About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿ: ಇದುವರೆಗೆ 25,16,89,808 ರು ಸಂಗ್ರಹ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟಕ್ಕೆ ಒಳಗಾದ ಕೊಡಗು ಮತ್ತು ಇತರೇ ಜಿಲ್ಲೆಗಳ ಸಂತ್ರಸ್ತರಿಗೆ ನೆರವಾಗಲೆಂದು ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ 2018ರ ಖಾತೆಗೆ 24/08/2018ರ ವರೆಗೆ ಒಟ್ಟು  25,16,89,808 ರು. ಸಲ್ಲಿಕೆಯಾಗಿದೆ. 153  ಡಿ.ಡಿ ಮೂಲಕ 13,59,90,418 ರು ಸಲ್ಲಿಕೆಯಾಗಿದೆ. ಆನ್ಲೈನ್ ಮೂಲಕ 9,06,99,390. 44 ರು. ಖಾತೆಗೆ ಸಲ್ಲಿಕೆಯಾಗಿದೆ.
ಸಂಘ ಸಂಸ್ಥೆಗಳು ಮುಖ್ಯಮಂತ್ರಿಗಳಿಗೆ ನೀಡಿರುವ ಮೊತ್ತ: 
(ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ (ನೋಂ) ಮತ್ತು (ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ (ರಿ)  2,50,00,000. ರು ನೀಡಿವೆ.
ರಾಜ್ಯದಲ್ಲಿನ ಪ್ರಕೃತಿ ವಿಕೋಪ / ಅತಿವೃಷ್ಟಿಯಲ್ಲಿ  ನೊಂದ ಸಂತ್ರಸ್ತರಿಗೆ ಸಹಾಯ ಮಾಡುವ ದಾನಿಗಳು ಈ ಕೆಳಕಂಡ ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ 2018ರ ಖಾತೆಗೆ ದೇಣಿಗೆ ಸಲ್ಲಿಸ ಬಹುದು.
ಖಾತೆಯ ಹೆಸರು : ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ 2018.
ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ                 : ವಿಧಾನ ಸೌಧ
ಖಾತೆ ಸಂಖ್ಯೆ      : 37887098605
IFSC                : SBIN0040277
MICR NO         : 560002419
Tags

Related Articles

Leave a Reply

Your email address will not be published. Required fields are marked *

Language
Close