About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಜೇಟ್ಲಿಯಿಂದ ನಾನು ಪಾಠ ಕಲಿಯಬೇಕಾಗಿಲ್ಲ

ಜೇಟ್ಲಿ ಹೇಳಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು

ಬೆಂಗಳೂರು: ಸಮ್ಮಿಶ್ರ ಸಕಾರಕ್ಕೆ ಕಾಂಗ್ರೆಸ್​ ಹಾಗೂ ರಾಹುಲ್​ ಗಾಂಧಿಯ ಬೆಂಬಲ ಇದ್ದೇ ಇದೆ. ಕಾಂಗ್ರೆಸ್​ನಿಂದ ತೊಂದರೆಯಾಗುತ್ತಿದೆ ಎಂದು ನಾನು ಅತ್ತಿಲ್ಲ. ಅರುಣ್​ ಜೇಟ್ಲಿಯಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ಜೇಟ್ಲಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ನನ್ನ ನಿರ್ಧಾರಗಳಿಗೆ ಜನರ ಬೆಂಬಲ ಸಿಗುತ್ತಿಲ್ಲ ಎಂಬ ಬೇಸರದಿಂದ ನನ್ನ ಕಣ್ಣಲ್ಲಿ ನೀರು ಬಂತು. ರೈತರ ಸಾಲಮನ್ನಾ ಮಾಡಿದ್ದು, ನಾನೇ ಹೊರತು ಪ್ರಧಾನಿ ನರೇಂದ್ರ ಮೋದಿಯಲ್ಲ ಎಂದು ಸಿಎಂ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಸಮ್ಮಿಶ್ರ ಸಕಾರದ ನೋವು ನನಗೆ ಗೊತ್ತು. ನಾನು ವಿಷಕಂಠನಂತೆ ಆ ನೋವನ್ನು ನುಂಗಿಕೊಂಡು ಸರಕಾರ ನಡೆಸುತ್ತಿದ್ದೇನೆ ಎಂದು ಸಿಎಂ ಹೆಚ್ಡಿಕೆ ಹೇಳಿದ್ದನ್ನು ಅರುಣ್​ ಜೇಟ್ಲಿ ಬ್ಲಾಗ್​ನಲ್ಲಿ ಪ್ರಸ್ತಾಪಿಸಿದ್ದರು. ಮೋದಿಯನ್ನು ದೂರ ಇಡುವ ನಕಾರಾತ್ಮಕ ಯೋಚನೆಯ ಪ್ರತಿಫಲವನ್ನು ಸಿಎಂ ಕುಮಾರಸ್ವಾಮಿ ಈಗ ಅನುಭವಿಸುತ್ತಿದ್ದಾರೆ. ಸಮ್ಮಿಶ್ರ ಸರಕಾರದ ಸಿಎಂ ಕುಮಾರಸ್ವಾಮಿ ಅವರ ಮಾತುಗಳನ್ನು ಕೇಳುತ್ತಿದ್ದರೆ, ನನಗೆ ಹಳೆಯ ಹಿಂದಿ ಸಿನಿಮಾಗಳ ಟ್ರಾಜಿಡಿ ಡೈಲಾಗ್​ಗಳು ನೆನಪಾಗುತ್ತಿದೆ ಎಂದು ಅರುಣ್​ ಜೇಟ್ಲಿ ಎಚ್​.ಡಿ.ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close