About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ವ್ಯವಸ್ಥೆಯನ್ನು ಟೀಕಿಸುತ್ತಾ ಕೂರುವ ಬದಲು ಸುಧಾರಣೆ ಮಾಡಲು ಮುಂದೆ ಬರಬೇಕಿದೆ: ದೀಪಕ್ ಮಿಶ್ರಾ

ದೆಹಲಿ: “ವ್ಯವಸ್ಥೆಯನ್ನು ಟೀಕಿಸುವುದು, ವಿರುದ್ಧ ಆಕ್ರಮಣ ಮಾಡುವುದು, ಧ್ವಂಸ ಮಾಡುವುದು ಬಲು ಸುಲಭ. ಆದರೆ ಅದನ್ನು ಸುಧಾರಿಸಿ ಮರಳಿ ಸರಿದಾರಿಗೆ ತರಲು ಯತ್ನಗಳನ್ನು ಮಾಡಬೇಕಿದೆ” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್‌ ಮಿಶ್ರಾ ತಿಳಿಸಿದ್ದಾರೆ.

“ನಮ್ಮ ಸಂಸ್ಥೆಯನ್ನು ದುರ್ಬಲಗೊಳಿಸಲು ಕೆಲ ಶಕ್ತಿಗಳು ನೋಡುತ್ತಿರಬಹುದು. ಆದರೆ ನ್ಯಾಯಾಂಗ ಮಣಿಯಲು ಎಂದಿಗೂ ಒಪ್ಪದು” ಎಂದು ಹೇಳಿದ ಮಿಶ್ರಾ, ನ್ಯಾಯಾಂಗ ವ್ಯವಸ್ಥೆಯ ಒಳಗಿನಿಂದ ಬರುತ್ತಿರುವ ಕೆಲ ಹಗೆ ಮಿಶ್ರಿತ ದನಿಗಳಿಗೆ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಹಾಗು ಸುಪ್ರೀಂ ಕೋರ್ಟ್ ಬಾರ್‌ ಸಂಘಟನೆಗಳಿಂದ ಆಯೋಜಿಸಲಾಗಿದ್ದ ಸ್ವತಂತ್ರ ದಿನಾಚರಣೆ ಪ್ರಯುಕ್ತ ಮಿಶ್ರಾ ಮಾತನಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close