About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ವಾಯು ಮಾಲಿನ್ಯ ತಗ್ಗಿಸಲು ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆ

ದೆಹಲಿ: ಜಾಗತಿಕ ತಾಪಮಾನ ಇಳಿಕೆ ವಿಚಾರವಾಗಿ ಮುಂಚೂಣಿ ಪಾತ್ರ ವಹಿಸಿರುವ ಭಾರತ ಇದೀಗ ತನ್ನ ಪ್ರಮುಖ ನಗರಗಳ ಮಾಲಿನ್ಯ ಮಟ್ಟಗಳನ್ನು ತಗ್ಗಿಸಲು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದೆ.

ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮಕ್ಕೆ ಚಾಲನೆ ನೀಡಲು ಕೇಂದ್ರ ಸರಕಾರ ಮಹತ್ವಾಕಾಂಕ್ಷೆಯ ಯೋಜನೆಗೆ ಸಿದ್ಧತೆ ನಡೆಸಿಕೊಂಡಿದೆ.

ಈ ನಿಟ್ಟಿನಲ್ಲಿ, ದೇಶಾದ್ಯಂತ 102 ನಗರಗಳ ಮಾಲಿನ್ಯ ಪ್ರಮಾಣದಲ್ಲಿ ಶೇ 70-80 ರಷ್ಟನ್ನು ತಗ್ಗಿಸಲು ಸಮಗ್ರ ಯೋಜನೆಯೊಂದಿಗೆ ಇದೇ ಸ್ವತಂತ್ರ ದಿನಾಚರಣೆಯಂದು ಕೇಂದ್ರ ಸರಕಾರ ಮುಂದಡಿ ಇಡುವ ಸಾಧ್ಯತೆ ಇದೆ. ಈ ವಿಚಾರವಾಗಿ, ಸಮಯಾಧರಿತ ಡೆಡ್‌ಲೈನ್‌ಗಳನ್ನು ಕೇಂದ್ರ ಸರಕಾರ ನಿಗದಿ ಮಾಡಿದೆ.

ಪಟ್ಟಿಯಲ್ಲಿ ಕರ್ನಾಟಕದ ನಾಲ್ಕು ನಗರಗಳಿದ್ದರೆ,17 ನಗರಗಳನ್ನು ಹೊಂದಿರುವ ಮಹಾರಾಷ್ಟ್ರ ಕುಖ್ಯಾತಿಗೆ ಈಡಾಗಿದೆ. ಉತ್ತರ ಪ್ರದೇಶ(15), ಪಂಜಾಬ್‌(9), ಹಿಮಾಚಲ ಪ್ರದೇಶ(7), ಒಡಿಶಾ ಹಾಗು ಮಧ್ಯ ಪ್ರದೇಶದ ಆರು,ಅಸ್ಸಾಂ, ಆಂಧ್ರ ಪ್ರದೇಶ ಹಾಗು ರಾಜಸ್ಥಾನದ ತಲಾ ಐದು ನಗರಗಳು ಇವೆ.

ದೆಹಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್‌, ಪುಣೆ, ಅಲಹಾಬಾದ್‌, ವಾರಾಣಸಿ, ಕಾನ್ಪುರ, ಜೈಪುರ, ಪಟನಾ, ಚಂಡೀಗಡ ನಗರಗಳ ಮಾಲಿನ್ಯ ಮಟ್ಟವನ್ನು ಮುಂದಿನ ಮೂರು ವರ್ಷಗಳಲ್ಲಿ ಶೇ 35ರಷ್ಟು ತಗ್ಗಿಸಿ, ಐದು ವರ್ಷಗಳ ಅವಧಿಯಲ್ಲಿ ಶೇ 50 ಹಾಗು ಹತ್ತು ವರ್ಷಗಳ ಡೆಡ್‌ಲೈನ್ ವೇಳೆಗೆ ಶೇ 70-80ರಷ್ಟಕ್ಕೆ ತಗ್ಗಿಸಲು ಚಿಂತನೆ ನಡೆಸಲಾಗಿದೆ.

ಈ ಕುರಿತಂತೆ  ಸಂಬಂಧಪಟ್ಟ ನಗರಗಳ ರಾಜ್ಯ ಸರಕಾರಗಳಿಗೆ ಕಾರ್ಯಸೂಚಿಯನ್ನು ಕಳುಹಿಸಿ, ತಮ್ಮದೇ ಮಟ್ಟದಲ್ಲಿ ಮಾರ್ಗಸೂಚಿಗಳನ್ನೂ ಸಿದ್ಧಪಡಿಸಲು ಕೋರಲಾಗಿದೆ ಎಂದು ಕೇಂದ್ರ ಪರ್ಯಾವರಣ ಕಾರ್ಯದರ್ಶಿ ಸಿ ಕೆ ಮಿಶ್ರಾ ತಿಳಿಸಿದ್ದಾರೆ.

ವಿದ್ಯುತ್‌ ಉತ್ಪಾದನಾ ಘಟಕ, ಸಾರಿಗೆ, ಕೈಗಾರಿಕೆ, ವಸತಿ ಸಮುಚ್ಛಯಗಳು ಹಾಗು ಕೃಷಿ ವಲಯ ಸೇರಿದಂತೆ ಅನೇಕ ಮೂಲಗಳಿಂದ ಆಗುತ್ತಿರುವ ಮಾಲಿನ್ಯದ ಮಟ್ಟವನ್ನು ತಗ್ಗಿಸಲು ಯೋಜನೆಯಲ್ಲಿ ಚಿಂತಿಸಲಾಗಿದೆ. ಅಲ್ಲದೇ ದೇಶಾದ್ಯಮತ ಇರುವ ಮಾಲಿನ್ಯ ಸೂಚಕ ವ್ಯವಸ್ಥೆಗಳನ್ನು ಇನ್ನಷ್ಟು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಗಾಳಿ ಹಾಗು ನೀರಿನ ಗುಣಮಟ್ಟಗಳನ್ನು ಸುಧಾರಿಸುವ ಕ್ರಮಗಳಿಗೆ ಪ್ರೋತ್ಸಾಹ ನೀಡಲು ವಿಶ್ವಬ್ಯಾಂಕ್‌ ಚಿಂತನೆ ನಡೆಸಿದ್ದು, ಆರ್ಥಿಕ ನೆರವು ನೀಡುವ ಸಾಧ್ಯತೆ ಇದೆ.

 

Tags

Related Articles

Leave a Reply

Your email address will not be published. Required fields are marked *

Language
Close