lakshmi-electricals

ಸಂಸ್ಕೃತ ತಿರುಳು ತಿಳಿಸಿದರೆ ಭಾರತ ವಿಶ್ವಗುರು: ಸುಮಿತ್ರಾ ಮಹಾಜನ್

Posted In : ಉಡುಪಿ, ರಾಜ್ಯ

ಉಡುಪಿ:ಸಂಸ್ಕೃತದಲ್ಲಿರುವ ತಿರುಳನ್ನು ತಿಳಿಸಿದರೆ ಭಾರತ ಖಂಡಿತಾ ವಿಶ್ವಗುರು ಸ್ಥಾನದಲ್ಲಿರುತ್ತದೆ ಎಂದು ಲೋಕ ಸಭಾಧ್ಯಕ್ಷೆ ಸುಮಿತ್ರ ಮಹಾಜನ್ ಹೇಳಿದರು. ಪರ್ಯಾಯ ಪೇಜಾವರ ಶ್ರೀಕೃಷ್ಣಮಠ ಆಶ್ರಯದ ರಾಜಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಸಂಸ್ಕೃತ ಭಾರತೀ ನೇತೃತ್ವದ ಅಖಿಲ ಭಾರತ ಸಂಸ್ಕೃತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಥಿತಿಯಲ್ಲಿ ಭಾರತಕ್ಕೆ ಸಂಸ್ಕೃತದ ಅಗತ್ಯ ಬಹಳಷ್ಟಿದೆ. ಸಂಸ್ಕೃತ ಮೃತಭಾಷೆಯಲ್ಲ. ಅದೊಂದು ವೈಜ್ಞಾನಿಕ ಭಾಷೆ. ಅದರಲ್ಲಿ ತಂತ್ರಜ್ಞಾನ, ವಿಜ್ಞಾನ, ವೇದೋಪನಿಷತ್ತು, ಗೀತೆ ಎಲ್ಲವೂ ಇದೆ. ವಿಶ್ವ ಕಲ್ಯಾಣದ ಸೂತ್ರ ಸಂಸ್ಕೃತ ಭಾಷೆಯಲ್ಲಿ ಅಡಗಿದೆ. ಸಂಸ್ಕೃತದ ಬಹಳಷ್ಟು ಗ್ರಂಥಗಳ ಬಗ್ಗೆ ಇನ್ನೂ ಸಂಶೋಧನೆಗಳು ನಡೆದಿಲ್ಲ. ಆ ಕಾರ್ಯ ತುರ್ತಾಗಿ ಆಗಬೇಕಿದೆ. ಎಲ್ಲ ಗ್ರಂಥಗಳ ಸೂಕ್ತ ಅಧ್ಯಯನ ನಡೆಸಿ ಅದರ ತಿರುಳನ್ನು ತಿಳಿಸಿದಲ್ಲಿ ಭಾರತ ವಿಶ್ವಗುರು ಸ್ಥಾನದಲ್ಲಿರುತ್ತದೆ.

Leave a Reply

Your email address will not be published. Required fields are marked *

sixteen − fourteen =

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top