lakshmi-electricals

ಅಭಿಮಾನಿಗಳ ಗಲಾಟೆ: ಲಾಠಿ ಚಾರ್ಜ್‌

Posted In : ರಾಜ್ಯ, ರಾಯಚೂರು

ರಾಯಚೂರು: ತೆಲುಗು ಚಿತ್ರರಂಗದ ಚಿರಂಜೀವಿ ಅಭಿನಯನದ ‌’ಖೈದಿ ನಂಬರ್ 150′ ಚಿತ್ರ ಬುಧವಾರ ದೇಶಾದ್ಯಂತ ಬಿಡುಗಡೆಯಾಗಲಿದೆ. ಇದಕ್ಕೆ ಸಂಬಂಧಿಸಿ, ರಾಯಚೂರಿನಲ್ಲಿ ಮಂಗಳವಾರ ರಾತ್ರಿ ಅಭಿಮಾನಿಗಳು ದಾಂಧಲೆ ನಡೆಸಿದ್ಧಾರೆ.

ಬುಧವಾರ ರಾತ್ರಿಯೇ ಚಿತ್ರ ಬಿಡುಗಡೆಗೆ ಒತ್ತಾಯಪಡಿಸಿದರೂ, ಮಾಲೀಕರು ನಿರಾಕರಿಸಿದಾಗ ಆಕ್ರೋಶಗೊಂಡ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಸ್ಥಳಕ್ಕಾಗಮಿಸಿದಾಗ, ಪೊಲೀಸರು ಹಾಗೂ ಅಭಿಮಾನಿಗಳ ಮಧ್ಯ ಮಾತಿನ ಚಕಮಕಿ ನಡೆದಿದೆ. ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪಶ್ಚಿಮ ಹಾಗೂ ಸದರ್ ಬಜಾರ್ ಪೊಲೀಸ್ ಠಾಣೆ ಪಿಎಸ್‌‌ಐ ವಾಹನಗಳು ಹಾಗೂ ಇಬ್ಬರು ಪಿಎಸ್‍ಐಗಳ ಮೇಲೂ ಕಲ್ಲು ತೂರಾಟ ನಡೆದಿದ್ದು, ಎರಡು ವಾಹನಗಳಿಗೆ ಹಾನಿಯಾಗಿದೆ.

ಘಟನೆ ಸಂಬಂಧಿಸಿ, 10ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಯರಗೇರಾ ಸಿಪಿಐ ಸುರೇಶ್‌ ತಳವಾರ ಗಾಯಗೊಂಡಿದ್ದಾರೆ. ಮಾರ್ಕೆಟ್ ಯಾರ್ಡ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

5 × five =

Loading

ಒತ್ತುವರಿ ತೆರವಿನಿಂದ ಬೆಂಗಳೂರಿನ ನೆರೆ ಸಮಸ್ಯೆೆ ಪರಿಹಾರವಾಗಬಲ್ಲದೇ?

Thank you for voting
You have already voted on this poll!
Please select an option!

vishwavani-timely-3

 
Back To Top