ಪ್ರೇಮಿಗಳ ದಿನದಂದೇ ಕಾಲೇಜಿಗೆ ರಜೆ?

Posted In : ದೇಶ

ಲಖನೌ: ಇದೇ 14ರಂದು ಪ್ರೇಮಿಗಳ ದಿನ. ಅಂದು ರಜೆ, ಕಾಲೇಜಿಗೆ ಬರಬೇಡಿ ಎಂದು ಲಖನೌ ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಿದೆ.

‘ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗಿ ಫೆ.14ರಂದು ಯುವಜನರು ಪ್ರೇಮಿಗಳ ದಿನ ಆಚರಿಸುತ್ತಿದ್ದಾರೆ. ಹಾಗಾಗಿ, ಕೋ-ಎಜುಕೇಷನ್ (ಯುವಕ-ಯುವತಿಯರು ಕಲಿಯುವ) ಕಾಲೇಜುಗಳಲ್ಲಿ ಶಿವರಾತ್ರಿಯ ಪ್ರಯುಕ್ತ ರಜೆ ಘೋಷಿಸಿದ್ದೇವೆ’ ಎಂದು ವಿವಿ ಅಧಿಕಾರಿ ವಿನೋದ್ ಸಿಂಗ್ ಇದೇ 10ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿ ಫೆ.14ರಂದು ಮುಚ್ಚಿರುತ್ತದೆ. ಯಾವುದೇ ತರಗತಿ, ಪ್ರಾಯೋಗಿಕ ಪರೀಕ್ಷೆಗಳು ಅಥವಾ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳನ್ನು ಬುಧವಾರ ಕಳುಹಿಸದಂತೆ ಪೋಷಕರಲ್ಲಿಯೂ ಕೂಡ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ವಿವಿಯ ಈ ಕ್ರಮವನ್ನು ವಿದ್ಯಾರ್ಥಿ ಸಮೂಹ ಖಂಡಿಸಿವೆ.

ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳು ಹೇಗಿರಬೇಕು ಎಂದು ತಿಳಿ ಹೇಳುವ ಬದಲು, ವಿವಿಯ ಅಧ್ಯಾಪಕರು ಸರಿಯಾಗಿ ತರಗತಿ ಗಳನ್ನು ತೆಗೆದುಕೊಳ್ಳುವಂತೆ ನೋಡಿಕೊಂಡು ಶೈಕ್ಷಣಿಕ ವಾತಾವರಣ ಸುಧಾರಿಸಲಿ ಎಂದು ಸ್ನಾತಕೋತ್ತರ ವಿದ್ಯಾರ್ಥಿ ಪ್ರತಿಕ್ರಿ ಯಿಸಿದ್ದಾರೆ.

Leave a Reply

Your email address will not be published. Required fields are marked *

three × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top