ಮೈಸೂರು: ಜೆಡಿಎಸ್ಗೆ ಓವೈಸಿ ಬೆಂಬಲ ಕೊಟ್ಟಿರುವುದರಿಂದ ಕಾಂಗ್ರೆಸ್ಗೆ ಯಾವ ಪರಿಣಾಮ ಬೀರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಜೆಡಿಎಸ್ಗೆ ಓವೈಸಿ ಬೆಂಬಲ ವಿಚಾರ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ರಾಜ್ಯಚುನಾವಣೆಗೆಯಾವುದೇ ಪರಿಣಾಮ ಬೀರಲ್ಲ. ಕಾಂಗ್ರೆಸ್ ಪಕ್ಷಕ್ಕೂ ಕೂಡ ಇದರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ನುಡಿದರು. ಓವೈಸಿಗೆ ರಾಜ್ಯದಲ್ಲಿ ಎಲ್ಲಿ ಸ್ಥಾನಗಳು ಇದೆ, ಎಲ್ಲಿ ಗೆದ್ದಿದ್ದಾರೆ.ಅವರಿಗೆ ರಾಜ್ಯದ ವಾಸ್ತವ ಗೊತ್ತಿಲ್ಲ ಎಂದು ಹೇಳಿದರು.
ಓವೈಸಿ ಕೋಮುಗಲಬೆಗೆ ಅವಕಾಶ ಕೊಟ್ಟಿಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಸಿಎಂ,ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರಲ್ಲ ಹಾಗೆಯೇ ಅವರು ಸಹಾಯ ತಗೋಳ್ತಿದ್ದಾರಲ್ಲ ಅದಕ್ಕೆ ಹಾಗೆ ಹೇಳ್ತಾರೆಎಂದು ಟೀಕಿಸಿದರು. ಆನೇಕಲ್ ಶಾಸಕ ಶಿವಣ್ಣ ಅವರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ, ಚುನಾವಣೆ ಸಂದರ್ಭದಲ್ಲಿ ಮಾಡಿರುವುದು ರಾಜಕೀಯ ಪ್ರೇರಿತ ನಾನು ಇದನ್ನು ಖಂಡಿಸುತ್ತೇನೆ. ಐಟಿ ದಾಳಿ ಮಾಡುವ ಬಗ್ಗೆ ಚುನಾವಣೆ ಸಮಯದಲ್ಲಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಬಿಸಿಲಿನ ಝಳಕ್ಕೆ ಸಿದ್ದರಾಮಯ್ಯ ಪ್ರಚಾರ ಮಾಡ್ತಿದ್ದಾರ ಎಂಬ ಪ್ರಶ್ನೆಗೆ, ನಾವು ಬಿಸಿಲಿನಲ್ಲಿ ಎಮ್ಮೆ ಮೇಯಿಸಿಕೊಂಡು ಬೆಳೆದು ಬಂದವರು. ಈ ಬಿಸಿಲು ನನಗೆ ಲೆಕ್ಕಕ್ಕಿಲ್ಲ ಎಂದರು.