About Us Advertise with us Be a Reporter E-Paper

ವಿ +

ಮಕ್ಕಳ ಪ್ರಪಂಚದಲ್ಲಿ ಮಕ್ಕಳು ಮಕ್ಕಳಾಗಿ ಉಳಿದಿಲ್ಲ !

• ಜಯಶ್ರೀ ಜೆ. ಅಬ್ಬಿಗೇರಿ

‘ಹದಿನೈದರ ವಯಸ್ಸಿನ ಮನೋಜ್ ಇದುವರೆಗೂ ಓದಿನಲ್ಲಿ ತುಂಬಾ ಮುಂದಿದ್ದವನು, ಇದ್ದಕ್ಕಿದ್ದಂತೆ ಓದಿನಲ್ಲಿ ಹಿಂದೆ ಬಿದ್ದಿದ್ದಾನೆ. ಮನೆಯಲ್ಲೂ ಅಷ್ಟೇನೂ ಚುರುಕಾಗಿರಲ್ಲ. ಸದಾ ಮೊಬೈಲ್‌ನಲ್ಲೇ ಮುಳುಗಿರ್ತಾನೆ. ಮಾತನಾಡಿಸಿದರೆ ರೇಗುತ್ತಾನೆ. ಮುಖ  ತನ್ನನ್ನು ತನ್ನಷ್ಟಕ್ಕೆ  ಬಿಡಿ ಅನ್ನೋ ತರ ವರ್ತಿಸುತ್ತಾನೆ’ ಎಂದು  ಮನೋಜ್‌ಳ ತಾಯಿಯ ಕಣ್ಣಲ್ಲಿ ನೀರು ಧಾರಾಕಾರ ನೀರು. ಕೇವಲ ಮನೋಜ್ ಮನೆಯಲ್ಲಿ  ಮಾತ್ರ ಹೀಗಲ್ಲ. ಹದಿ ಹರೆಯದ ಪ್ರತಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆ ಇದು.

ಮೊದಲೆಲ್ಲ ಮನೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ಹಿರಿ ಯರು ತಿದ್ದಿ ಬುದ್ಧಿ ಹೇಳಿದರೆ ಸಾಕು ಮಕ್ಕಳು ಮತ್ತೊಮ್ಮೆ ಅಂತ ತಪ್ಪು ಮಾಡುತ್ತಿರಲಿಲ್ಲ. ನೈತಿಕ ಮೌಲ್ಯಗಳನ್ನು ತುಂಬುವ ಸಲು ವಾಗಿಯೇ ಚಂದಮಾಮಾ ಪತ್ರಿಕೆಯಲ್ಲಿ ಬರುವ ಕತೆಗಳನ್ನು ಓದಲು ಹೇಳಿ ಕತೆಯ ನೀತಿಯನ್ನು ಮೇಲಿಂದ ಮೇಲೆ  ಳಿಂದಲೇ ಕೇಳುತ್ತಿದ್ದರು.ಅಜ್ಜ ಅಜ್ಜಿಯಂದಿರು ಹೇಳುವ ಕತೆ ಗಳನ್ನು ಕುತೂಹಲದಿಂದ ಮೈಯೆಲ್ಲ ಕೆವಿ ಮಾಡಿಕೊಂಡು ಕೇಳುತ್ತಿದ್ದರು. ಟಿವಿಯಲ್ಲಿ ವಾರಕ್ಕೊಮ್ಮೆ ಬರುತ್ತಿದ್ದ ರಾಮಾಯಣ, ಮಹಾಭಾರತ, ಬೇತಾಳನ ಕತೆಗಳನ್ನು ಎಲ್ಲರೂ ಜತೆಯಾಗಿ ಕೂತು ನೋಡಿ ನಲಿಯುತ್ತಿದ್ದರು. ಮಕ್ಕಳಿಗಾಗಿಯೇ ನಿರ್ಮಿಸಿದ ಬಾಲ ರಾಮಾಯಣ, ಬಾಲ ಭಾರತದಂತ ಸಿನಿಮಗಳನ್ನು ನೋಡಿ ಆನಂದಿಸುತ್ತಿದ್ದರು.

ಬಾಲ್ಯದ ಖುಷಿಯಿಂದ ವಂಚಿತರು

ಆದರೀಗ ಆ ಪರಿಸ್ಥಿತಿಯಿಲ್ಲ. ಮಕ್ಕಳು ಮುಗ್ಧತೆಯ ಮುದ್ದೆ ಗಳಾಗಿ ಉಳಿದಿಲ್ಲ. ಮಕ್ಕಳಿಗೆಂದೇ ಪ್ರಕಟಗೊಳ್ಳುತ್ತಿರುವ ಪತ್ರಿಕೆ ಗಳನ್ನು ಮಕ್ಕಳೇ ಓದುತ್ತಿಲ್ಲ.  ನಡೆಸಿದ ಅಧ್ಯಯನ ವೊಂದರ ಪ್ರಕಾರ 152 ದೇಶಗಳಲ್ಲಿ ಬಾಲ್ಯ ಹತ್ತರಿಂದ ಹನ್ನೆರಡು ವರ್ಷಗಳಲ್ಲಿ ಪೂರ್ಣವಾಗಿ ಬಿಡುತ್ತದೆ ಎಂಬ ಅಧಿಕೃತ ಮಾಹಿತಿ ಸಿಕ್ಕಿದೆ. ಅಲ್ಲದೇ ಮಕ್ಕಳು ಮನಸ್ಸನ್ನು ಉದ್ರೇಕಗೊಳಿಸುವ ಚಿತ್ರಗಳನ್ನು ಹಗಲು ರಾತ್ರಿಯೆನ್ನದೇ ವೀಕ್ಷಿಸುತ್ತಿದ್ದಾರೆ  ಮತ್ತು ವಿಕೃತ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿ ಗಳು ಹೊರ ಬಿದ್ದಿವೆ. ಈ ಎಲ್ಲ ಅಪಾಯಕಾರಿ ಬೆಳವಣಿಗೆಯಲ್ಲಿ ಅಂತರ್ಜಾಲದ ಪಾತ್ರ ಸಿಂಹಪಾಲು ಎಂಬುದೂ ತಿಳಿದು ಬಂದಿದೆ. ಮಕ್ಕಳ ಆಟದ ಬೊಂಬೆಗಳಲ್ಲೂ ಲೈಂಗಿಕ ಕೋನಕ್ಕೆ  ನೀಡಲಾಗುತ್ತಿದೆ ಎನ್ನುವ ವಿಷಯವನ್ನು  ಕ್ಯಾಲಿಪೋರ್ನಿಯಾದ ರಾಬರ್ಟ್ ವಿನ್ನಾಸ ಇತ್ತೀಚಿಗೆ ಬಹಿರಂಗಗೊಳಿಸಿದ್ದಾರೆ. ಎಂಟನೇ ವರ್ಷಕ್ಕೆ ಹುಡುಗಿಯರಿಗೆ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಮೂಡುತ್ತಿದೆ. ಗಂಡು ಹುಡುಗರಲ್ಲಿ ಹುಡುಗಿಯರನ್ನು ಸೆಳೆ ಯಲು ಮಾಡುವ ಕಸರತ್ತುಗಳು ಪ್ರಾರಂಭವಾಗುತ್ತಿದೆ. ಓದಿನಲ್ಲಿ ಏಕಾಗ್ರತೆಯನ್ನು ಇದು ಕಡಿಮೆ ಮಾಡಿ ಬಾಲ್ಯದ ಖುಷಿಯನ್ನು ಅನುಭವಿಸದಂತೆ ಮಾಡುತ್ತಿವೆ.

ಫೇಸ್ ಬುಕ್, ವಾಟ್ಸಪ್, ಟ್ವಿಟರ್‌ಗಳಲ್ಲಿ ಮಧ್ಯರಾತ್ರಿಯ ನಂತರವೂ ಚಾಟಿಂಗ್, ನೀಲಿ ಚಿತ್ರಗಳ ವಿನಿಮಯ ನಡೆಯು ತ್ತಿದೆ.  ಇವೆಲ್ಲ ಕಹಿ ಬೆಳವಣಿಗೆಗಳು ಮಕ್ಕಳ  ಸುಂದರ ಬಾಲ್ಯದ ಮೇಲೆ  ಛಾಯೆ ಮೂಡಿಸಿ ಬಲವಾದ ಪೆಟ್ಟು ನೀಡುತ್ತಿವೆ. ತಮ್ಮ ವಯಸ್ಸಿಗೂ ಮೀರಿದ ಲೈಂಗಿಕ ಕ್ರಿಯೆಗಳಲ್ಲಿಯೂ ಸಹ ಭಾಗವಹಿ ಸುತ್ತಿರುವುದು ನಿಜಕ್ಕೂ ನಾಗರಿಕ ಸಮಾಜವನ್ನು ಚಿಂತೆಗೆ ತಳ್ಳಿವೆ. ಬೆಳೆಯುವ ವಯಸ್ಸಿನಲ್ಲೇ ಹಾಳಾಗುತ್ತಿರುವ ಮುಂದಿನ ಭವಿಷ್ಯದ ಬಗ್ಗೆ  ಚಿಂತಿಸಲೇಬೇಕಾದ ಪರಿಸ್ಥಿತಿ ಬಂದೊದಗಿದೆ.

ಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಬಾಲ್ಯದ ಅತ್ಯದ್ಭುತ ಅಚ್ಚರಿಯ ಲೋಕದಲ್ಲಿ ಇಂಥ ಬದಲಾ ವಣೆಗಳು ನಿಜಕ್ಕೂ ಅಪಾಯಕಾರಿ. ಮಕ್ಕಳು ತಮ್ಮ ಲೋಕದಲ್ಲೇ ಇರಲು ಇಷ್ಟ ಪಡುತ್ತಾರೆ.  ತನ್ನ ತವರಿಗೆ ಅಥವಾ ಬಂಧು ಬಾಂಧವರ ಊರಿಗೆ ಕಾರ್ಯಕ್ರಮಗಳಿಗೆ ಹಾಜರಾಗಲು ಕರೆದರೆ ಬರುವುದಿಲ್ಲ ಎನ್ನುವ ಹಟ ಹೆಚ್ಚಾಗುತ್ತಿದೆ. ಹಿರಿಯರ ಜತೆ ಬೆರೆಯಲು ಇಷ್ಟ ಪಡುತ್ತಿಲ್ಲ. ರಜೆಯ ದಿನ ರೂಮಿನಲ್ಲಿ ಸೇರಿ ಕೊಂಡು ಒಂಟಿಯಾಗಿ ವಿಡಿಯೋ ಗೇಮ್‌ಸ್  ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಹೆತ್ತವರೊಂದಿಗೆ ಬೆರೆತು ಖುಷಿಪಡಲು ಬಯ ಸುತ್ತಿಲ್ಲ.  ಸದಾ ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಹೊರಗಿನ ಪ್ರಪಂಚಕ್ಕೆ ಸುಮ್ಮನೇ ಅನಿವಾರ್ಯವಾಗಿ ಗೋಣು ಹಾಕುತ್ತಿದ್ದಾರೆ.

ಹೆತ್ತವರು ಹಿರಿಯರು ಶಿಕ್ಷಕರು ಹೇಳುವ  ಗಾಳಿಗೆ ತೂರಿ ಅನುಭದ ಹಿತನುಡಿಗಳಿಗೆ ಸಲಹೆಗಳಿಗೆ ಗೌರವ  ಅಲಕ್ಷಿಸುತ್ತಿದ್ದಾರೆ. ಮತ್ತು ಅರ್ಥವಿಲ್ಲದ ಅಸಂಬದ್ಧವೆನಿಸುವ  ಗೆಳೆಯರ ಮಾತುಗಳಿಗೆ ಹೂಂಗುಟ್ಟಿ ಚಾಚೂ ತಪ್ಪದೇ ಅದರಂತೇ ನಡೆಯಲೆತ್ನಿಸುತ್ತಿದ್ದಾರೆ.

ಮುಂದಾಗುವುದನ್ನು ಇಂದೇ ಅನುಭ ವಿಸಬೇಕು ಎನ್ನುವ ಅದಮ್ಯ ಹುಚ್ಚು ಹಂಬಲ ನಿಜ ಜೀವನದ ರಹಸ್ಯವನ್ನು ಮುಚ್ಚಿಟ್ಟುಕೊಳ್ಳಲಾರದ, ಜೀವನ ಪ್ರತಿ  ಉಳಿಸಿ ಕೊಳ್ಳಲಾಗದ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ಇದರಿಂದ ಕೇವಲ ಮಕ್ಕಳು ಮಾತ್ರವಲ್ಲ ಹೆತ್ತವರು, ಸಮಾಜ ಸಹ ತೊಂದರೆ ಗೀಡಾಗುವ ಪರಿಸ್ಥಿತಿ ಬಂದೊದಗುತ್ತದೆ. ಕಾರಣ ಮಕ್ಕಳನ್ನು  ಲೋಕ ದಲ್ಲಿ ಬೀಳದಂತೆ ಸಾಮಾಜಿಕ ಜಾಲ ತಾಣದಲ್ಲಿ ವಿಹರಿಸದಂತೆ ನೋಡಿಕೊಳ್ಳಬೇಕಿದೆ. ಮಾನವ  ಸಂಬಂಧಗಳ ಬೆಲೆಯನ್ನು ಅರ್ಥೈಸಿಕೊಳ್ಳುವಂತೆ  ಮಾಡಬೇಕಿದೆ.  ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತಿ.್ತ ಅಪಾಯಕ್ಕೆ ಸಿಲುಕುವ ಮುನ್ನವೇ ಉಪಾಯವಾಗಿ ಮಕ್ಕಳನ್ನು ರಕ್ಷಿಸೋಣ. ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸೋಣ.

Tags

Related Articles

Leave a Reply

Your email address will not be published. Required fields are marked *

Language
Close