lakshmi-electricals

ನಾಡಗೀತೆಗೆ ಅಪಮಾನ: ಆಂಜನೇಯ ಗರಂ

Posted In : ಚಿತ್ರದುರ್ಗ, ರಾಜ್ಯ

ಚಿತ್ರದುರ್ಗ: ಇಲ್ಲಿ ನಡೆದ ಸಮಾರಂಭವೊಂದರಲ್ಲಿ ನಾಡಗೀತೆಗೆ ಅಪಮಾನ ಮಾಡಿದ ಪ್ರಕರಣವೊಂದು ಶನಿವಾರ ಬೆಳಕಿಗೆ ಬಂದಿದೆ.

ದಸರಾ ಕ್ರೀಡಾ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. 

ಕ್ರೀಡಾಪಟುಗಳು ನಾಡಗೀತೆ ಹಾಡುವಾಗ ಅರ್ಧಕ್ಕೆ ನಿಲ್ಲಿಸಿ ಅಪಮಾನ ಎಸಗಿದ್ದಾರೆ. ನಾಡಗೀತೆಗೆ ಅಪಮಾನವಾಗಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಆಂಜನೇಯ ಗರಂ ಆಗಿದ್ದು, ವಿದ್ಯಾರ್ಥಿಗಳಿಗೆ ನಾಡಗೀತೆ ಹೇಳಿಕೊಟ್ಟ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಯಾವ ಶಿಕ್ಷಕರಿಗೆ ನಾಡಗೀತೆ ಹಾಡಲು ಬರಲ್ಲ ಎಂಬುವುದನ್ನು ಪರಿಶೀಲಿಸಿ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿಗೆ ಸಚಿವರು ಸೂಚನೆ ನೀಡಿದ್ದಾರೆ. ಮಾತ್ರವಲ್ಲದೇ ನಾಡಗೀತೆಯನ್ನು ಲಯಬದ್ಧವಾಗಿ ಹಾಡುವಂತೆ ಸಲಹೆ ನೀಡಿದ್ದಾರೆ. 

Leave a Reply

Your email address will not be published. Required fields are marked *

6 − three =

 
Back To Top