About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸ್ಪೀಕರ್ ಹೆಸರು ಪ್ರಸ್ತಾಪಿಸಿದ್ದೇಕೆ?: ಬೋಪಯ್ಯ

ಬೆಂಗಳೂರು: ”ಸಿಎಂ ಕುಮಾರಸ್ವಾಮಿ ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪೀಕರ್ ಹೆಸರು ಪ್ರಸ್ತಾಪ ಮಾಡಿದ್ದು ಯಾಕೆ..? ಇದು ತಪ್ಪಲ್ವಾ?” ಎಂದು ಬಿಜೆಪಿ ಶಾಸಕ ಬೋಪಯ್ಯ ಪ್ರಶ್ನಿಸಿದರು.

ಆಡಿಯೊ ಪ್ರಕರಣ ಸಂಬಂಧ ಮಾತನಾಡಿದ ಅವರು, ”ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪೀಕರ್ ಹೆಸರು ಪ್ರಸ್ತಾಪ ಮಾಡಿದ್ದು ಕುಮಾರಸ್ವಾಮಿ ತಪ್ಪಲ್ವಾ” ಎಂದು ಪ್ರಶ್ನೆ ಮಾಡಿದರು. ಕುಮಾರಸ್ವಾಮಿ ನಡೆ ಪ್ರಶ್ನಿಸಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಗರಂ ಆದ್ರು. ಬೋಪಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮುಂದುವರಿದು ಮಾತನಾಡಿದ ಬೋಪಯ್ಯ, ”ಆಡಿಯೊ ಟೇಪ್ ಬಗ್ಗೆ ಎಸ್‍ಐಟಿ ತನಿಖೆ ಸರಿ ಇರಲ್ಲ” ಎಂದರು.

”ಸಭಾಧ್ಯಕ್ಷರ ಹುದ್ದೆಗೆ ಧಕ್ಕೆ ಬಂದಿದೆ ಎಂದು ಈಗ ಬಂದಿರುವ ಪ್ರಶ್ನೆಯಾಗಿದೆ. ಆಡಿಯೋ ಪ್ರಕರಣ ಸಂಬಂಧ ದೂರು ಕೊಟ್ಟವರು ಯಾರು? ದೂರು ಕೊಟ್ಟವರ ಕೈಯಲ್ಲೇ ತನಿಖೆ ನಡೆಸುವುದು ಸರಿಯಾ” ಎಂದು ಪ್ರಶ್ನಿಸಿದರು. ಅಲ್ಲದೆ ”ಶಾಸಕರನ್ನು ಪೊಲೀಸರ ಕೈಗೆ ಒಪ್ಪಿಸುವ ಕೆಲಸ ಮಾಡೋದು ಬೇಡ ” ಎಂದರು.

Tags

Related Articles

Leave a Reply

Your email address will not be published. Required fields are marked *

Language
Close