡವನಾದ್ಮೇಲೆ ಏನಾಗ್ತಿಯಾ? ಅಂದರೆ ಮತ್ತೆ ಚಿಕ್ಕವನಾಗ್ತಿನಿ’. ಯಾಕಂದರೆ ಆ ಬಾಲ್ಯ ವನ್ನು ಮತ್ತೆ ಅನುಭವಿಸುವ ಕಾತರ. ಆಸೆ. ಹಂಬಲ.

ಪಾಲಕರಿಗೊಂದು ಕಿವಿಮಾತು

ಅರಳುವ ಹೂವನ್ನು ಬಾಡಿಸುವ ಕೆಲಸ ಪಾಲಕರದ್ದಾಗಬಾರದು. ಮಕ್ಕಳನ್ನು ಬರೀ ಓದು, ಬರೆಯುವುದರಲ್ಲಿಯೇ ಕಾಲ ಕಳೆದು, ಪರಿಸರದೊಂದಿಗೆ ಬೆರೆಯುವ ಚಟುವಟಿಕೆಗಳಿಂದ ದೂರ ಉಳಿಸುತ್ತಿ ದ್ದಾರೆಂಬುದು ದುರಂತವೇ ಸರಿ. ಅದರೆ ಪಠ್ಯಚಟುವಟಿಕೆ ಬೇಡವೆಂದೇನಲ್ಲ, ಪಠ್ಯ ಹಾಗೂ ಪಠ್ಯೇತರ ಎರಡೂ ಚಟುವಟಿಕೆಗಳಿಗೆ ಸಮವಾದ ಅವಕಾಶ ನೀಡಿ  ಸೃಜನಾತ್ಮಕ ಬೆಳವಣಿಗೆಯಲ್ಲಿ ನಾವೂ ಭಾಗಿಯಾಗೋಣ. ಆದರೆ ಅರಳುವ ಹೂವನ್ನು ಬಾಡುಸುವ ಕೆಲಸ ಪೋಷಕರಿಂದ ಆಗಬಾರದಲ್ಲವೆ!

Tags

Related Articles

Leave a Reply

Your email address will not be published. Required fields are marked *

Language
Close