About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕೊಡಗನ್ನು ನಿರ್ಲಕ್ಷ್ಯಿಸಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಅತಿವೃಷ್ಟಿಯಿಂದಾಗಿ 329 ಕೋಟಿ ಹಾನಿ, ಜಿಲ್ಲೆಗೆ 100 ಕೋಟಿ ರು. ಅನುದಾನ

ಮಡಿಕೇರಿ: ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಗೆ ರಾಜ್ಯ ಸರಕಾರ ತುರ್ತಾಗಿ 100 ಕೋಟಿ ರು. ಅನುದಾನವನ್ನು ಮಳೆ ಹಾನಿ ಪರಿಹಾರವಾಗಿ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

ಮಡಿಕೇರಿಯಲ್ಲಿ ಗುರುವಾರ ಮಳೆ ಹಾನಿ ಸಂಬಂಧಿತ ಜಿಲ್ಲಾ ಮಟ್ಟದ ಸಭೆ ನಡೆಸಿದ ಕುಮಾರಸ್ವಾಮಿ ಸಭೆಯ ನಂತರ ಸುದ್ಗಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದೆ . ಭಾರಿ ಮಳೆಯಿಂದ ಕೊಡಗಿನಲ್ಲಿ ಉಂಟಾಗಿರುವ ಸಮಸ್ಯೆ ಅರಿಯಲು ಖುದ್ದು ಬಂದಿದ್ದೇನೆ, ಮಳೆ ಹಾನಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಕೊಡಗು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈಗಾಗಲೇ 10 ಕೋಟಿ ಹಣ ಇದ್ದು, ಮಳೆ ಹಾನಿ ಪರಿಹಾರ ಸಂಬಂಧಿತ ಹಣದ ಸಮಸ್ಯೆ ಇಲ್ಲ ಎಂದರು.

ಕೊಡಗಿನಲ್ಲಿ ಕೆಲವು ದಿನಗಳಿಂದ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ. ಈ ಕಾರಣಕ್ಕೆ ಸಮೀಪದ ಹಾಸನ ಮತ್ತು ಮೈಸೂರು ಜಿಲ್ಲೆಯಿಂದ ಸಿಬ್ಬಂದಿ ಕರೆಸಿಕೊಳ್ಳಲು ಕ್ರಮ ವಹಿಸಲಾಗಿದೆ. ಕೊಡಗಿನಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆ ಮತ್ತು ಮನೆ ಹಾನಿ ಬಗ್ಗೆ ಸಮಗ್ರ ಮಾಹಿತಿ ತರಿಸಿಕೊಂಡು ಸೂಕ್ತ ಪರಿಹಾರ ನೀಡಲಾಗುವುದು. ಭತ್ತದ ಬೆಳೆಗೆ ಹಾನಿಯಾಗಿದ್ದಲ್ಲಿ ಉಚಿತ ಭತ್ತ ಬೀಜ ವಿತರಣೆ ಮಾಡಬೇಕು ಎಂದು ನೀಡಲಾಗಿದೆ ಎಂದು ಹೇಳಿದರು.

ಮಳೆಯಿಂದಾಗಿ ತೀವ್ರವಾಗಿ ಹಾನಿಗೊಳಗಾದ ಕೊಡಗಿನ ರಸ್ತೆಗಳನ್ನು ಸರಿಪಡಿಸಲು ಹೆಚ್ಚುವರಿ ಹಣ ಬೇಕೆಂದು ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮಳೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ಬಗೆಹರಿಸಲು ಸಕಾ9ರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ ಎಂದೂ ಹೇಳಿದ ಮುಖ್ಯಮಂತ್ರಿ, ಜಿಲ್ಲೆಯ ಎಲ್ಲಾ ರೀತಿಯ ಮಳೆ ಹಾನಿ ಶಾಶ್ವತ ಪರಿಹಾರಕ್ಕೆ 329 ಕೋಟಿ ಬೇಡಿಕೆ ಬಂದಿದ್ದು, ಸರಕಾರ ಮೊದಲ ಹಂತದಲ್ಲಿ 100 ನೀಡಲಿದೆ ಎಂದು ಪ್ರಕಟಿಸಿದರು.

ಕೊಡಗಿನಲ್ಲಿ ಮಳೆ ನಿಂತ ತಕ್ಷಣ ರಸ್ತೆ ಸರಿಪಡಿಸುವ ಕಾರ್ಯ ನಡೆಯಲಿದೆ, ಕೊಡಗು ಜಿಲ್ಲೆಯ ಜನತೆ ಅತಂಕಕ್ಕೊಳಗಾಗಬೇಕಿಲ್ಲ ಎಂದೂ ಕುಮಾರಸ್ವಾಮಿ ಭರವಸೆ ನೀಡಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ, ಕೊಡಗಿನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭತಿ9 ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದೂ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಬಜೆಟ್‌ನಲ್ಲಿ ಕೊಡಗನ್ನು ನಿರ್ಲಕ್ಷಿಸಿಲ್ಲ. ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಆತಂಕಕ್ಕೊಳಪಡಬೇಕಾಗಿಲ್ಲ. ಸದ್ಯದಲ್ಲೇ ಜಿಲ್ಲೆಯ ಶಾಸಕರು ಹಾಗೂ ರಾಜ್ಯ ಮಟ್ಟದ ಉನ್ನತಾಧಿಕಾರಿಗಳ ವಿಶೇಷ ಸಭೆಯನ್ನು ಕರೆದು, ಕೊಡಗಿನ ಅಗತ್ಯತೆಗಳ ಬಗ್ಗೆ ಚರ್ಚಿಸಿ ಅಗತ್ಯ ಬೇಡಿಕೆ ಪೂರೈಸಲಾಗುತ್ತದೆ.

-ಕುಮಾರಸ್ವಾಮಿ ಮುಖ್ಯಮಂತ್ರಿ

Tags

Related Articles

Leave a Reply

Your email address will not be published. Required fields are marked *

Language
Close