About Us Advertise with us Be a Reporter E-Paper

ಅಂಕಣಗಳು

ಸ್ವಚ್ಛ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ಧಾರಿಯಾಗಲಿ

ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ

ಶೌಚಾಲಯದ ನಿರ್ಮಾಣ ಬಳಕೆ ಬಗ್ಗೆ ಎಷ್ಟೇ ಜಾಗೃತಿ, ಮಾಹಿತಿ ನೀಡುತ್ತಿದ್ದರೂ ಕೆಲವು ಕುಗ್ರಾಮಗಳನ್ನು ಅದು ತಲುಪುತ್ತಿಲ್ಲ. ಹಲವು ಕುಗ್ರಾಮಗಳಲ್ಲಿ ಇನ್ನೂ ಶೌಚಾಲಯವೂ ಇಲ್ಲ. ಇನ್ನು ಕೆಲವೆಡೆ ಇದ್ದರೂ ಬಳಕೆ ಆಗುತ್ತಿಲ್ಲ. ಗ್ರಾಮೀಣ ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರ ಸಂಪೂರ್ಣ ಸ್ವಚ್ಛತಾ ಆಂದೋಲನ 2005 ಅಕ್ಟೋಬರ್ 2 ರಂದು ಜಾರಿಗೊಳಿಸಿದೆ. ಕೇಂದ್ರ ಪುರಸ್ಕೃತ ಈ ಕಾರ್ಯಕ್ರಮವು, ಕಳೆದ ಹಲವು ವರ್ಷಗಳಿಂದ ಜಾರಿಯಲ್ಲಿದ್ದರೂ, ನಮ್ಮ ಗ್ರಾಮಗಳನ್ನು ಬಯಲು ಮಲ ವಿಸರ್ಜನೆ ಮುಕ್ತ ಗ್ರಾಮವನ್ನಾಗಿ ಮಾಡಲು ಇನ್ನೂ ಸಾಧ್ಯವಾಗುತ್ತಿಲ್ಲ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಸತತವಾಗಿ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದರೂ ಸಹ ಗಮನಾರ್ಹ ಪ್ರಗತಿಯಾಗುತ್ತಿಲ್ಲ. ಇದಕ್ಕೆ ಕಾರಣ ಸ್ವಚ್ಛತೆಯ ಬಗ್ಗೆ ಜನರ ಮನೋಭಾವ ಹಾಗೂ ಶೌಚಾಲಯ ಬೇಕೇ ಬೇಕೆಂಬ ಬಗ್ಗೆ ದೃಢ ನಿರ್ಧಾರ ಇರುವುದು.

ಶೌಚಾಲಯಗಳು ಇಂದು ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿವೆ ಎಂದರೆ ತಪ್ಪಾಗಲಾರದು. ಶೌಚಾಲಯಳು ಇಲ್ಲದೇ ಇರುವುದರಿಂದ ಗೌರವಕ್ಕೆ ಧಕ್ಕೆ ಬರುವಂತಹ ಸನ್ನಿವೇಶಗಳು ವರದಿಯಾಗುತ್ತಿವೆ. ಮನೆಯಲ್ಲಿ ಶೌಚಾಲಯವಿಲ್ಲದ್ದಕ್ಕೆ ವೃದ್ಧರು, ಗರ್ಭಿಣಿಯರು, ಬಾಣಂತಿಯರು, ಅಂಗವಿಕಲರು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಬಯಲಲ್ಲಿ ಮಲ ವಿಸರ್ಜನೆ ಮಾಡುವುದರಿಂದ ನಾವು ಸೇವಿಸುವ ನೀರು ಹಾಗೂ ಆಹಾರದಲ್ಲಿ ರೋಗಾಣುಗಳು ಬೆರೆತು ಭಯಾನಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆಯಲ್ಲದೇ ಪ್ರಾಣ ಹಾನಿಯೂ ಸಂಭವಿಸಬಹುದು. ಈ ಎಲ್ಲ ತೊಂರೆಗಳನ್ನು ನಾವು ಮನೆಯಲ್ಲಿ ಶೌಚಾಲಯನ್ನು ಏಕೆ ನಿರ್ಮಿಸಬಾರದು? ಇಂದಿನ ಜೀವನ ಶೈಲಿಯ ಭರಾಟೆಯ ಯುಗದಲ್ಲಿ ನಾವು ಮೊಬೈಲ್, ಮೋರ್ಟ ಬೈಕ್, ಟಿ.ವಿ, ಫ್ರಿಡ್‌ಜ್ ಮುಂತಾದ ಐಶಾರಾಮಿ ವಸ್ತು ಹಾಗೂ ಮಹಿಳೆಯರು ಅನವಶ್ಯಕ ವಿಲಾಸಿ ವಸ್ತುಗಳ ಖರೀದಿಗೆ ಹಣವ್ಯಯ ಮಾಡುತ್ತಿದ್ದೇವೆ. ಆದರೆ ಶೌಚಾಲಯ ನಿರ್ಮಾಣವೂ ಅದರಲ್ಲಿ ಒಂದು ಅಶ್ಯಕ ಬೇಡಿಕೆ ಎಂದು ಪರಿಗಣಿಸಬೇಕು. ಈ ಬಗ್ಗೆ ಜನರಲ್ಲಿ ಬದ್ಧತೆ ಬೆಳೆದಾಗ ಮಾತ್ರ ನಿರ್ಮಲ ಗ್ರಾಮದ ಕನಸು ನನಸಾಗಲು ಸಾಧ್ಯ.ನಮ್ಮ ಗಲ್ಲಿ, ನಮ್ಮ ನಮ್ಮ ಮೊಹಲ್ಲಾ, ನಮ್ಮ ಶಾಲೆ, ನಮ್ಮ ಊರು ಸ್ವಚ್ಛತೆಯಿಂದ ಕಂಗೊಳಿಸಬೇಕು. ಅದಕ್ಕಾಗಿ ರಾಷ್ಟ್ರದ ಪ್ರಜೆಗಳೆಲ್ಲರೂ ಕನಿಷ್ಟ ವಾರಕ್ಕೆ ಎರಡು ಗಂಟೆಗಳನ್ನಾದರೂ ಸ್ವಚ್ಛ ಭಾತಕ್ಕಾಗಿ ಮೀಸಲಿಡಬೇಕು. ಕೇವಲ ಮಾತಿನಲ್ಲಿ ಹೇಳದೇ ಗಾಂಧಿ ಜಯಂತಿಯಂದು ತಾವೇ ಮೊದಲಿಗರಾಗಿ ಪೊರಕೆ ಹಿಡಿದು ದೆಹಲಿಯ ಬೀದಿಗಳಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದ ಮೋದಿಯವರು, ಇದನ್ನು ಪ್ರಜೆಗಳೆಲ್ಲರೂ ಮುಂದುವರೆಸಿಕೊಂಡು ಹೋಗಬೇಕೆಂದು ಹೇಳಿದ್ದರು. ಪ್ರಧಾನಿ ಕರೆಕೊಟ್ಟ ನಂತರದ ಕೆಲವು ತಿಂಗಳುಗಳ ಕಾಲ ಈ ಸ್ವಚ್ಛ ಭಾರತದ ಉತ್ಸಾಹ ಇತ್ತೇ ವಿನ: ಅದು ನಮ್ಮ ದೈನಂದಿನ ಚಟುವಟಿಕೆಯ ಒಂದು ಭಾಗವಾಗಲೇ ಇಲ್ಲ. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನಾವು ಸ್ವಚ್ಛವಾಗಿಟ್ಟುಕೊಂಡರೂ ಸಾಕು. ಎಲ್ಲೆಲ್ಲೋ ಹೋಗಿ ಸ್ವಚ್ಛತಾ ಕಾರ್ಯ ಮಾಡಬೇಕಾಗಿಲ್ಲ. ಆದರೆ ಈಗೀಗ ನಾವು ನಿಧಾನಕ್ಕೆ ಈ ಅಭಿಯಾನವನ್ನು ಮರೆಯುತ್ತಿದ್ದೇವೇನೋ ಎಂದೆನಿಸುತ್ತಿದೆ.

ನಿಜ ಹೇಳಬೇಕೆಂದರೆ ಕೆಲವರಿಗೆ ಈ ಸ್ವಚ್ಛ ಭಾರತ ಅಭಿಯಾನ ಕೂಡಾ ಒಂದು ಶೋಕಿ. ಹಲವರು ಒಂದಷ್ಟು ಸಂಘಸಂಸ್ಥೆಗಳ ಹೆರಲ್ಲಿ ಯಾವಾಗಲೋ ಬಿಡುವಾದಾಗ ನಿರ್ದಿಷ್ಟ ತೆರಳಿ ಆ ಪ್ರದೇಶವನ್ನು ಶುಚಿಗೊಳಿಸಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರು ಆಯ್ಕೆ ಮಾಡಿಕೊಳ್ಳುವ ಸ್ಥಳ ಯಾವುದೋ ಪಾರ್ಕು,ದೇವಸ್ಥಾನದ ಮುಂಭಾಗ,ಊರಿನ ಬಸ್ ನಿಲ್ದಾಣ ಇಂಥ ಜನನಿಬಿಡ ಪ್ರದೇಶಗಳೇ ಆಗಿರುತ್ತವೆ.ಇಂಥ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ಮಾಡಿ ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡು ಅವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ,ಪತ್ರಿಕೆಗಳಲ್ಲಿ ಬರುವಂತೆ ಮಾಡಿ ಒಂದಷ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ.ಎಲ್ಲರೂ ಹಾಗೆ ಅಂತ ಅಲ್ಲ. ಆದರೆ ಇಂದು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವ ಬಹುತೇಕ ಸಂಘಟನೆಗಳ ಪ್ರಚಾರ ಪಡೆಯುವುದೇ ಆಗಿದೆಯೇನೋ ಎಂದೆನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇದರಲ್ಲಿ ನಾವೂ ಕೂಡಾ ಭಾಗಿಗಳಾಗುತ್ತೇವೆ. ಇನ್ನು ಕೆಲವು ರಾಜಕಾರಣಿಗಳಂತೂ ಪ್ರಚಾರ ಗಿಟ್ಟಿಸಿಕೊಳ್ಳಲು ಮೊದಲೇ ಸ್ವಚ್ಛವಾಗಿದ್ದ ಜಾಗದಲ್ಲಿ ಎಲ್ಲಿಂದಲೋ ತಂದು ಕಸ ಸುರಿಸಿ ಅದನ್ನು ಪೊರಕೆ ಹಿಡಿದು ಕ್ಲೀನ್ ಮಾಡುವ ನಾಟಕವಾಡಿ ಫೋಟೋ ತೆಗೆಸಿಕೊಂಡರು

ಪ್ರತಿ ಪಟ್ಟಣವನ್ನು ಗಮನದಲ್ಲಿ ಇಟ್ಟುಕೊಂಡು 2.5 ಲಕ್ಷ ಸಾಮೂಹಿಕ ಶೌಚಾಲಯಗಳು, 2.6 ಲಕ್ಷ ಸಾರ್ವಜನಿಕ ಶೌಚಾಲಯಗಳು ಹಾಗೂ ಘನ ತ್ಯಾಜ್ಯ ನಿರ್ವಹಣೆ ಸೌಲಭ್ಯ , 1.04 ಕುಟುಂಬಗಳಿಗೆ ಒದಗಿಸುವ ಗುರಿ ಹೊಂದಿದೆ. ಈ ಯೊಜನೆಯಡಿ, ಸಮುದಾಯ ಶೌಚಾಲಯಗಳನ್ನು ಪ್ರತಿಮನೆಯಲ್ಲಿ ನಿರ್ಮಿಸಲು ಕಷ್ಟವಾಗಿರುವಂತಹ ವಸತಿ ಪ್ರದೆಶಗಳಲ್ಲಿ ನಿರ್ಮಿಸಲಾಗುವುದು. ಸಾರ್ವಜನಿಕ ಶೌಚಾಲಯಗಳನ್ನು ಸಹ ಪ್ರವಾಸಿ ಸ್ಥಳಗಳು, ಮಾರುಕಟ್ಟೆಗಳು , ಬಸ್ ನಿಲ್ದಾಣಗಳಲ್ಲಿ , ರೈಲು ನಿಲ್ದಾಣಗಳು , ಇತ್ಯಾದಿ ಮಾಹಿತಿ ಗೊತ್ತುಪಡಿಸಿದ ಸ್ಥಳಗಳಲ್ಲಿ ನಿರ್ಮಿಸಲಾಗುವುದು. ಸುಮಾರು 4.401 ಪಟ್ಟಣಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ನಡೆಸುವ ಯೋಜನೆ ಆಗಿದೆ. ಸುಮಾರು 62,009 ಕೊಟಿ ರೂಪಯಿ ವೆಚ್ಹ ಆಗುವ ಸಾಧ್ಯತೆ ಇದೆ.ಕೆಂದ್ರವು 14.623 ಕೊಟಿ ಒದಗಿಸುವ ಸಾಧ್ಯತೆ ಇದೆ. ರು 14.623 ಕೊಟಿ ಕೆಂದ್ರದ ಪಾಲಿನಲ್ಲಿ ರು 7.366 ಕೊಟಿ ಯನ್ನು, ಭಾರಿ ತ್ಯಾಜ್ಯ ವಿಲೆವಾರಿಗೆ, ಮನೆಯ ಶೌಚಾಲಯಗಳಿಗೆ ರು 4.165 ಕೊಟಿ, ಸಾರ್ವಜನಿಕ ಜಾಗೃತಿಗೆ 1,828 ಕೊಟಿ ಮತ್ತು ಸಮುದಾಯ ಶೌಚಾಲಯಗಳಿಗೆ ರು 655 ಕೊಟಿ .ಖರ್ಚು ಮಾಡಲಾಗುವುದು. ಈ ಯೊಜನೆಯು ಬಯಲು ಮಲವಿಸರ್ಜನೆಯನ್ನು ನಿಲ್ಲಿಸುವುದು, ಅನಾರೊಗ್ಯಕರ ಶೌಚಾಲಯಗಳ ಪರಿವರ್ತನೆ ಒಳಗೊಂಡಿದೆ. ಒಂದು ಕಡೆ ಪ್ರಧಾನಿ ಸ್ವಚ್ಛ ಭಾರತಕ್ಕೆ ಕರೆಕೊಟ್ಟಿದ್ದಾರೆ. ಕಡೆ ನಾವು ಕಂಡ ಕಂಡಲ್ಲಿ ಉಗುಳುತ್ತಲೇ ಇದ್ದೇವೆ.ಅಂಗಡಿಯಲ್ಲಿ ಬಾಳೆಹಣ್ಣು ತಿಂದು ಸಿಪ್ಪೆಯನ್ನು ರಸ್ತೆಗೆ ಎಸೆಯುತ್ತಲೇ ಇದ್ದೇವೆ.ಬಸ್ ನಲ್ಲೇ ಕುಳಿತೊಂಡು ಚಿಪ್‌ಸ್ ತಿಂದು ಪ್ಯಾಕೆಟ್ ಅನ್ನು ಕಿಟಕಿಯಿಂದ ಕೆಳಗೆ ನಿಲ್ದಾಣಕ್ಕೆ ಎಸೆಯುತ್ತಲೇ ಇದ್ದೇವೆ. ಹೇಗಿದ್ದರೂ ಮಹಾನಗರ ಪಾಲಿಕೆಯ ಕಾರ್ಮಿಕರು ಅದನ್ನು ಸ್ವಚ್ಛಗೊಳಿಸಲಿಕ್ಕಾಗಿಯೇ ಇದ್ದಾರಲ್ಲ ಎಂಬ ಭಾವನೆ ನಮ್ಮದು‘ಸ್ವಚ್ಛತೆ ಕಾಪಾಡಿ’ ಎಂದು ಬರೆದಿದ್ದರೂ ಕಡ್ಲೆಕಾಯಿ ತಿಂದು ಸಿಪ್ಪೆಯನ್ನು ಬಸ್ ನೊಳಗೇ ಹಾಕುವ ಜನರು ಹಲವರಿದ್ದಾರೆ. ಎಲ್ಲರಿಗೂ ಕಾಣುವಂತೆ ಸ್ವಚ್ಛತೆ ಕಾಪಾಡಿ ಎಂದು ಸಾರ್ವಜನಿಕ ಶೌಚಾಲಯಗಳಲ್ಲಿ ಬರೆದಿದ್ದರೂ ಇನ್ನೂ ಅಲ್ಲಿನ ಗೋಡೆಗಳ ಮೇಲೆ ಬಾಯಿಗೆ ಬಂದದ್ದನ್ನು ಗೀಚುವ ಜನರು ಅನೇಕರಿದ್ದಾರೆ. ಇವೆಲ್ಲ ತುಂಬಾ ಸಣ್ಣ ಸಂಗತಿಗಳು ಅಂತ ನಮಗೆ ಅನ್ನಿಸಬಹುದು. ಆದರೆ ನಿಜವಾಗಿಯೂ ಸ್ವಚ್ಚಭಾರತ ಅಭಿಯಾನ ಯಶಸ್ವಿಯಾಗಬೇಕಾದರೆ ಇಂಥಹ ಸಣ್ಣ ಸಣ್ಣ ವಿಷಯಗಳಿಂದಲೇ ಸ್ವಚ್ಛತೆ ಆರಂಭವಾಗಬೇಕು.

ಸ್ವಚ್ಛತೆ ಎನ್ನುವುದು ಮೊದಲು ನಮ್ಮ ಮನಸ್ಸಿನಲ್ಲಿ ಬಂದರೆ ಒಳ್ಳೆಯದು. ಬಸ್ ನಿಲ್ದಾಣಗಳಲ್ಲಿ ಚಿಪ್ಸ್ ಪ್ಯಾಕೆಟ್ ಎಸೆಯುವ ಮುನ್ನ,ಶೌಚಾಲಯದ ಗೋಡೆಗಳ ಮೇಲೆ ಗೀಚುವ ಮುನ್ನ,ರಸ್ತೆ ಬದಿ ಮೂತ್ರವಿಸರ್ಜನೆ ಮುನ್ನ,ಕಂಡ ಕಂಡಲ್ಲಿ ಎಂಜಲು ತುಪ್ಪುವ ಮುನ್ನ, ಮನೆಯ ಕಸವನ್ನು ಇನ್ನೊಂದು ಬೀದಿಗೆ ತೆರಳಿ ರಸ್ತೆ ಪಕ್ಕದಲ್ಲಿ ಸುರಿಯುವ ಮುನ್ನ ನಾವು ಸ್ವಲ್ಪ ಆಲೋಚಿಸುವಂತಾದರೆ ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಕಷ್ಟವಿಲ್ಲ.ನಾನು ಮಾಡುತ್ತಿರುವುದು ಸರಿಯಿದೆಯಾ?ಇದರಿಂದ ಪರಿಸರದ ಸ್ವಚ್ಛತೆ ನಾಶವಾಗುವುದಿಲ್ಲವೇ?ದೇಶದ ಪ್ರಜೆಯಾಗಿ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನನ್ನ ಕರ್ತವ್ಯವಲ್ಲವೇ?ಇಂಥ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಎದ್ದರೆ ಕಂಡ ಕಂಡಲ್ಲಿ ಗಲೀಜು ಮಾಡುವ ಮುನ್ನ ನಾವು ಹಲವು ಬಾರಿ ಯೋಚಿಸುತ್ತೇವೆ.

ಸಿಂಗಾಪುರವನ್ನು ಜಗತ್ತಿನ ಅತೀ ಸ್ವಚ್ಛ ದೇಶ ಎಂದು ಕರೆಯುತ್ತಾರೆ. ಆ ದೇಶ ಅಷ್ಟು ಸ್ವಚ್ಛವಾಗಿರಲು ಯಾವನೋ ದೇವಪುರುಷ ಕಾರಣನಲ್ಲ.ಅಲ್ಲಿನ ಪ್ರಜೆಗಳೇ ಕಾರಣ.ಸ್ವಚ್ಛತೆ ಎನ್ನುವುದು ಅಲ್ಲಿನ ಜನರ ಮೈಮನಗಳಲ್ಲಿ ಹಾಸುಹೊಕ್ಕಾಗಿದೆ.

ಕಂಡ ಕಂಡಲ್ಲಿ ಉಗುಳುವುದು, ಕಸ ಹಾಕುವುದನ್ನು ಅಲ್ಲಿನ ಜನರು ಎಂದಿಗೂ ಮಾಡಲಾರರು. ಒಂದೊಮ್ಮೆ ಗಲೀಜು ಮಾಡಿದರೂ ತಕ್ಷಣವೇ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸುತ್ತಾರೆ. ಸಿಂಗಾಪುರ ಎಂದೆಲ್ಲ ಅನೇಕ ಪಾಶ್ಚಾತ್ಯ ದೇಶಗಳಲ್ಲೂ ಸ್ವಚ್ಛತೆಯ ಬಗ್ಗೆ ಜನರು ಬಹಳ ಜಾಗರೂಕರಾಗಿದ್ದಾರೆ. ನಮ್ಮ ದೇಶದಲ್ಲಿಯೂ ಅಷ್ಟೇ ಸ್ವಚ್ಛತೆ ನಮ್ಮೊಳಗಿಂದಲೇ ಬರಬೇಕು. ಸ್ವಚ್ಛತೆ ಎಂದರೆ ಕೈಗೆ ಕಟ್ಟಿಕೊಳ್ಳುವ ವಾಚ್ ನಂತಿರಬೇಕು. ಅಂದರೆ ಮೊಮೊದಲು ವಾಚ್ ಕಟ್ಟಿಕೊಳ್ಳಲು ಶುರು ಮಾಡಿದಾದ ವಾಚ್ ನಮ್ಮ ಕೈಮೇಲೆ ಇದ್ದಷ್ಟು ಹೊತ್ತೂ ಅದು ಇರುವುದು ನಮಗೆ ಗೊತ್ತಾಗುತ್ತದೆ. ಆದರೆ ದಿನ ಕಳೆದಂತೆ ಕೈಗೆ ಕಟ್ಟಿಕೊಳ್ಳುತ್ತೇವೆಯೇ ಹೊರತು ಅದು ಕೈಯಲ್ಲಿದೆ ಎಂದು ನಮಗೆ ಅನ್ನಿಸುವುದೇ ಇಲ್ಲ. ಸಮಯ ನೋಡುವಾಗ ಮಾತ್ರ ಅದರ ನೆನಪಾಗಿ ಕೈಗಡಿಯಾರ ನೋಡುತ್ತೇವೆ. ಸ್ವಚ್ಛತೆಯೂ ಹಾಗೆಯೇ, ಮೊದಮೊದಲು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು, ಓಡಾಡುವ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಶುಚಿಯಾಗಿಟ್ಟುಕೊಳ್ಳುವುದು ತುಸು ಕಠಿಣವಾಗಬಹುದು. ಆದರೆ ದಿನಗಳು ಕಳೆದಂತೆ, ಪ್ರತಿ ದಿನವೂ ನಾವು ಸ್ವಚ್ಛತೆ ಕಾಪಾಡಿಕೊಂಡು ಬಂದರೆ, ಅದು ನಮಗೇ ಅರಿವಿಲ್ಲದಂತೆ ನಮ್ಮ ಜೀವನದ ಒಂದು ಭಾಗವಾಗಿ ಬಿಡುತ್ತದೆ. ಆಗ ನಮಗೇ ಅರಿವಿಲ್ಲದಂತೆ ಚಿಪ್ಸ ಪ್ಯಾಕೆಟ್ ಅನ್ನು ರಸ್ತೆಗೆ ಎಸೆಯುವ ಬದಲು ಕಸದ ಬುಟ್ಟಿಗೆ ಹಾಕುತ್ತೇವೆ.

ಸ್ವಚ್ಛ ಭಾರತದ ಕಲ್ಪನೆ ಸಾಕಾರ ಆಗಬೇಕೆಂದರೆ, ಮೊತ್ತ ಮೊದಲು ಪ್ಲಾಸ್ಟಿಕ್ ಚೀಲಗಳನ್ನು ಮತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ತಿನಿಸುಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಬೇಕು. ರಸ್ತೆಗಳನ್ನು ಸ್ವಚ್ಚ ಮಾಡಿದಷ್ಟೇ ಆಸ್ಥೆಯನ್ನು ನಮ್ಮ ಮನೆ ಮತ್ತು ಆವರಣವನ್ನು ಸ್ವಚ್ಚ ಮಾಡುವುದರಲ್ಲಿಯೂ ಪ್ರದರ್ಶಿಸಬೇಕು. ಬಹಳಷ್ಟು ಜನ ಸ್ವಚ್ಚ ಭಾರತ ಆನ್ದೋಳನಗಳಲ್ಲಿ ಗುಂಪಿನಲ್ಲಿ ರಸ್ತೆ ಸ್ವಚ್ಚ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮತ್ತೆ ತಮ್ಮ ಮನೆ ಸ್ವಚ್ಚತೆಯನ್ನು ಕೆಲಸಗಾರರಿಗೆ ವಹಿಸುತ್ತಾರೆ. ಇಂಥ ಮನೋಭಾವ ಸಲ್ಲದು. ಬಯಲು ಮಲ ವಿಸರ್ಜನೆ ದೇಶಕ್ಕೆ ಅಂಟಿದ ಶಾಪ. ಇದು ಮುಕ್ತವಾಗುವವರಿಗೂ ಸಾರ್ವಜನಿಕರ ಆರೋಗ್ಯ ಸರಿಯಾಗಿರುವುದಿಲ್ಲ. ಸ್ವಚ್ಛ ಹಾಗೂ ಸ್ವಾಸ್ಥ್ಯ

ಭಾರತ ನಿರ್ಾಣ ಪ್ರತಿಯೊಬ್ಬರ ಜವಾಬ್ಧಾರಿಯಾಗಿದೆ. ಸ್ವಚ್ಛ ಸುಂದರ ಪರಿಸರ ನಿರ್ಮಾಣವಾಗಬೇಕಾದರೆ ಬಯಲು ಮಲಮೂತ್ರ ವಿಸರ್ಜನೆ ನಿಲ್ಲಬೇಕು. ಪ್ರತಿ ಮನೆಯವರು ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಇದಕ್ಕೆ ಜನತೆ ಸಹಕಾರ ನೀಡಬೇಕು. ಬಯಲು ಮಲ ವಿಸರ್ಜನೆ ದೇಶ ಮತ್ತು ಸಮಾಜಕ್ಕೆ ಅಂಟಿದ ಶಾಪ. ಬಯಲು ಮಲ ವಿಸರ್ಜನೆ ಮುಕ್ತವಾದರೆ ಸಾರ್ವಜನಿಕರ ಆರೋಗ್ಯ ವೃದ್ಧಿಸುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close