About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಹಂಪಿಯಲ್ಲಿ ಹೊಸ ಹಾವಿನ ಪ್ರಭೇದ ಪತ್ತೆ

ಬಳ್ಳಾರಿ: ಹಂಪಿಯ ಕಮಲಾಪುರದಲ್ಲಿ ಅತ್ಯಂತ ವಿರಳವಾದ ಹೊಸ ಪ್ರಭೇದದ ಹಾವೊಂದು ಪತ್ತೆಯಾಗಿದೆ. ಸ್ವೀಡನ್ ಮೂಲದ ಸಸ್ಯಶಾಸ್ತ್ರಜ್ಞ ಮತ್ತು ಸ್ಥಳೀಯ ವನ್ಯಜೀವಿ ತಜ್ಞ ಪೀಟರ್ ಅಲ್ಬಿನ್ಸನ್ ಎಂಬುವವರು ಈ ಹೊಸ ಪ್ರಬೇಧದ ಹಾವನ್ನು ಪತ್ತೆ ಹಚ್ಚಿದ್ದಾರೆ.

ಕಾಡು, ಗುಡ್ಡಗಳತ್ತ ಚಾರಣ ಕೈಗೊಳ್ಳುವ ಪೀಟರ್, ಹಂಪಿಯ ದರೋಜಿ ಎಂಬಲ್ಲಿಗೆ ಸ್ಥಳೀಯ ವನ್ಯಜೀವಿ ತಜ್ಞ ಪಂಪಾಯಸ್ವಾಮಿ ಮಾಲ್ಮೇತ್ ಅವರೊಂದಿಗೆ ಭೇಟಿ ನೀಡಿದಾಗ ಈ ಹೊಸ ಪ್ರಭೇದದ ಹಾವು ಪತ್ತೆಯಾಗಿದೆ. ಈ ಹಾವು 12 ಒಂದು ಅಡಿಗೂ ಕಡಿಮೆ ಉದ್ದ ಇದೆ.

ಸಂಗ್ರಹ ಚಿತ್ರ

ನಡೆದು ಹೋಗುತ್ತಿದ್ದ ವೇಳೆ ಬ್ರೈಡಲ್ ಸ್ನೇಕ್ ಕಂಡುಬಂದಿತು. ಈ ಹಾವು ಕಳೆದ 23 ವರ್ಷಗಳಿಂದ ಎಲ್ಲಿಯೂ ಕಾಣಿಸಿರಲಿಲ್ಲ ಎಂದು ಮಾಲ್ಮೇತ್ ಅವರು ಹೇಳಿದ್ದಾರೆ.

ಕಟ್ಟುಹಾವಿನಂತೆ ಕಾಣಿಸುತ್ತಿತ್ತು. ಈ ಹಾವು ವಿಷಕಾರಿಯಾಗಿರುವುದಿಲ್ಲ. ಇಂತಹ ಹಾವಿನ ಪ್ರಭೇದವನ್ನು ಈ ಹಿಂದೆ ಎಲ್ಲಿಯೂ ನೋಡಿರಲಿಲ್ಲ. ಇದೊಂದು ಅತ್ಯಂತ ಅದ್ಭುತ ಅನುಭವ. ಹೊಸ ಪ್ರಭೇದದ ಹಾವು ಕಂಡು ಬಹಳ ಸಂತೋಷವಾಯಿತು. ಈ ಹಾವಿನ ಬಗ್ಗೆ ನನ್ನ ಗೆಳೆಯರಿಂದ ಮಾಹಿತಿ ಪಡೆದುಕೊಳ್ಳುತ್ತೇನೆಂದು ಅಲ್ಬಿನ್ಸನ್ ಅವರು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close