ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಾಣಿಜ್ಯ

Gold Price Today On August 10th 2026: ಚಿನ್ನದ ದರದಲ್ಲಿಂದು ಕೊಂಚ ಇಳಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿಂದು ಕೊಂಚ ಇಳಿಕೆ; ಬೆಲೆ ಇಲ್ಲಿದೆ

Gold Rate Today: ಚಿನ್ನದ ಬೆಲೆಯಲ್ಲಿಂದು ಕೊಂಚ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 35 ರೂ. ಇಳಿಕೆಯಾಗಿ 13,930 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 38 ರೂ. ಇಳಿಕೆಯಾಗಿ 15,197 ರೂ. ಇದೆ.

ರಷ್ಯಾದಿಂದ ಭಾರತಕ್ಕೆ ರೈಲು ಮಾರ್ಗ! 4 ದೇಶಗಳ ಮೂಲಕ ಹಾದು ಬರುವ ಟ್ರೈನ್‌ನಿಂದ ಸೃಷ್ಟಿಯಾಗಲಿದೆ ಸಂಪರ್ಕ ಕ್ರಾಂತಿ

ರಷ್ಯಾದಿಂದ ಭಾರತಕ್ಕೆ ಬರಲಿದೆ ರೈಲು! ತಪ್ಪಲಿದೆ ಹೊರ್ಮುಜ್‌ ಜಲಸಂಧಿ ಅವಲಂಬನೆ

Marat Khusnullin: ಭಾರತದ ಜತೆ ನೇರ ಸಂಪರ್ಕ ಸಾಧಿಸಲು ರೈಲು ಮಾರ್ಗ ನಿರ್ಮಿಸುವ ಸಾಧ್ಯತೆ ಬಗ್ಗೆ ರಷ್ಯಾ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ʼʼರಷ್ಯಾದಿಂದ ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಸಂಪರ್ಕ ಜಾಲವನ್ನು ನಿರ್ಮಿಸುವ ಅಗತ್ಯವಿದೆʼʼ ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲ್ಲಿನ್ ಪ್ರತಿಪಾದಿಸಿದ್ದಾರೆ. ಒಂದುವೇಳೆ ಈ ಯೋಜನೆ ಸಾಕಾರಗೊಂಡರೆ ಹೊರ್ಮುಜ್‌ ಜಲಸಂಧಿಯ ಮೇಲಿನ ಅವಲಂಬನೆ ತಪ್ಪಲಿದೆ.

ಯುಪಿಐ ಪಾವತಿಗೆ ಗ್ರಾಹಕರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ: ಕೇಂದ್ರದಿಂದ ಅಭಯ

ಯುಪಿಐ ಪಾವತಿ ಶುಲ್ಕದ ಬಗ್ಗೆ ಕೇಂದ್ರದಿಂದ ಮಹತ್ವದ ಸ್ಪಷ್ಟನೆ

UPI Will Stay Free: ಯುಪಿಐ ಮೂಲಕ ಹಣ ಪಾವತಿಸುವ ಗ್ರಾಹಕರು ಮುಂದೆಯೂ ಯಾವುದೇ ವಹಿವಾಟು ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಸಣ್ಣ ವ್ಯಾಪಾರಿಗಳಿಗೂ ಯುಪಿಐ ಪಾವತಿ ಸ್ವೀಕರಿಸಲು MDR ಶುಲ್ಕ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

ರಷ್ಯಾ ತೈಲ ಖರೀದಿಸುವ ಭಾರತದ ವಿರುದ್ಧ ಅಮೆರಿಕ ಕೆಂಡ; ಶೇಕಡಾ 100 ಸುಂಕ ವಿಧಿಸುವ ಸೆನೆಟರ್ ಲಿಂಡ್ಸೆ ಗ್ರಹಾಂ ಮಸೂದೆಗೆ ಅಂಗೀಕಾರ

ರಷ್ಯಾ ವಿರುದ್ಧ ನಿರ್ಬಂಧ ಮಸೂದೆ ಅಂಗೀಕಾರ

ರಷ್ಯಾ ವಿರುದ್ಧ ನಿರ್ಬಂಧ ವಿಧಿಸುವ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಗೌರವಾರ್ಥ ಮಸೂದೆಯನ್ನು ಅಮೆರಿಕದ ಸೆನೆಟ್ ಅನುಮೋದಿಸಿದೆ. ಈ ಮಸೂದೆಯು ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲದ ವಿಶ್ವದ ಐದು ಅಗ್ರ ಖರೀದಿದಾರರ ಮೇಲೆ ಪರಿಣಾಮ ಬೀರಲಿದೆ. ಉಕ್ರೇನ್ ಯುದ್ಧ ಪ್ರಾರಂಭಿಸಿದ್ದಕ್ಕಾಗಿ ರಷ್ಯಾ ವಿರುದ್ಧ ಹೊಸ ನಿರ್ಬಂಧಗಳನ್ನು ಗ್ರಹಾಂ ಬಲವಾಗಿ ಪ್ರತಿಪಾದಿಸಿದ್ದರಿಂದ ಅವರ ಹೆಸರನ್ನು ಈ ಮಸೂದೆಗೆ ಇಡಲಾಗಿದೆ.

ಕರ್ನಾಟಕದೊಂದಿಗೆ ಪಾಲುದಾರಿಕೆ ವಿಸ್ತರಿಸಲು ಅಮೆರಿಕ ಬದ್ಧ: ರಾಯಭಾರಿ ಸೆರ್ಗಿಯೊ ಗೋರ್ ಮಹತ್ವದ ಹೇಳಿಕೆ

ಕರ್ನಾಟಕದೊಂದಿಗೆ ಪಾಲುದಾರಿಕೆ ವಿಸ್ತರಿಸಲು ಅಮೆರಿಕ ಬದ್ಧ: ಸೆರ್ಗಿಯೊ ಗೋರ್

US Ambassador Sergio Gor: ಕರ್ನಾಟಕದೊಂದಿಗೆ ತನ್ನ ಪಾಲುದಾರಿಕೆಯನ್ನು ವಿಸ್ತರಿಸಲು ಅಮೆರಿಕ ಬದ್ಧವಾಗಿದೆ ಎಂದು ಭಾರತದಲ್ಲಿರುವ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದರು. ಕರ್ನಾಟಕದಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳಿದ್ದು, ಅವು ಸ್ಥಿರವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.

Gold Price Today On August 8th 2026: ಭಾರಿ ಏರಿಕೆ ಕಂಡ ಚಿನ್ನದ ದರ; ಇಂದು ಹೆಚ್ಚಾಗಿದ್ದು ಬರೋಬ್ಬರಿ 1,000 ರುಪಾಯಿ

ಚಿನ್ನದ ದರದಲ್ಲಿ ಭಾರಿ ಏರಿಕೆ

Gold Price Today: ಬಂಗಾರದ ದರದಲ್ಲಿ ಶನಿವಾರವೂ (ಆಗಸ್ಟ್‌ 8) ಏರಿಕೆ ಕಂಡು ಬಂದಿದ್ದು, ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 100 ರುಪಾಯಿ ಹೆಚ್ಚಾಗಿ 13,965 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 109 ರುಪಾಯಿ ದುಬಾರಿಯಾಗಿ 15,235 ರುಪಾಯಿಗೆ ಬಂದಿದೆ.

ಶುಲ್ಕ ಕಡಿತ, ಗ್ರಾಹಕರಿಗೆ ರಿಯಾಯಿತಿಯಿಂದ ಆರ್ಥಿಕ ಹೊರೆ:  ಸ್ವಿಗ್ಗಿಗೆ ಬೆಂಗಳೂರಿನ ಹೊಟೇಲ್ ಆಡಳಿತ ಮಂಡಳಿಯಿಂದ ಪತ್ರ

ಸ್ವಿಗ್ಗಿ ಮೇಲೆ ಹೊಟೇಲ್ ಆಡಳಿತ ಮಂಡಳಿ ಅಸಮಾಧಾನ

ದೇಶದ ಸುಪ್ರಸಿದ್ದ ಆಹಾರ ವಿತರಣೆ ಕಂಪೆನಿಗಳಲ್ಲಿ ಒಂದಾದ ಸ್ವಿಗ್ಗಿಯಿಂದಾಗಿ ಹೊಟೇಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಎದುರಿಸುತ್ತಿರುವ ಹಲವಾರು ಕಾರ್ಯಾಚರಣೆಯ ಸಮಸ್ಯೆಗಳ ಕುರಿತಾಗಿ ಸಿಇಒ ರೋಹಿತ್ ಕಪೂರ್ ಅವರಿಗೆ ಬೆಂಗಳೂರಿನ ಹೊಟೇಲ್ ಆಡಳಿತ ಮಂಡಳಿ ಪತ್ರ ಬರೆದಿದ್ದು, ಬಡ್ತಿ, ಕಮಿಷನ್‌, ರಿಯಾಯಿತಿ ಶುಲ್ಕಗಳು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಭೀಮ ಮಳಿಗೆಯ 22ನೇ ಸುವರ್ಣ ವಾರ್ಷಿಕೋತ್ಸವ

ಭೀಮ ಮಳಿಗೆಯ 22ನೇ ಸುವರ್ಣ ವಾರ್ಷಿಕೋತ್ಸವ

ಈ ಮಹತ್ವದ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು, ಭೀಮ ತನ್ನ ಗ್ರಾಹಕರಿಗಾಗಿ ವಿಶೇಷ ವಾರ್ಷಿಕೋ ತ್ಸವದ ಕೊಡುಗೆಗಳನ್ನು ನೀಡುತ್ತಿದ್ದು. ಈ ಮೂರು ದಿನಗಳ ಸಂಭ್ರಮಾಚರಣೆಯ ಅವಧಿಯಲ್ಲಿ, ಗ್ರಾಹಕರು ವಜ್ರಾಭರಣಗಳ ಮೇಕಿಂಗ್ ಶುಲ್ಕದಲ್ಲಿ 100% ವರೆಗೆ ರಿಯಾಯಿತಿ ಹಾಗೂ ಚಿನ್ನ ಮತ್ತು ಬೆಳ್ಳಿ ಆಭರಣಗಳ ಮೇಕಿಂಗ್ ಶುಲ್ಕದಲ್ಲಿ 60% ವರೆಗೆ ರಿಯಾಯಿತಿ ಪಡೆಯಬಹುದು.

Gold Price Today On August 7th 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂ. ಏರಿಕೆಯಾಗಿ 13,740 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 16 ರೂ. ಏರಿಕೆಯಾಗಿ 14,989 ರೂ. ಇದೆ.

ದಶಕದ ಮೈಲುಗಲ್ಲಿನಲ್ಲಿ ಜಿ.ಎಸ್.ಟಿ.: ಮುಂದಿನ ತಲೆಮಾರಿನ ಸುಧಾರಣೆಗಳಿಗೆ ಎಫ್.ಐ.ಎಸ್.ಎಂ.ಇ. ಕರೆ

ದಶಕದ ಮೈಲುಗಲ್ಲಿನಲ್ಲಿ ಜಿ.ಎಸ್.ಟಿ

ದೇಶಾದ್ಯಂತ ಇರುವ ಎಂ.ಎಸ್‌ಎಂ.ಇ.ಗಳ ಪ್ರತಿಕ್ರಿಯೆ ಆಧರಿಸಿ, ಫೆಡರೇಶನ್ ಆಫ್ ಇಂಡಿಯನ್ ಮೈಕ್ರೋ ಅಂಡ್ ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೈಸಸ್ (ಎಫ್.ಐ.ಎಸ್.ಎಂ.ಇ) ಸಂಸ್ಥೆಯು ತೆರಿಗೆ ಜಾರಿಯನ್ನು ಸಡಿಲಗೊಳಿಸದೆ, ನಿಯಮಗಳ ಪಾಲನೆಯ ವೆಚ್ಚವನ್ನು ಕಡಿಮೆ ಮಾಡಲು, ದುಡಿಯುವ ಬಂಡವಾಳವನ್ನು ಸುಲಭವಾಗಿ ಸಿಗುವಂತೆ ಮಾಡಲು, ಪಾರದರ್ಶಕತೆ ಹೆಚ್ಚಿಸಲು ಮತ್ತು ಸ್ವಯಂ ಪ್ರೇರಿತ ತೆರಿಗೆ ಪಾವತಿ ಬಲಪಡಿಸಲು ಪ್ರಾಯೋಗಿಕ ಸುಧಾರಣೆಗಳನ್ನು ಪ್ರಸ್ತಾಪಿಸಿದೆ.

ಅಮೆರಿಕ- ಇರಾನ್ ಸಂಘರ್ಷದ ನಡುವೆಯೂ ರೆಪೊ ದರದಲ್ಲಿ ಸ್ಥಿರತೆ ಕಾಯ್ದುಕೊಂಡ ಆರ್‌ಬಿಐ

ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಆರ್‌ಬಿಐ

ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಭೆಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನಿರ್ಧರಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆಯೂ ಆರ್‌ಬಿಐ ರೆಪೊ ದರವನ್ನು ಶೇ. 5.25ರಷ್ಟು ಕಾಯ್ದುಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದರು.

Gold Price Today On August 5th 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ ನೋಡಿ

ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ ನೋಡಿ

ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 160ರೂ. ಏರಿಕೆಯಾಗಿ 13,360 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 175 ರೂ. ಇಳಿಕೆಯಾಗಿ 14,575 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,06,880 ರೂ. ಇದ್ದರೆ, 10 ಗ್ರಾಂಗೆ 1,33,600 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 13,36,000 ರೂ. ಪಾವತಿಸಬೇಕಾಗುತ್ತದೆ.

10 ವರ್ಷಗಳಲ್ಲಿ ಕೇಂದ್ರದಿಂದ 17 ಕೋಟಿ ಉದ್ಯೋಗ ಸೃಷ್ಟಿ; ಯುಪಿಎ ಅವಧಿಗಿಂತ 6 ಪಟ್ಟು ಹೆಚ್ಚು: ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ

10 ವರ್ಷಗಳಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ ಸರ್ಕಾರದಿಂದ ಮಾಹಿತಿ

17 Crore Jobs Created in 10 Years: 2014 ಮತ್ತು 2024ರ ನಡುವೆ ದೇಶದಲ್ಲಿ 17 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು. ಇದು ಯುಪಿಎ ಅವಧಿಯಲ್ಲಿನ ಬೆಳವಣಿಗೆಗಿಂತ ಸುಮಾರು ಆರು ಪಟ್ಟು ಹೆಚ್ಚು ಎಂದು ಅವರು ವಿವರಿಸಿದರು.

ಏರ್ ಇಂಡಿಯಾ ವಿಮಾನ ಹಾರಾಟದ ವೇಳೆ ಟರ್ಬುಲೆನ್ಸ್: ಏಕಾಏಕಿ 300 ಅಡಿ ಕುಸಿದು 12 ಪ್ರಯಾಣಿಕರಿಗೆ ಗಾಯ; ವಿಡಿಯೊ ವೈರಲ್‌

ವಿಮಾನ ಟರ್ಬುಲೆನ್ಸ್: ಏರ್ ಇಂಡಿಯಾ ಪ್ರಯಾಣಿಕರಿಗೆ ಗಾಯ

ಥೈಲ್ಯಾಂಡ್ ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಮಂಗಳವಾರ ತೀವ್ರ ವಾಯುಭಾರ ಕುಸಿತದಿಂದ ಪ್ರಕ್ಷುಬ್ಧತೆಗೆ ಗುರಿಯಾಗಿದೆ. ಇದರಿಂದ ವಿಮಾನವು ಸುಮಾರು 300 ಅಡಿಗಳಷ್ಟು ಕುಸಿದಿದೆ. ಇದರಿಂದ 12 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

Gold Price Today On August 4th 2026: ಚಿನ್ನದ ದರದಲ್ಲಿಂದು ಕೊಂಚ ಇಳಿಕೆ;  ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿಂದು ಕೊಂಚ ಇಳಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಇಳಿಕೆಯಾಗಿ 13,200 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂ. ಇಳಿಕೆಯಾಗಿ 14,400 ರೂ. ಇದೆ.

ಭಾರತೀಯ ಫ್ಯಾಷನ್ ವೀಕ್‌ನಲ್ಲಿ ಹೌಸ್ ಆಫ್ ಮಸಾಬಾ ಅವರ ವಧು ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾದ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಪ್ರಾಯೋಜಿತ ಇಂದ್ರಿಯಾ

ಕರಕುಶಲ ಆಭರಣಗಳಿಗೆ ವೇದಿಕೆ ಕಲ್ಪಿಸಿರುವ ಇಂದ್ರಿಯಾ

ಹೌಸ್ ಆಫ್ ಮಸಾಬಾದ ಚೊಚ್ಚಲ ವಧುವಿಗಾಗಿಯೇ ವಿನ್ಯಾಸಗೊಳಿಸಲಾದ ಆಭರಣಗಳ ಪ್ರದರ್ಶನ ವಾಗಿದ್ದ ಈ ಸಂಗ್ರಹವು, ಧೈರ್ಯಶಾಲಿ, ಉಲ್ಲಾಸಭರಿತ ಹಾಗೂ ತನ್ನ ನೈಜ ವ್ಯಕ್ತಿತ್ವ ವನ್ನು ನಿರ್ಭಯ ವಾಗಿ ವ್ಯಕ್ತಪಡಿಸುವ, ಹಳೆಬೇರು ಹೊಸ ಚಿಗುರು ಎಂಬಂತೆ, ತಲೆಮಾರಿನ ಸಂಪ್ರದಾಯದೊಂದಿಗೆ ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ವಧುವಿಗೆ ಗೌರವ ಸಲ್ಲಿಸಲಾಯಿತು.

ಜಾರ್ಜಿಯಾ ಮೆಲೋನಿಗೆ ನರೇಂದ್ರ ಮೋದಿ ಚಾಕೊಲೇಟ್‌ ಗಿಫ್ಟ್‌ ಕೊಟ್ಟ ಎಫೆಕ್ಟ್‌: ಇಟಲಿ ಸೊಗಡಿನಲ್ಲಿ ಪಾರ್ಲೆ Melody ಕ್ಯಾಂಡಿ; Melodi ಟ್ರೆಂಡ್‌ಗೆ ಸಿಹಿ ಟ್ವಿಸ್ಟ್

ಇಟಲಿ ಸೊಗಡಿನಲ್ಲಿ ಮೆಲೋಡಿ: ಹೊಸ ರುಚಿಗೆ ನೆಟ್ಟಿಗರ ಮೆಚ್ಚುಗೆ

India-Italy Friendship: ಭಾರತ–ಇಟಲಿ ಸ್ನೇಹವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಪಾರ್ಲೆ ಸಂಸ್ಥೆ ತಿರಾಮಿಸು ರುಚಿಯ ಸೀಮಿತ ಆವೃತ್ತಿಯ ಮೆಲೋಡಿ ಕ್ಯಾಂಡಿಯನ್ನು ಬಿಡುಗಡೆ ಮಾಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯವಾಗಿದ್ದ ʼಮೆಲೋಡಿʼ ಟ್ರೆಂಡ್‌ಗೆ ಸೃಜನಾತ್ಮಕ ಸ್ಪರ್ಶ ನೀಡಿರುವ ಈ ಹೊಸ ಪ್ರಯತ್ನ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ರುಚಿಯ ಮೆಲೋಡಿ ಬಿಡುಗಡೆಯಾದ ಕೂಡಲೇ ಭಾರಿ ಚರ್ಚೆಗೆ ಕಾರಣವಾಗಿದ್ದು, ಬ್ರ್ಯಾಂಡ್‌ನ ಹೊಸತನದ ಮಾರಾಟ ತಂತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Gold Price Today On August 3rd 2026: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಇಲ್ಲಿದೆ ಚೆಕ್‌ ಮಾಡಿ

ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಇಲ್ಲಿದೆ ಚೆಕ್‌ ಮಾಡಿ

Gold Rate Today: ಚಿನ್ನದ ದರದಲ್ಲಿ ಯಥಾಸ್ಥಿತಿ ಇಂದು ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 13,220 ರೂ. ಆಗಿದ್ದು. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 14,422 ರೂ. ಇದೆ.

6 ನಗರ 10,000 ಟೆಕ್ಕಿಗಳು: ಭಾರತದಲ್ಲಿ ಕಾಗ್ನಿಜೆಂಟ್‌ನಿಂದ ಬೃಹತ್ 'ಓಪನ್‌ಎಐ ಕೋಡೆಕ್ಸ್‌ ಹ್ಯಾಕಥಾನ್'! ಏನಿದರ ಉದ್ದೇಶ?

ಭಾರತದಲ್ಲಿ ಕಾಗ್ನಿಜೆಂಟ್‌ನಿಂದ ಬೃಹತ್ 'ಓಪನ್‌ಎಐ ಕೋಡೆಕ್ಸ್‌ ಹ್ಯಾಕಥಾನ್'!

'ಓಪನ್ಎಐ ಕೋಡೆಕ್ಸ್' ಎಂಬುದು ಸಾಫ್ಟ್‌ವೇರ್ ಕ್ಷೇತ್ರದಲ್ಲಿನ ಅತ್ಯಾಧುನಿಕ ಎಐ ಕೋಡಿಂಗ್ ಪ್ಲಾಟ್‌ ಫಾರ್ಮ್ ಆಗಿದೆ. ಉದ್ಯೋಗಿಗಳು ಈ ವೇದಿಕೆಯನ್ನು ಬಳಸಿಕೊಂಡು ಹೊಸ ತಂತ್ರಜ್ಞಾನಗಳನ್ನು ಕಲಿಯಲು, ಪ್ರಯೋಗಗಳನ್ನು ಮಾಡಲು ಮತ್ತು ನೈಜ ವ್ಯಾಪಾರ-ವ್ಯವಹಾರಗಳ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಈ ಹ್ಯಾಕಥಾನ್ ಅವಕಾಶ ಕಲ್ಪಿಸಿದೆ.

ಎಥೆನಾಲ್ ಮಿಶ್ರಣ ಮಾಡದಿದ್ದರೆ ಇರಾನ್‌ ಯುದ್ಧದ ವೇಳೆ ದೇಶದಲ್ಲಿ ಪೆಟ್ರೋಲ್ ಬೆಲೆ 125 ರುಪಾಯಿ ದಾಟುತ್ತಿತ್ತು ಎಂದ ಕೇಂದ್ರ ಸರ್ಕಾರ

E20ಯಿಂದ ದೇಶದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗಿದೆ: ಕೇಂದ್ರ ಸರ್ಕಾರ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಿಕ್ಕಟ್ಟಿನ ನಡುವೆ ದೇಶದಲ್ಲಿ ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣವನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಈ ನಡುವೆ ಇದು ವಾಹನಗಳ ಎಂಜಿನ್ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಈಗ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದ್ದು, ಎಥೆನಾಲ್ ಮಿಶ್ರಣ ಮಾಡದಿದ್ದರೆ ದೇಶದಲ್ಲಿ ಪೆಟ್ರೋಲ್ ಬೆಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿತ್ತು. ಇದರಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತಿತ್ತು ಎಂದು ಹೇಳಿದೆ.

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಮೇಲೆ ಎರಡನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ; ಗೃಹ ಬಳಕೆಯ ಸಿಲಿಂಡರ್ ಬೆಲೆ ಎಷ್ಟಿದೆ?  ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ

ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಆರಂಭವಾದ ಬಳಿಕ ಎರಡನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 192 ರೂ. ಇಳಿಕೆಯಾಗಿದೆ. ಇದರಿಂದ ವಾಣಿಜ್ಯ ಸಿಲಿಂಡರ್ ದರ 2,930 ರೂ.ಗಳಿಂದ 2,738 ರೂ. ಗೆ ಇಳಿಕೆಯಾಗಿದೆ. ಇದರೊಂದಿಗೆ ವಾಯುಯಾನ ಟರ್ಬೈನ್ ಇಂಧನ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಗಳು ಸ್ಥಿರವಾಗಿವೆ.

Gold Price Today On 1st August 2026: ವೀಕೆಂಡ್‌ ಶಾಪಿಂಗ್‌ ಪ್ರಿಯರಿಗೆ ಸುದಿನ; ಚಿನ್ನದ ದರದಲ್ಲಿ ಭಾರಿ ಇಳಿಕೆ

ಡಬಲ್‌ ಧಮಾಕ; ಕಮರ್ಷಿಯಲ್‌ ಎಲ್‌ಪಿಜಿ ಜತೆಗೆ ಚಿನ್ನದ ದರದಲ್ಲೂ ಇಳಿಕೆ

Gold Rate Today: ಮಾಸಾಂಭದಲ್ಲೇ ಗ್ರಾಹಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಚಿನ್ನದ ದರದಲ್ಲಿ ಶನಿವಾರ ಬಾರಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 35 ರುಪಾಯಿ ಕಡಿಮೆಯಾಗಿ 13,220 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 38 ರುಪಾಯಿ ಅಗ್ಗವಾಗಿ 14,422 ರುಪಾಯಿಗೆ ಬಂದಿದೆ.

ಆಗಸ್ಟ್ 16ರ ವರೆಗೆ ``ಬ್ರಿಲಿಯನ್ಸ್ ವಜ್ರಾಭರಣ ಪ್ರದರ್ಶನ

ಆಗಸ್ಟ್ 16ರ ವರೆಗೆ ``ಬ್ರಿಲಿಯನ್ಸ್ ವಜ್ರಾಭರಣ ಪ್ರದರ್ಶನ

ಭವ್ಯವಾದ ವೈವಾಹಿಕ ಆಭರಣಗಳಿಂದ ಹಿಡಿದು ದೈನಂದಿನ ಬಳಕೆಗೆ ಸೂಕ್ತವಾದ ಅತ್ಯಾಧುನಿಕ ವಿನ್ಯಾಸಗಳವರೆಗೆ ವೈವಿಧ್ಯಮಯ ಶ್ರೇಣಿಯನ್ನು ಒಳಗೊಂಡಿರುವ ಈ ಪ್ರದರ್ಶನವು, ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧುನಿಕ ಅಭಿರುಚಿಯ ಸಮ್ಮಿಲನವಾಗಿದೆ. ಇಲ್ಲಿನ ಪ್ರತಿಯೊಂದು ಆಭರಣವೂ ಅತ್ಯುತ್ತಮ ವಿನ್ಯಾಸ ಮತ್ತು ಸೂಕ್ಷ್ಮ ಕಲಾಕೌಶಲವನ್ನು ಪ್ರತಿಬಿಂಬಿಸುತ್ತದೆ; ಇವು ಪ್ರದರ್ಶನದ ಅವಧಿಯಲ್ಲಿ ಮಾತ್ರ ಲಭ್ಯವಿರುತ್ತವೆ.

ಡಿಜಿಟ್ ಲೈಫ್ ಇನ್ಶೂರೆನ್ಸ್ ಖಾತರಿಯ ಮತ್ತು ಸೂಚ್ಯಂಕ ಆಧಾರಿತ ವೇರಿಯಬಲ್ ಅನ್ಯುಟಿ ಯೋಜನೆ ಗಳ ಬಿಡುಗಡೆ

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವ್ಯಾಪಕ ಕಸ್ಟಮೈಸೇಶನ್ ಸೌಲಭ್ಯ

ಈ ಯೋಜನೆಯಡಿ ಗ್ರಾಹಕರು ಎರಡು ವಿಭಿನ್ನ ನಿವೃತ್ತಿ ಆದಾಯ ಪರಿಹಾರಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಡಿಜಿಟ್ ಸುಕೂನ್ ಯೋಜನೆಯು 100% ಖಾತರಿಯ ಅನ್ಯುಟಿ ಆದಾಯ ವನ್ನು ನೀಡುತ್ತದೆ. ಮತ್ತೊಂದೆಡೆ, ಡಿಜಿಟ್ ಬಾಸ್ ಯೋಜನೆಯು ಖಾತರಿಯ ಅನ್ಯುಟಿ ಹಾಗೂ ನಿಫ್ಟಿ 50 ಸೂಚ್ಯಂಕಕ್ಕೆ ಸಂಬಂಧಿಸಿದ ವೇರಿಯಬಲ್ ಅನ್ಯುಟಿ ಎರಡನ್ನೂ ಸಂಯೋಜಿಸುತ್ತದೆ.

Loading...