About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಟ್ವಿಟರ್ ತುಂಬಾ ‘ಚೌಕಿದಾರರ’ ಗದ್ದಲ, ಅಂದು #ChaiPeCharcha ಇಂದು #ChowkidarPhirSe?

ಲೋಕಸಭಾ ರಣಾಂಗಣದಲ್ಲಿ ಅತಿ ದೊಡ್ಡ ಸಮರವೊಂದು ನಿರಿಕ್ಷಿತವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ರಂಗೇರುತ್ತಿದೆ.

ತಮ್ಮ ಮೇಲೆ ರಾಜಕೀಯ ಎದುರಾಳಿಗಳು ಬಳಸುವ ಪದಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಚಾಣಾಕ್ಷತನವನ್ನು ಪ್ರಧಾನಿ ಮೋದಿ ಮುಂದುವರೆಸಿದ್ದಾರೆ.

ಟ್ವಿಟರ್ ಕದನಭೂಮಿಗೆ ವಿನೂತನ ಆಯಾಮ ನೀಡಿದ ಪ್ರಧಾನಿ ಮೋದಿ, ತಮ್ಮ ಟ್ವಿಟ್ಟರ್ ಹ್ಯಾಂಡಲ್ ಹೆಸರನ್ನು ಚೌಕಿದಾರ್ ನರೇಂದ್ರ ಮೋದಿ ಎಂದು ಬದಲಿಸಿಕೊಂಡಿದ್ದಾರೆ. ಪ್ರಧಾನಿ ಹಾದಿಯಲ್ಲೇ ಸಾಗಿರುವ ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರು ಕೂಡ ತಮ್ಮ ಹೆಸರಿನ ಹಿಂದೆ ಚೌಕಿದಾರ್ ಸೇರಿಸಿಕೊಂಡಿದ್ದಾರೆ.

#ChowkidarPhirSe #MainBhiChowkidar ಎಂಬ ಟ್ರೆಂಡ್ ಭರ್ಜರಿಯಾಗಿ ಸದ್ದು ಮಾಡುತ್ತಿವೆ.

2014ರ ಚುನಾವಣೆ ಸಂದರ್ಭದಲ್ಲಿ ಮೋದಿರನ್ನು ಹೀಯಾಳಿಸಲು ‘ಚಾಯ್ವಾಲಾ’ ಎಂದು ಜರಿದಿದ್ದ ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ರೀತಿಯ ನಾಯಕರ ಹೇಳಿಕೆಗಳಿಗೆ ಪ್ರತಿಯಾಗಿ, ‘ಚಾಯ್ ಪೆ ಚರ್ಚಾ” ಕಾರ್ಯಕ್ರಮ ನಡೆಸುವ ಮೂಲಕ ಜನದನಿಯ ದಿಕ್ಕನ್ನೇ ಬದಲಿಸಲಾಗಿತ್ತು.

 

 

ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ‘ಚೌಕಿದಾರ್’ ಪದದ ಮೂಲಕ ನಿಂದಿಸಲು ಮುಂದಾದ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳಿಗೆ ಖುದ್ದು ಪ್ರಧಾನಿ ನೇತೃತ್ವದಲ್ಲಿ, ಅದೇ ‘ಚೌಕಿದಾರ’ ಪದದೊಂದಿಗೆ ತಿರುಗೇಟು ನಿಡಲು ಬಿಜೆಪಿ ನೇತೃತ್ವದ NDA ಕೂಟ ಹಾಗೂ ಅದರ ಬೆಂಬಲಿಗರು ಮುಂದಾಗಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close