ಸಾಧಿಸಬೇಕೆಂಬ ಸಂಕಲ್ಪವಿದ್ದವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ!

Posted In : ಕ್ಷಣಹೊತ್ತು ಅಣಿ ಮುತ್ತು

1935ರ ಸುಮಾರಿನಲ್ಲಿ, ಒಂದು ಸಂಜೆ ನ್ಯೂಯಾರ್ಕಿನ ವಿಕಲ ಚೇತನ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳೆಲ್ಲಾ ಅಂಗಳದಲ್ಲಿ ಸೇರಿ ದ್ದರು. ಅವರನ್ನುದ್ದೇಶಿಸಿ ಲೊ-ಗೆಹೆರಿಗ್ ಎಂಬ ಪ್ರಖ್ಯಾತ ಜನಪ್ರಿಯ ಬೇಸ್ ಬಾಲ್ ಆಟಗಾರ ಪ್ರೋತ್ಸಾಹದಾಯಕ ಮಾತುಗಳನ್ನು ಆಡುತ್ತಿದ್ದರು. ಲೊ-ಗೆಹೆರಿಗ್ಗರು ಅತ್ಯಂತ ಶಕ್ತಿಶಾಲಿ ಬೇಸ್ ಬಾಲ್ ಆಟಗಾರರು. ಅವರನ್ನು ಕಬ್ಬಿಣದ ಕುದುರೆ, ಹೋಮ್-ರನ್ ದಿಗ್ಗಜ’ ಎಂದು ಕರೆಯಲಾಗುತ್ತಿತ್ತು. (ಹೋಮ್-ರನ್ ಎಂದರೆ ಬೇಸ್ ಬಾಲ್ ಕ್ರೀಡಾಂಗಣದ ನಾಲ್ಕೂ ಮೂಲೆಗಳನ್ನು ಮುಟ್ಟಿ ಬರುವ ಕ್ಲಿಷ್ಟಕರವಾದ ಓಟ!).

ಅವರ ಮಾತುಗಳನ್ನು ಕೇಳಲು ಕುಳಿತಿದ್ದವರು ಆಸ್ಪತ್ರೆಯಲ್ಲಿದ್ದ ಮಕ್ಕಳು! ದುರ್ಬಲ ಕಾಲುಗಳಿಂದಾಗಿ ನಿಲ್ಲಲೂ, ನಡೆಯಲೂ ಆಗದ ಅಸಮರ್ಥರು! ಆದರೆ ಅವರೆಲ್ಲ ಗೆಹೆರಿಗ್ರವರ ಅಭಿಮಾನಿಗಳು. ಮಾತಿನ ಮಧ್ಯೆ ಗೆಹರಿಗ್ಗರು ಸಾಧಿಸ ಬೇಕೆಂಬ ಸಂಕಲ್ಪವಿದ್ದವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದರು. ಆಗ ನಿಲ್ಲಲೂ ಕಷ್ಟಪಡುವ ಬಾಲಕನೊಬ್ಬ ನಿಂತು ಕೊಂಡು. ಅಸಾಧ್ಯ ಯಾವುದೂ ಇಲ್ಲ ಎನ್ನುವುದಾದರೆ, ನೀವು ಇಂದಿನ ಆಟದಲ್ಲಿ ಕನಿಷ್ಠ ಎರಡು ಹೋಮ್ರನ್ನುಗಳನ್ನು ಬಾರಿಸಬೇಕು ಎಂದು ಕೇಳಿಕೊಂಡ. ಗೆಹೆರಿಗ್ ಪಂದ್ಯಾಟ ದಲ್ಲಿ ಎರಡು ಹೋಮ್ರನ್ನುಗಳನ್ನು ಬಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಪ್ರಯತ್ನಿಸುತ್ತೇನೆ ಎಂದಾಗ, ಬಾಲಕ ಮತ್ತೊಮ್ಮೆ ನೀವು ಏನನ್ನಾದರೂ ಸಾಧಿಸಲೇಬೇಕೆಂಬ ಸಂಕಲ್ಪವಿದ್ದವರಿಗೆ ಅಸಾಧ್ಯವಾದುದು ಯಾವುದೂ ಇಲ್ಲವೆಂದು ನೀವು ಈಗಷ್ಟೇ ಹೇಳಿದಿರಿ! ಎಂದು ಕುಟುಕಿದ.

ತಾನು ಆಡಿದ ಮಾತಿಗೆ ತಾನೇ ಸಿಕ್ಕಿ ಬಿದ್ದಿದ್ದ ಗೆಹೆರಿಗ್ರವರು ಆಯಿತು. ನಾನಿಂದು ಎರಡು ಹೋಮ್-ರನ್ನುಗಳನ್ನು ಬಾರಿಸು ತ್ತೇನೆಂದು ವಾಗ್ದಾನ ಮಾಡುತ್ತೇನೆ. ಆದರೆ ನೀನೂ ಒಂದು ವಾಗ್ದಾನ ಮಾಡಬೇಕು. ಅದೇನೆಂದರೆ ನೀನೂ ಪ್ರಯತ್ನಪಟ್ಟು ಎಲ್ಲರಂತೆ ಸಹಜವಾಗಿ ನಡೆಯಬೇಕು! ಎಂದು ಸವಾಲೆಸೆದರು. ಗೆಹೆರಿಗ್ ಮತ್ತು ಬಾಲಕ ಇಬ್ಬರೂ ಪರಸ್ಪರ ಕೈಕುಲುಕಿದರು. ಸವಾಲನ್ನು ಒಪ್ಪಿಕೊಂಡರು. ಅಂದಿನ ಆಟದಲ್ಲಿ ಗೆಹೆರಿಗ್ ಅದ್ಭುತವಾಗಿ ಆಡಿದರು. ಎರಡು ಹೋಮ್ ರನ್ನುಗಳನ್ನು ಬಾರಿಸಿ ದರು. ಆದರೆ ಅಂದು ಸಂಜೆಯೇ ಅವರು ಬೇರೊಂದು ಊರಿಗೆ ಹೋಗಬೇಕಾಗಿ ಬಂತು. ಮತ್ತೆ ಆಸ್ಪತ್ರೆಯ ಮಕ್ಕಳನ್ನು ಭೇಟಿ ಯಾಗಲು ಸಾಧ್ಯವಾಗಲಿಲ್ಲ. ಆನಂತರ ಆಟಕ್ಕೆ ಸಂಬಂಧಪಟ್ಟ ಪ್ರವಾಸಗಳಲ್ಲಿ ಮಗ್ನರಾದ ಅವರು ಆ ಬಾಲಕನ ಮತ್ತು ಸವಾಲಿನ ಬಗ್ಗೆ ಮರೆತೇಬಿಟ್ಟರು.

ಎಷ್ಟೋ ವರ್ಷಗಳ ನಂತರ, ಲೊ ಗೆಹರಗ್ಗರು ಮತ್ತದೇ ಊರಿನ ಸ್ಟೇಡಿಯಂನಲ್ಲಿ ಆಟವಾಡಲು ಬಂದರು. ಅವರು ಕ್ರೀಡಾಂಗಣವನ್ನು ಪ್ರವೇಶಿಸುವ ಮುಂಚೆ ಯುವಕನೊಬ್ಬ ಓಡೋಡುತ್ತ ಬಂದು ಅವರಿಗೆ ನಮಸ್ಕರಿಸಿ ನನ್ನ ಗುರುತು ಸಿಕ್ಕಿತೆ? ಎಂದು ಕೇಳಿದ. ಗೆಹೆರಿಗ್ರವರು ಇಲ್ಲ, ನೀವ್ಯಾರೋ ನನಗೆ ಗೊತ್ತಾಗುತ್ತಿಲ್ಲ ಎಂದರು. ಯುವಕ ಹಲವಾರು ವರ್ಷಗಳ ಹಿಂದೆ ನಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ನೀವು ಬಂದಿದ್ದಿರಿ. ಅಂದು ನೀವು ಎರಡು ಹೋಮ್ ರನ್ ಬಾರಿಸಬೇಕೆಂಬ ಮತ್ತು ನಾನು ಸಹಜವಾಗಿ ನಡೆಯಬೇಕೆಂಬ ಸವಾಲನ್ನು ಪರಸ್ಪರ ಹಾಕಿಕೊಂಡಿದ್ದೆವು. ಒಪ್ಪಿಕೊಂಡಿದ್ದೆವು. ನೀವು ನಿಮ್ಮ ಮಾತನ್ನು ಉಳಿಸಿಕೊಂಡಿರಿ. ನಾನೀಗ ಸಹಜವಾಗಿ ನಡೆದು ಬಂದದ್ದನ್ನು ನೀವೇ ನೋಡಿದಿರಿ.

ನಾನೂ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದಾಗ, ಗೆಹೆರಿಗ್ಗರಿಗೆ ಆಶ್ಚರ್ಯವೋ ಆಶ್ಚರ್ಯ! ಇದು ಹೇಗೆ ಸಾಧ್ಯವಾಯಿತು? ಎಂದು ಕೇಳಿದಾಗ, ಬಾಲಕ ನಿಮ್ಮ ಪ್ರೋತ್ಸಾಹ ಮತ್ತು ಸವಾಲು ನನ್ನನ್ನು ಉತ್ತೇಜಿಸಿತು. ಸತತ ಪ್ರಯತ್ನದಿಂದ ನಾನೀಗ ಓಡಾಡುತ್ತಿದ್ದೇನೆ ಎಂದ. ಗೆಹೆರಿಗ್ ಸಹಸ್ರಾರು ಪ್ರೇಕ್ಷಕರ ಮುಂದೆ ಯುವಕನನ್ನು ಬಿಗಿದಪ್ಪಿ ಅಭಿನಂದಿಸಿದರು.
ಹಿರಿಯರ ಪ್ರೋತ್ಸಾಹಕರ ಮಾತು ಮತ್ತು ಸ್ನೇಹಮಯ ಸವಾಲು ಕಿರಿಯರನ್ನು ಹೇಗೆ ಹುರಿದುಂಬಿಸುತ್ತದೆ ಎಂಬುದಕ್ಕೆ ಇದೊಂದು ನಿಜಜೀವನದ ನಿದರ್ಶನ. ನಾವೂ ಇದನ್ನು ಪ್ರಯೋಗಿಸಿ ನೋಡಬಹುದು. ಕೆಲವೊಮ್ಮೆ ಮನೆಯ ತುಟ್ಟತುದಿ ಯನ್ನು ಮುಟ್ಟಲೂ ಹೆದರುವವರು, ಬೆಟ್ಟದ ತುದಿಯನ್ನೂ ಮುಟ್ಟಿಯಾರು! ಹಾಗೆ ಏರಲು ಪ್ರೋತ್ಸಾಹಿಸಿದವರನ್ನು ಕೃತಜ್ಞತೆ ಯಿಂದ ನೆನೆಸಿಯಾರು!

Leave a Reply

Your email address will not be published. Required fields are marked *

ten + 12 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top