About Us Advertise with us Be a Reporter E-Paper

ವಿರಾಮ

ತೆಂಗಿನಕಾಯಿ ತಲೆಗೆ ಬಡಿದದ್ದು

ಕೆ.ಪಿ.ಸತ್ಯನಾರಾಯಣ

ಧ್ಯಾಹ್ನದ ಊಟದ ಬಿಡುವಿನಲ್ಲಿ ನಮ್ಮ ಪಕ್ಕದ ಕಚೇರಿಗೆ ಒಂದು ವಿಸಿಟ್ ಕೊಡುವುದು ನನ್ನ ಅಭ್ಯಾಸ. ಅದಕ್ಕೆ ಮೂರು ಕಾರಣಗಳನ್ನು ನನಗೆ ನಾನೇ ಕೊಟ್ಟುಕೊಂಡಿದ್ದೆ. ಮೊದಲನೆಯದು ನನ್ನ ಶಿಷ್ಯ ಶಿಂಗ್ಳೀಕ ಅಲ್ಲಿ ಕೆಲಸ ಮಾಡುತ್ತಿರುವುದು; ಎರಡನೆಯದು ನನ್ನ ಸಹೋದ್ಯೋಗಿಗಳು ಮೂದೇವಿಗಳಂತೆ ತಮ್ಮ ಪಾಡಿಗೆ ತಾವಿದ್ದು ಕಚೇರಿ ಸ್ಮಶಾನ ಸದೃಶವಾಗಿರುವುದು; ಮೂರನೆಯದು ಹೇಳೋಕೆ ಸ್ವಲ್ಪ ಸಂಕೋಚವಾಗುತ್ತೆ, ಅಲ್ಲಿನ ಲಲನಾಮಣಿಗಳು ನನ್ನನ್ನೂ ಒಬ್ಬ ಮನುಷ್ಯ ಅಂತ ತಿಳಿದು ಚೆನ್ನಾಗಿ ಮಾತಾಡಿಸುವುದು!

ಹೀಗೇ ಒಂದು ಮಧ್ಯಾಹ್ನ ಅಲ್ಲಿಗೆ ಹೋದೆ. ಅಲ್ಲಿನ ಪುರುಷ ಉದ್ಯೋಗಿಗಳು, ಮುವ್ವತ್ಮೂರು ಪರ್ಸೆಂಟ್ ಮೀಸಲಾತಿ ಪಡೆದವರಂತೆ, ಎರಡು ಹೆಣ್ಣಿಗೆ ಒಂದು ಗಂಡು ಎಂಬ ಅನುಪಾತದಲ್ಲಿ ಸಾಲದ್ದಕ್ಕೆ ಅವರ ಬಾಸೂ ಹೆಣ್ಣು! ನಾನು ಹೋದಾಗ ಅಲ್ಪಸಂಖ್ಯಾತರಾದ ಪುರುಷರು ಹೆಣ್ಣು ಕಾಗೆ ಕಪ್ಪೂಂತ ಹೇಳಬೇಕಾಗೇ ಇಲ್ಲವಲ್ಲ , ಬಿಳಿ ಮೊಟ್ಟೆ ಇಟ್ಟಾಗ ಗಂಡು ಕಾಗೆಗೆ ಅದರ, ಅಂದರೆ ಹೆಣ್ಣು ಕಾಗೆಯ, ಬಗ್ಗೆ ಅನುಮಾನ ಬರಲ್ವೇ?’ ಎಂಬ ವಿಷಯದ ಬಗ್ಗೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು. ನಾನೂ ಗುಂಪು ಸೇರಿಕೊಂಡೆ. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ. ಕಾಗೆಗಳಿಗೆ ಬಣ್ಣಗಳನ್ನು ಗುರುತಿಸೋಕೆ ಬರತ್ಯೇ? ಎಂಬ ಇನ್ನೊಂದು ಸಮಸ್ಯೆಯ ಕಡೆಗೆ ಚರ್ಚೆ ತಿರುಗಿತು. ಬಗೆಹರಿಯುವ ಲಕ್ಷಣ ಕಾಣಲಿಲ್ಲ. ಸಮಸ್ಯೇನ ಕಾಗೆಗಳಿಗೇ ಬಿಡ್ರಯ್ಯಾ ಎಂದು ನಾನು ತೀರ್ಮಾನ ಕೊಡಹೊರಟಿದ್ದೆ, ಅಷ್ಟರಲ್ಲಿ ಮಹಿಳಾಮಣಿಗಳ ಗುಂಪಿನಿಂದ ಜೋರು ಗದ್ದಲ ಕೇಳಿಸ್ತು.

ಇದ್ದ ಹತ್ತು ಜನರಲ್ಲಿ ಹತ್ತು ಜನರೂ ಮಾತಾಡುತ್ತಿದ್ದರು. ಕೇಳಿಸ್ಕೋತಿದ್ದೋರು ಯಾರೋ! ಕಣ್ಣು ಕಡೆ ಹೊರಳಿತು. ಒಬ್ಬಾಕೆ ಮತೊಬ್ಬಳ ಕೈ ಹಿಡಿದಿದ್ದಾಳೆ, ಇನ್ನೊಬ್ಳು ಕಿವಿ ಎಳೀತಿದ್ದಾಳೆ, ಮಗದೊಬ್ಬಳು ಕತ್ತಿಗೇ ಕೈ ಹಾಕಿದ್ದಾಳೆ. ನನಗೆ ಗಾಬರಿಯೇ ಆಯ್ತು. ಅಸೆಂಬ್ಲೀಲಿ ನಡೆಯೋ ವಿದ್ಯಮಾನಗಳು ಇಲ್ಲಿ ಕಂಡುಬಂದರೆ ಆಶ್ಚರ್ಯವಾಗದೆ

ಏನಯ್ಯಾ ಶಿಂಗ್ಳೀಕ, ಇದೇನು ಇಷ್ಟು ದೊಡ್ಡ ಜಗಳ ನಡೀತಿದ್ರೂ ನೀವೆಲ್ಲಾ ಸಂಬಂಧ ಪಡದೋರ ಥರ ಹಾಯಾಗಿ ಇದೀರಲ್ಲಾ. ಏನಾದ್ರೂ ಹೆಚ್ಚು ಕಮ್ಮಿಯಾದ್ರೆ ಎನ್ಗತಿ?’ ಅಂತ ಸ್ವಲ್ಪ ಆತಂಕದಿಂದಲೇ ಕೇಳಿದೆ.

ಅಂಥದ್ದೇನಿಲ್ಲ ತಗೀರಿ ಸಾ. ಹೋದ್ವರ್ಸದಿಂದ ಸಂಬಳ ಹೆಚ್ಚಾಗಿ ಅರಿಯರ್ಸ್ ಬಂತಲ್ಲಾ,ಅದ್ರಾಗೆ ಸರ ಬಳೆ ಕಿವಿಯೋಲೆ ಅಂತೆಲ್ಲ ಮಾಡಿಸ್ಕಂಡವ್ರೆ. ಅದನ್ನ ಒಬ್ರಿಗೊಬ್ರು ತೋರ್ಸ್ಕಂತಿರೋ, ನೋಡ್ಕಂತಿರೋ ಸಂದ ಅದುಎಂದು ಶಿಂಗ್ಳೀಕ ಸಮಾಧಾನ ಹೇಳಿದ. ನಂಗೆ ಹೋದ ಜೀವ ಮತ್ತೆ ಬಂದ

ನಮ್ಮ ಮಾತು ಕೇಳಿ ಕಡೆ ತಿರುಗಿದ ಜಂಬದ ಕೋಳಿ ಮತ್ತು ಜಿಪುಣಾಗ್ರೇಸರಿ ಬಿರುದಾಂಕಿತಳಾದ ಸೀತಾಲಕ್ಷ್ಮಿ ಶಿಂಗ್ಳೀಕನನ್ನು ಕರೆದಳು. ನನ್ನನ್ನ ತೋರಿಸ್ತಾ ಶಿಂಗ್ಳೀಕನಿಗೆ ಅವಳು ಏನೋ ಹೇಳುತ್ತಿದ್ದಳು. ಮೊದಲೇ ಅವಳಿಗೆ ನನ್ನನ್ನ ಕಂಡ್ರೆ ಒಂಥರಾ, ಈಗ ನನ್ನ ಬಗ್ಗೆ ಏನು ಹೇಳ್ತಿದಾಳೋ, ಯಾಕಾದ್ರೂ ಇಲ್ಲಿಗೆ ಬಂದ್ನಪ್ಪಾ ಅನ್ನಿಸೋಕೆ ಶುರುವಾಯ್ತು.

ಅಲ್ಲಿಂದ ಬರ್ತಾ ಶಿಂಗ್ಳೀಕ ಒಂದು ತೆಂಗಿನಕಾಯಿಯನ್ನು ಹಿಡಿದುಕೊಂಡು ಬಂದ. ಅದಕ್ಕೆ ಅರಿಶಿಣ ಕುಂಕುಮ ಬಳಿಯಲಾಗಿತ್ತು. ನಂಗೆ ಅದನ್ನ ನೋಡಿಯೇ ಶುರುವಾಯ್ತು. ಮೆಲ್ಲನೆ ಅಲ್ಲಿಂದ ಕಾಲು ಕೀಳಲು ನೋಡಿದೆ. ‘ರೀ, ನಿಲ್ರೀ..’ ಸೀತಾಲಕ್ಷ್ಮಿಯ ಘರ್ಜನೆ ಕೇಳಿ ನನ್ನ ಕಾಲುಗಳು ನೆಲದಲ್ಲಿ ಹೂತುಹೋದವು! ಶಿಂಗ್ಳೀಕ ಹತ್ತಿರ ಬಂದೇ ಬಿಟ್ಟ. ಕಾಯಿಯನ್ನು ತೋರಿಸ್ತಾ ಸಾ ನೆನ್ನೆ ನೀವು ನಮ್ಮಾಪೀಸಿಗೆ ಬಂದಿದ್ರಿ ಅಲ್ಲವ್ರಾ? ಆಗಿದ್ಮ್ಯಾಕೆ ಇದನ್ನ ಮುಟ್ಟಿ ತಗಂಡಿಲ್ಲ ಅನ್ನಿ ಸಾಎಂದ. ನನಗೆ ತಲೆಬುಡ ತಿಳಿಯಲಿಲ್ಲ. ‘ಇದನ್ನ ನಾನ್ಯಾಕೆ ಮುಟ್ಟಬೇಕು, ಏನನ್ನ ತಗಂಡಿಲ್ಲ ಅನ್ನಬೇಕು? ನಿಜ ಹೇಳಬೇಕಂದ್ರೆ ನನಗೆ ಬೆಳಗಿನ ಹೊತ್ತು ಅಭ್ಯಾಸವೇ ಇಲ್ಲ! ಏನಯ್ಯಾ ಇದೆಲ್ಲಾ?’ ಶಿಂಗ್ಳೀಕನನ್ನ ಕೇಳ್ದೆ.

ನೆನ್ನೆ ಯಮ್ಮಂದು ಒಸಾ ಛತ್ರಿ ಕಳ್ದೋಯ್ತಂತೆ ಸಾ. ಅದನ್ನ ಇಲ್ಲೇ ಯಾರೋ ತಗಂಡವ್ರೆ ಅಂತ ಅನ್ಮಾನ. ಅದಕ್ಕೇ ಎಲ್ಲಾರ್ಗೂ ಪರೀಕ್ಸೆ. ಏನಾಗಕಿಲ್ಲ, ಸುಮ್ನೆ ಮುಟ್ಟಿ ತಗಂಡಿಲ್ಲ ಅನ್ನಿ ಸಾಅಂದ.

ಸೊಗಸಾದ ಚಟ್ನಿಯಾಗಬಹುದಾದ ತೆಂಗಿನಕಾಯನ್ನು ಅನ್ಯಾಯವಾಗಿ ಹಾಳು ಮಾಡ್ತಿದಾರಲ್ಲ ಅನ್ನಿಸಿದರೂ ಕಳ್ಳಅಂತ ಅನ್ನಿಸ್ಕೋಬಾರ್ದಲ್ಲ, ಮುಟ್ಟಿ ನಾನು ತಗಂಡಿಲ್ಲ ಅಂದೆ. ಅಲ್ಲಿಂದ ಬಿಡುಗಡೆಯಾಗಿ ನಮ್ಮ ಕಚೇರಿಯ ಕಡೆ ಅಲ್ರಯ್ಯಾ, ಹೀಗೆ ಪದೇ ಪದೇ ಏನಾದ್ರೂ ಕಳ್ಕೊಳ್ಳೋದು, ಎಲ್ರನ್ನೂ ತೆಂಗಿನಕಾಯಿ ಮುಟ್ಟಿ ಅನ್ನೋದು ಯಾಕೆ, ನಿಮ್ಮ ಆಫೀಸಿನ ಬಾಗಿಲಿಗೇ ಒಂದು ತೆಂಗಿನಕಾಯಿ ನೇತು ಹಾಕ್ಬಿಡಿ. ತಪ್ಪು ಮಾಡಿದೋರಿಗೆ ಅದೇ ತಲೆಗೆ ಬಡಿಯುತ್ತೆಅಂತ ಬಿಟ್ಟಿ ಸಲಹೆ ಕೊಟ್ಟು ಬಂದೆ.

ಮಾರನೆ ದಿನ ಮಧ್ಯಾಹ್ನ ಪಕ್ಕದ ಕಚೇರಿಗೆ ಹೋದಾಗ ಬಾಗಿಲಲ್ಲಿ ತಲೆಗೆ ಏನೋ ತಗುಲಿದಂತಾಯ್ತು. ಸಾವರಿಸಿಕೊಂಡು ತಲೆ ಎತ್ತಿ ನೋಡಿದೆ. ಅದೇ ಅರಿಸಿಣ ಕುಂಕುಮ ಬಳಿದ ತೆಂಗಿನಕಾಯಿ!

Tags

Related Articles

Leave a Reply

Your email address will not be published. Required fields are marked *

Language
Close