About Us Advertise with us Be a Reporter E-Paper

ಸಿನಿಮಾಸ್

ಕಾಲೇಜ್ ಕುಮಾರನ ಹೊಸ ಸಿನಿಮಾ

ದುನಿಯಾ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’, ಹರಿ ಸಂತು ನಿರ್ದೇಶನದ ‘ಕಾಲೇಜ್ ಕುಮಾರ’ ಚಿತ್ರಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿರುವ ಹೊಸ ನಟ ವಿಕ್ಕಿ ವರುಣ್‌ಗೆ ಲಕ್ ಖುಲಾಯಿಸಿದೆ. ಸದ್ಯ ದಿನಕ್ಕೊಂದರಂತೆ ಹೊಸ ಸಿನಿಮಾಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಅವರು ಮಾತ್ರ ಚಿತ್ರಗಳ ಆಯ್ಕೆ ವಿಚಾರದಲ್ಲಿ ಸಾಕಷ್ಟು ಚೂಸಿ ಆಗಿದ್ದಾರೆ.

ಮೊದಲೆರಡು ಚಿತ್ರಗಳ ಯಶಸ್ಸಿನ ಬಳಿಕ ಒಂದಷ್ಟು ಚಿತ್ರಗಳಲ್ಲೂ ಹೆಸರು ಕೇಳಿಬಂದಿತ್ತು. ಅಲ್ಲದೆ, ಕೆಲ ದಿನಗಳ ಹಿಂದಷ್ಟೇ ರಘು ಕಾನಡ್ಕ ನಿರ್ದೇಶನದಲ್ಲಿ ವಿಕ್ಕಿ ನಟಿಸುತ್ತಿದ್ದು, ಅದಕ್ಕೆ ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯ ಪ್ರಕಾಶ್ ಕಥೆ ಬರೆಯಲಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಸುದ್ದಿ ಮಾಸುವ ಮುನ್ನವೇ ಆ ಚಿತ್ರದ ಜತೆಗೆ ವಿಕ್ಕಿ ಮತ್ತೊಂದು ಚಿತ್ರದಲ್ಲಿ ನಟಿಸುವುದು ನಿಕ್ಕಿಯಾಗಿದೆ.

‘ಚಮಕ್’ ಹಾಗೂ ‘ಅಯೋಗ್ಯ’ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಚಂದ್ರಶೇಖರ್ ಈಗ ವಿಕ್ಕಿಯ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರವನ್ನು ಎನ್ನುವವರು ನಿರ್ದೇಶಿಸುತ್ತಿದ್ದು, ಇದು ಅವರ ನಾಲ್ಕನೇ ಚಿತ್ರವಾಗಿದೆ. ಚಿತ್ರಕ್ಕೆ ಇನ್ನು ಶೀರ್ಷಿಕೆ ಅಂತಿಮ ಗೊಂಡಿಲ್ಲ.

ನವೆಂಬರ್ 29ರಂದು ಈ ಸಿನಿಮಾದ ಮುಹೂರ್ತ ನಡೆಯಲಿದೆ. ಡಿಸೆಂಬರ್‌ನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಥ್ರಿಲ್ಲರ್ ಅಂಶಗಳ ಜತೆಗೆ ವಿಭಿನ್ನ ಪ್ರೇಮಕಥೆಯನ್ನು ಹೊಂದಿದೆಯಂತೆ. ಚಿತ್ರಕ್ಕೆ ನಾಯಕಿ ಸೇರಿದಂತೆ ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ಇನ್ನೂ ಅಂತಿಮವಾಗಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ರಘು ಕಾನಡ್ಕ ನಿರ್ದೇಶನದ ಸಿನಿಮಾ ಹೊಸ ವರ್ಷಕ್ಕೆ ಶುರುವಾಗಲಿದೆ.

Tags

Related Articles

Leave a Reply

Your email address will not be published. Required fields are marked *

Language
Close