About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸಮ್ಮಿಶ್ರ ಸರಕಾರ ಉರುಳಿಸಲು ಕೇಂದ್ರದ ವ್ಯರ್ಥ ಪ್ರಯತ್ನ: ಸಿಎಂ

ಸೆಪ್ಟೆಂಬರ್ 10ರ ಭಾರತ್ ಬಂದ್‍ಗೆ ನಮ್ಮ ಸರಕಾರದ ಬೆಂಬಲವೂ ಇದೆ: ಕುಮಾರಸ್ವಾಮಿ

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ಭೀತಿ ಹಿನ್ನೆಲೆಯಲ್ಲಿ, ಇದೊಂದು ಸಮ್ಮಿಶ್ರ ಸರಕಾರವನ್ನು ಬೀಳಿಸುವ ಕೇಂದ್ರ ಸರಕಾರದ ವ್ಯರ್ಥ ಪ್ರಯತ್ನ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

‘ಇತ್ತೀಚಿನ ರಾಜಕಾರಣ ಯಾವ ದಿಕ್ಕಿನಲ್ಲಿ ಹೋಗ್ತಿದೆ ಎಂದು ನಿಮಗೇ ಗೊತ್ತಿದೆ. ಸಮ್ಮಿಶ್ರ ಸರಕಾರವನ್ನು ಬೀಳಿಸುವ ವ್ಯರ್ಥ ಪ್ರಯತ್ನ ಇದಾಗಿದ್ದು, ನೋಡೋಣ ಎಲ್ಲಿಗೆ ಹೋಗಿ ಮುಟ್ಟುತ್ತೆ’ ಎಂದು ಸಿಎಂ ಹೇಳಿದರು. ಅಲ್ಲದೆ ‘ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲು ದೆಹಲಿಯಿಂದ ವಾಪಸ್ ಆಗಿದ್ದಾರೆ ಅನಿಸುತ್ತದೆ. ಬಹುಶಃ ಸರ್ಕಾರವನ್ನ ಬದಲಿಸಿ ಓಟ್ ತೆಗೆದುಕೊಳ್ಳಲು ಬಂದಿರಬೇಕು’ ಎಂದು ವ್ಯಂಗ್ಯವಾಡಿದರು.

ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ರ ಭಾರತ್ ಬಂದ್‍ಗೆ ನಮ್ಮ ಸರಕಾರದ ಬೆಂಬಲವೂ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ನಡೆಯುತ್ತಿರುವ ಬಂದ್ ಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ತೈಲ ಏರಿಕೆಯಾಗುತ್ತಿರುವುದು ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close