About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ನೋಡ ಬನ್ನಿ ಥಾಯ್ಲೆಂಡ್ ಕ್ರಾಬಿಯ ದ್ವೀಪ ಕಿನ್ನರಿಯರ…

ರವಿ ಮಾಳೇನಹಳ್ಳಿ

ನೀವು ಯಾರಿಗಾದರೂ ಥಾಯ್ಲೆಂಡ್ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ… ಇದನ್ನು ಕೇಳುವ ಬಹುತೇಕ ಮಂದಿ ಏನಮ್ಮಾ ಮಸಾಜ್ ಮಾಡಿಸಿಕೊಳ್ಳೋಕೆ  ದ್ದೀಯಾ? ಮಜಾ ಉಡಾಯಿಸ್ಬಿಡು. ಹೋಗಿ ಬಂದ್ಮೇಲೆ ನಿನ್ನ ಮನೆಯವರಿಗೆ, ಹೆಂಡತಿಗೆ ಹೇಳ ಬೇಡ ಎಂತಲೇ ಸಲಹೆ ನೀಡದೇ ಇರಲಾರರು.

ಆ ಥಾಯ್ಲೆಂಡ್ ಹೆಸರೇ ಅಂಥದ್ದು. ಈ ಹೆಸರು ಹೆಸರು ಕೇಳಿದರೆ ಸಾಕು ಕೇಳಿಸಿಕೊಳ್ಳುವವರ ಮನಸು ಅಲ್ಲಿನ ರಾತ್ರಿಯಿಡೀ ಕುಣಿದು-ಕುಡಿದು ಕುಪ್ಪಳಿಸುವ ಹುಡುಗಿಯರು, ನಶೆಯಲ್ಲಿ ತೇಲಾ ಡುವ ಜಗತ್ತಿನೆಡೆಗೆ ಹರಿಯುತ್ತದೆ. ಇನ್ನೂ ಕೆಲವರು ಯಾಕಪ್ಪಾ ಅಲ್ಲಿಗೆ ಹೋಗ್ತೀಯ? ಅಲ್ಲಿಗೆ ಹೋಗಿ ಯಾವ್ಯಾವುದೋ ರೋಗ ತಗುಲಿಸಿಕೊಂಡು ಬಂದೀಯಾ? ಬೇರೆ ಯಾವುದಾದರೂ ದೇಶಕ್ಕೆ  ಎಂಬ ಸಲಹೆಗಳನ್ನೂ ಕೊಡುತ್ತಾರೆ. ಇನ್ನು, ಅಲ್ಲಿನ ನಿತ್ಯ ಹರಿದ್ವರ್ಣದ ಪ್ರಕೃತಿ ಸೌಂದ ರ್ಯವನ್ನು ವರ್ಣಿಸುತ್ತಾ ಅಲ್ಲಿ ಹೋಗು, ಅದು ಚೆನ್ನಾಗಿದೆ, ಇಲ್ಲಿ ಹೋಗು ಸುಂದರ ಪರಿಸರವಿದೆ ಎಂಬ ಮಾರ್ಗದರ್ಶನವನ್ನೂ ಮಾಡುವವರಿದ್ದಾರೆ. ಹೀಗೆ ಥಾಯ್ಲೆಂಡಿನ ಹೆಸರು ಕೇಳಿದರೆ ಮೂಗು ಮುರಿಯಲು ಕಾರಣ ಇಲ್ಲದಿಲ್ಲ.

ನಮ್ಮ ದೇಶದ ಮುಂಬೈನಲ್ಲಿ ಒಂದೆರಡು ರೆಡ್‌ಲೈಟ್ ರಸ್ತೆಗಳನ್ನು ಬಿಟ್ಟರೆ ಎಲ್ಲಾ ಕಡೆ ಸಂಪ್ರ ದಾಯಸ್ಥ ಇದೆ. ಆದರೆ, ಥಾಯ್ಲೆಂಡಿನ ಯಾವ ಮೂಲೆಗೆ ಹೋದರೂ ಅಣಬೆಯಂತೆ ತಲೆ  ರುವ ಮಸಾಜ್ ಪಾರ್ಲರ್‌ಗಳ ಮುಂದೆ ನಿಲ್ಲುವ 16ರಿಂದ 35ರ ವಯೋಮಾನದ ಲಲನಾ ಮಣಿಯರು ಪ್ರವಾಸಿಗರನ್ನು  ‘ಬಾದಿ ಮಸಾಜ್… ಬಾದಿ ಮಸಾಜ್’ ಕಮಿನ್ ಕಮಿನ್ (ಇಂಗ್ಲಿಷ್ ಉಚ್ಛಾರಣೆ ಸರಿಯಾಗಿ ಬರದ ಕಾರಣ ಬಾಡಿ ಮಸಾಜ್‌ಗೆ ಹೀಗೆ ಕರೆಯುತ್ತಾರೆ) ಎಂದು ಕೈಬೀಸಿ ಕರೆಯುತ್ತಿರುತ್ತಾರೆ. ಇದು ಕೇವಲ ಬಾಡಿ ಮಸಾಜ್‌ಗೆ ಸೀಮಿತವಾಗಿದ್ದರೆ ಅಡ್ಡಿ ಇರುತ್ತಿರಲಿಲ್ಲವೇನೋ? ಆದರೆ, ಆ ಬಾಡಿ ಮಸಾಜ್ ಪಾರ್ಲರ್ ಒಳ ಹೊಕ್ಕರೆ ಅಲ್ಲೊಂದು ಅಕ್ರಮ ಚಟುವಟಿಕೆಯ ಲೋಕವೇ ತೆರೆದುಕೊಳ್ಳುತ್ತದೆ.

ಇನ್ನು  ವೇಶ್ಯಾವಾಟಿಕೆ ಕಾನೂನು ಬದ್ಧವಾಗಿದೆ. ಈ ವೇಶ್ಯಾವಾಟಿಕೆ ದಂಧೆ ಎಷ್ಟರ ಮಟ್ಟಿಗೆ ನಡೆಯುತ್ತದೆಯೆಂದರೆ ಪ್ರವಾಸಿ ಗರು ತಂಗುವ ಹೋಟೆಲ್‌ಗಳ ಮುಂದೆ ಸಾವಿರಾರು ವೇಶ್ಯೆಯರ ದಂಡೇ ಇರುತ್ತದೆ. ಮಧ್ಯಾಹ್ನ 2 ಗಂಟೆ ಆಗುತ್ತಿದ್ದಂತೆ ಈ ವೇಶ್ಯಾವಾಟಿಕೆ ದಂಧೆ ಆರಂಭ ವಾಗುತ್ತದೆ.

ಇದು ಥಾಯ್ಲೆಂಡ್ ದೇಶದ ನೆಗೆಟಿವ್ ಗುಣ ವಾದರೆ, ಸಾಕಷ್ಟು ಪಾಸಿಟಿವ್ ಗುಣಗಳೂ ಇವೆ. ಆದರೆ, ನಕಾರಾತ್ಮಕ ಗುಣಗಳೇ ಈ ಗುಣಾತ್ಮಕ ಅಂಶವನ್ನು ಮರೆ ಮಾಚುತ್ತಿವೆ.

ಥಾಯ್ಲೆಂಡಿನಲ್ಲಿ ಪ್ರಮುಖವಾಗಿ ಪಟಾಯ, ಫುಕೆಟ್  ಕ್ರಾಬಿ ಜಿಲ್ಲೆಗಳಿವೆ. ಈ ಪೈಕಿ ಪಟಾಯ ಮತ್ತು ಫುಕೆಟ್ ವೇಶ್ಯಾವಾಟಿಕೆ ಹೆಸರನ್ನು ಅನ್ವರ್ಥವಾಗಿವೆ. ಈ ಸ್ಥಳಗಳು ಹೆಚ್ಚಾಗಿ ಯುವ ಪೀಳಿಗೆಯನ್ನು ಆಕರ್ಷಿಸುತ್ತಿವೆ!

ಇವುಗಳಿಗೆ ತದ್ವಿರುದ್ಧ ಎಂಬಂತೆ ಕ್ರಾಬಿ ಹಚ್ಚ ಹಸುರಿನ ಸೌಂದರ್ಯವನ್ನು ಹೊದ್ದುಕೊಂಡು ಮಲಗಿದೆ. ಅಲ್ಲಿನ ಪ್ರಶಾಂತ ವಾತಾವರಣ, ಭೋರ್ಗರೆಯುವ ಸಮುದ್ರ, ಸಮುದ್ರದಲ್ಲಿ ಕಣ್ಣಾ ಯಿಸಿದೆಲ್ಲೆಲ್ಲಾ ಕಾಣುವ ದ್ವೀಪ ಸಮೂಹಗಳು ಪ್ರವಾಸಿಗರನ್ನು ಅರೆಕ್ಷಣ ಆಶ್ಚರ್ಯಚಕಿತ ಗೊಳಿಸುತ್ತವೆ.

ಹಾಗಂತ ಈ ಕ್ರಾಬಿ ಬಗ್ಗೆ ಪ್ರವಾಸಿಗರಿಗೆ ಹೆಚ್ಚು ಪ್ರಚಲಿತವಾಗಿಲ್ಲ. ಏಕೆಂದರೆ, ಪಟಾಯ,  ಮತ್ತು ರಾಜಧಾನಿ ಬ್ಯಾಂಕಾಂಕ್‌ನ ‘ರಾತ್ರಿ’ ಲೈಫಿನ ಅಬ್ಬರದಲ್ಲಿ ಕ್ರಾಬಿಯ ಸೌಂದರ್ಯ ಕಳೆದು ಹೋಗಿತ್ತು.

ಕ್ರಾಬಿಯನ್ನು ಪರಿಚಯಿಸಿದ್ದು ‘ದಿ ಬೀಚ್’!

2000 ಇಸವಿಯವರೆಗೂ ವಿದೇಶಿ ಪ್ರವಾಸಿಗರು ಅಷ್ಟೇ ಏಕೆ ಸ್ವತಃ ಥಾಯ್ಲೆಂಡಿನ ಜನರು ಈ ಕ್ರಾಬಿಯತ್ತ ತಲೆ ಹಾಕುತ್ತಿರಲಿಲ್ಲ. ಏಕೆಂದರೆ, ಥಾಯ್ಲೆಂಡಿನ ಜನರಿಗೆ ಸಮುದ್ರ, ದ್ವೀಪಗಳು ಹೊಸದೇನಲ್ಲ. ಇಂತಹ ಹತ್ತಾರು ದ್ವೀಪಗಳನ್ನು ಪಟಾಯ, ಫುಕೆಟ್ ಆಜುಬಾಜಿನಲ್ಲಿ ನೋಡಿದ್ದಾರೆ. ಆದರೆ, 2000 ರಲ್ಲಿ ಹಾಲಿವುಡ್‌ನ ಖ್ಯಾತ ನಟ ಲಿಯನಾರ್ಡೊ ಡಿ  ನಟನೆಯ ‘ದಿ ಬೀಚ್’ ಚಿತ್ರ ಹೊರಬಂದದ್ದೇ ತಡ ಕ್ರಾಬಿಯ ಚಿತ್ರಣವೇ ಬದಲಾಗಿ ಹೋಯಿತು. ಈ ಚಿತ್ರದಲ್ಲಿ ಕ್ರಾಬಿಯ ಸುತ್ತಮುತ್ತಲಿನ ಬೀಚ್‌ಗಳ ಸೌಂದರ್ಯವನ್ನು ಹಾಸುಹೊಕ್ಕಾಗಿ ಚಿತ್ರೀಕರಿಸಿ ಹೊರ ಜಗತ್ತಿಗೆ ತೋರಿಸಿಕೊಡಲಾಗಿತ್ತು. ಈ ಚಿತ್ರ ನೋಡಿಕೊಂಡೆ ಪ್ರವಾಸಿಗರು ಕ್ರಾಬಿ ಬೀಚ್‌ಗಳತ್ತ ಧಾವಿಸತೊಡಗಿದರು. ಥಾಯ್ಲೆಂಡಿನ ಪ್ರವಾಸಿಗರೂ ಕೂಡ. ಯೂರೋಪ್, ಆಸ್ಟ್ರೇಲಿಯಾ ಖಂಡಗಳು ಮತ್ತು ಭಾರತೀಯ ಉಪಖಂಡದ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರಾಬಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಕ್ರಾಬಿ ಎಂದರೆ ಏಡಿಯಲ್ಲ,ಹನುಮಂತ!

ಅಂದಹಾಗೆ  ಎಂದಾಕ್ಷಣ ಎಲ್ಲರಿಗೆ ನೆನಪಾಗುವುದು ಇಂಗ್ಲಿಷ್ ಭಾಷೆಯ ಕ್ರಾಬ್(ಏಡಿ) ಎಂದು. ಇದಕ್ಕೆ ಪೂರಕವೆಂಬಂತೆ ಕ್ರಾಬಿ ಪಟ್ಟಣದ ಪ್ರವೇಶ ದ್ವಾರದಲ್ಲಿ ಬೃಹತ್‌ಗಾತ್ರದ ಏಡಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸ ಲಾಗಿದೆ. ಆದರೂ ಎಲ್ಲರೂ ಅಂದುಕೊಂಡಂತೆ ಕ್ರಾಬಿ ಎಂದರೆ ಏಡಿಯಲ್ಲ, ಹನುಮಂತ! ಇದು ಆಶ್ಚರ್ಯವಾದರೂ ಥಾಯ್ ಭಾಷೆಯಲ್ಲಿ ಕ್ರಾಬಿ ಎಂದರೆ ಹನುಮಂತನಂತೆ. ಥಾಯ್ಲೆಂಡ್ ಬೌದ್ಧರ ನಾಡಾದರೂ ಈ ಕ್ರಾಬಿ ಪ್ರಾಂತ್ಯವನ್ನು ಆಳಿ ಹೋಗಿರುವ ರಾಜ ಮಹಾರಾಜರು ಮಹಾಕಾವ್ಯ ರಾಮಾಯಣವನ್ನು ಬರೆದಿದ್ದಾರೆ. ಇದರ ಹೆಸರು ರಾಮ್‌ಕೀನ್  ಅದೇರೀತಿ ರಾಜರ ಹೆಸ ರನ್ನು ರಾಮ, ರಾಮ1, ರಾಮ2 ಹೀಗೆ ಕರೆಯ ಲಾಗುತ್ತಿತ್ತಂತೆ. 1767ರ ಸುಮಾರಿಗೆ ಈ ರಾಮ್‌ಕೀನ್ ಅನ್ನು ಬರೆಯಲಾಗಿದ್ದು, ಅಂದಿನಿಂದ ಇಂದಿನವರೆಗೆ ಇಲ್ಲಿನ ಜನ ಇದನ್ನೇ ಅನುಸರಿಸುತ್ತಿ  ದ್ದಾರೆ. ಅದರಲ್ಲಿ ಬರುವ ಹನುಮಂತನ ಪಾತ್ರಕ್ಕೆ ಗೌರವ ಕೊಡುವ ಸಲುವಾಗಿ ಈ ಜಿಲ್ಲೆಗೆ ಕ್ರಾಬಿ ಎಂದು ಹೆಸರಿಡಲಾಗಿದ್ದರೆ,

ಇಲ್ಲಿ ಹರಿಯುವ ಬೃಹತ್ ನದಿಗೂ ಕ್ರಾಬಿ ಎಂದು ನಾಮಕರಣ ಮಾಡ ಲಾಗಿದೆ. ಅಷ್ಟರ ಮಟ್ಟಿಗೆ ಹನುಮಂತನಿಗೆ ಇಲ್ಲಿ ಗೌರವ  ಆದರೆ, ಎಲ್ಲಿಯೂ ಹನುಮನ ಗುಡಿಯಾಗಲೀ, ಹನುಮಂತನಿಗೆ ಪೂಜಾ ಕೈಂಕರ್ಯಗಳಾಗಲೀ ಇಲ್ಲ.

136 ದ್ವೀಪಗಳ ಸುಂದರ ಕಡಲು

ಥಾಯ್ಲೆಂಡಿನ ನೈರುತ್ಯ ಭಾಗದಲ್ಲಿರುವ ಕ್ರಾಬಿಗೆ ಹೊಂದಿಕೊಂಡಿರುವ ಬಂಗಾಳಕೊಲ್ಲಿಯನ್ನು ಅಂಡಮಾನ್ ಸಮುದ್ರ ಎಂದು ಕರೆಯಲಾಗುತ್ತದೆ. ಈ ಕಡಲು ತನ್ನೊಡಲಲ್ಲಿ 136 ಸುಂದರ ದ್ವೀಪಗಳನ್ನು ಇಟ್ಟುಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪೋಡಾ ದ್ವೀಪ, ಕೋಹ್ ದ್ವೀಪ, ಕೊಹ್ ಪೋಡ, ಫೀ ಫೀ ದ್ವೀಪ, ಲಗೂನ್ ದ್ವೀಪ, ಫೀ ದ್ವೀಪ, ಕೊಹ್ ಹಾಂಗ್, ಕೊಹ್ ಲಾಂಟ,  – ಕೊಹ್ ಮೊರ್-ಕೊಹ್ ಕೈ ದ್ವೀಪ, ಕೊಹ್ ಪಾಕ್‌ಬಿಯಾ… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕ್ರಾಬಿ ದ್ವೀಪಗಳ ಸಂಖ್ಯೆ ಬರೋಬ್ಬರಿ ನೂರರ ಗಡಿ ದಾಟುತ್ತದೆ. ಕಿಲೋಮೀಟರ್‌ಗೆ ಒಂದರಂತೆ, ಎರಡರಂತೆ, ಮೂರರಂತೆ ಸಿಗುವ ಈ ದ್ವೀಪಗಳು ಒಂದಕ್ಕಿಂತ ಒಂದು ಸುಂದರ, ಮನೋಹರ. ಇಲ್ಲಿ ಪಚ್ಚೆ ಹಸಿರಿನ  ಬಣ್ಣದ ನೀರಿನಲ್ಲಿ ಸ್ಕೂಬಾ ಡೈವ್ ಮಾಡಿ ಸಮುದ್ರದಾಳಕ್ಕೆ ಹೋದರೆ ನಿಮಗೆ ಮುತ್ತಿಕ್ಕುವ ರೀತಿಯಲ್ಲಿ ವಿವಿಧ ಬಣ್ಣಗಳ ಆಕರ್ಷಣೀಯ ಮೀನುಗಳು ನಿಮ್ಮ ಬಳಿ ಬರುತ್ತವೆ.

ಹಸಿರು ಬಣ್ಣದ ನೀರಿನ ಕಡಲು

ಇಲ್ಲಿನ ಕಡಲು ಒಂದೊಂದು ಕಡೆ ಒಂದೊಂದು ಬಣ್ಣದ್ದಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿ ರುವ ಫುಕೆಟ್‌ನ ಕಡಲಿನ ನೀರಿನ ಬಣ್ಣ ನೀಲಿಯದ್ದಾದರೆ ಕ್ರಾಬಿಯಲ್ಲಿನ ಸಮುದ್ರದ ನೀರಿನ ಬಣ್ಣ ಹಸಿರು ಬಣ್ಣದ್ದು. ಕಡಲ ನಡುವೆ ಶಿಲಾಮೂರ್ತಿಗಳಂತೆ ನಿಂತಿರುವ ಬೆಟ್ಟಗಳು ಸುಣ್ಣದ ಕಲ್ಲುಗಳ ಅಂಶವನ್ನು ಹೊಂದಿರುವುದರಿಂದ ಇಲ್ಲಿನ ನೀರು ತಿಳಿಯಾಗಿದೆ. ಸಮುದ್ರದ ದಂಡೆ ಯಲ್ಲಿ ನಿಂತು ಕಡಲ ಅಡಿಯಲ್ಲಿ ಸ್ವಚ್ಛಂದವಾಗಿ ಈಜಾಡುವ ತರಹೇವಾರಿ ಜಲಚರಗಳನ್ನು ದಂಡೆಯ ಮೇಲಿಂದಲೇ  ತಿಳಿ. ಈ ತಿಳಿನೀರಿನ ಕಡಲಿನಲ್ಲಿ ಬೋಟ್‌ನಲ್ಲಿ ಒಮ್ಮೆ ವಿಹರಿಸಿದರೆ ನಮಗೆ ಅಲ್ಲಲ್ಲಿ ಬಗೆಬಗೆಯ ಆಕೃತಿಗಳಂತೆ ಎದ್ದು ನಿಂತಿರುವ ದ್ವೀಪಗಳು ಎದುರುಗೊಳ್ಳುತ್ತವೆ. ಕೋಳಿ ತಲೆಯನ್ನು ಹೋಲುವ ಚಿಕನ್ ದ್ವೀಪ (ಕೊಹ್ ಕೈ) ಒಂದು ಕಡೆ ಇದ್ದರೆ, ದೆವ್ವದ ಮುಖವಾಡವನ್ನು ತೊಟ್ಟಂತಿರುವ ಗೋಸ್‌ಟ್ ಐಲ್ಯಾಂಡ್ ಮತ್ತೊಂದು ಕಡೆ ಇದೆ. ಕ್ರಾಬಿಯ ಅತ್ಯಂತ ಸುಂದರ ದ್ವೀಪಗಳಲ್ಲಿ ಫೀ ಫೀ ದ್ವೀಪ ಎಲ್ಲದಕ್ಕೂ ಸುಂದರ.

ಎಲ್ಲೆಲ್ಲಿಯೂ ಸ್ವಚ್ಛತೆ

ಕ್ರಾಬಿಯ ಜನರಿಗೆ ಮತ್ತು ಆಡಳಿತಕ್ಕೆ  ಅನ್ನ. ಪ್ರವಾಸೋದ್ಯಮ ನಿಂತಿ ತೆಂದರೆ ಒಪ್ಪೊತ್ತಿನ ತುತ್ತಿಗೂ ಹಾಹಾಕಾರ ಅನುಭವಿಸುವ ಸ್ಥಿತಿ. ಹೀಗಾಗಿ ಇಲ್ಲಿನ ಜನರು ಆತಿಥ್ಯಕ್ಕೆ ಹೆಚ್ಚಿನ ಆಸ್ಥೆ ವಹಿಸುತ್ತಾರೆ. ಅದೇರೀತಿ ಸ್ವಚ್ಛತೆ ಎಂದರೆ ಕ್ರಾಬಿ ಜನ, ಕ್ರಾಬಿ ಎಂದರೆ ಸ್ವಚ್ಛತೆ ಎಂಬಂತಿದೆ. ಇಲ್ಲಿನ ಯಾವುದೇ ಬೀಚ್‌ಗಳಿಗೆ, ದ್ವೀಪಗಳಿಗೆ ಹೋದರೂ ಅಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳು ಕಾಣಸಿಗುವುದಿಲ್ಲ. ನಾಲ್ಕೈದು ಹಟ್‌ಗಳಿರುತ್ತವೆ. ಅಲ್ಲಿ ಪ್ರವಾಸಿಗರ ಭದ್ರತೆಗೆಂದು ಭದ್ರತಾ ಸಿಬ್ಬಂದಿ ಇರುತ್ತಾರೆ. ಆ ಹಟ್‌ಗಳಲ್ಲಿಯೇ ಆಹಾರ ಸೇವನೆ ಮಾಡಬೇಕು. ಆಹಾರ  ಮಾಡಿದ ನಂತರದ ತ್ಯಾಜ್ಯದಲ್ಲಿ ಒಂದು ಚೂರನ್ನೂ ಸಹ ಸಮುದ್ರದ ಕಿನಾರೆಯಲ್ಲಿ ಯಾರೂ ಹಾಕುವುದಿಲ್ಲ. ತಾವು ಬರುವ ಬೋಟ್‌ಗಳಲ್ಲಿಯೇ ಇರುವ ಡಸ್‌ಟ್ಬಿನ್‌ಗಳಿಗೆ ಹಾಕಲಾಗುತ್ತದೆ. ಹೀಗಾಗಿ ಕಿನಾರೆಗಳಲ್ಲಿ ಒಂದು ಚೂರು ಕಸವೂ ಇರುವುದಿಲ್ಲ. ಹೀಗಾಗಿ ಜಗತ್ತಿನ ಮೊದಲ ಹತ್ತು ಅತ್ಯುತ್ತಮ ಕಡಲ ಕಿನಾರೆಗಳಲ್ಲಿ ಇಲ್ಲಿನ ಕೆಲವು ಕಿನಾರೆಗಳು ಸ್ಥಾನ ಪಡೆದಿವೆ.

Tags

Related Articles

Leave a Reply

Your email address will not be published. Required fields are marked *

Language
Close