About Us Advertise with us Be a Reporter E-Paper

ಗುರು

ಆತ್ಮಪೂರ್ವಕ ಸಂವಹನ ಉನ್ನತಿಯ ಸಾಧನ

- ಶ್ರೀನಿವಾಸ ಅರ್ಕ, ಅರ್ಕಧಾಮ, ಮೈಸೂರು

ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ ಎನ್ನುವ ಹಾಡು ನೀವು ಕೇಳಿರುತ್ತೀರಿ. ನಿಜ ಅದು. ಮುಗುಳ್ನಗೆ ಸಕಾರಾತ್ಮಕ ವಾತಾವರಣವನ್ನು ಉಂಟು ಮಾಡಬಲ್ಲದು. ಇದರಿಂದ ಅನ್ಯ ವ್ಯಕ್ತಿ ಸರಾಗವಾಗಿ ಮಾತನಾಡಲು ಸಾಧ್ಯವಾಗುತ್ತದೆ. ನಗು ಎಂಬುದು ಸ್ನೇಹ ಮತ್ತು ಆತಿಥ್ಯದ ಸಹಜ ಬಡವರಿರಲಿ, ಸಿರಿವಂತರೇ ಇರಲಿ, ತಿಳಿದವರೇ ಇರಲಿ, ಏನೂ ಗೊತ್ತಿಲ್ಲದವರೇ ಇರಲಿ ನಗುವಿಗೆ ಅಡೆತಡೆಗಳೇ ಇಲ್ಲ. ಇದು ಮಾತುಕತೆಯ ಬಾಗಿಲುಗಳನ್ನು ಸುಲಭವಾಗಿ ತೆರೆಯುವಂತೆ ಮಾಡುತ್ತದೆ.

ಇತರೆ ವ್ಯಕ್ತಿಗಳು ನಿಮ್ಮನ್ನು ಸ್ವಾಗತಿಸಿದೇ ಇದ್ದರೂ ನೀವು ಅವರನ್ನು ಸ್ವಾಗತಿಸಬಹುದು. ಅಂತಿಮವಾಗಿ ನಿಮ್ಮ ವೈಯಕ್ತಿಕ ಕ್ರಿಯೆ, ಸಮಯ, ಸಂದರ್ಭದ ಮೇಲೆ ನಿಯಂತ್ರಣವನ್ನು ಹೊಂದಿದವರಲ್ಲವೇ ನೀವು?

ಗಮನ, ಅರ್ಥೈಸುವಿಕೆ, ಭಾಷಿಕ ಸಾಮರಸ್ಯ
ನಿಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಬೇಕು ಎಂದು ಸದಾ ನಿರೀಕ್ಷಿಸಬಾರದು. ಇತರರನ್ನು ಅರ್ಥಮಾಡಿಕೊಳ್ಳುವ ಹಾಗೂ ಅವರೇಕೆ ಅರ್ಥಮಾಡಿಕೊಂಡಿಲ್ಲ ಎಂದು ಅರಿಯುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಯಾರದ್ದೋ ಮಾತಿಗೆ ನೀವು ಕಿವಿಗೊಟ್ಟಿರಬಹುದು. ಆದರೆ ಏನೊಂದನ್ನೂ ಕೇಳಿಸಿಕೊಳ್ಳದೇ ಇರಬಹುದು. ನೀವು ಕೇಳಿಸಿಕೊಳ್ಳುತ್ತಿರಬಹುದು. ಆದರೆ ಏನನ್ನೇ ಆಗಲಿ ಅರ್ಥಮಾಡಿಕೊಳ್ಳದೇ ಇರಬಹುದು. ಇತರ ವ್ಯಕ್ತಿಗಳನ್ನು ತಿಳಿಯುವುದಕ್ಕೆ ಭಾಷೆಯೊಂದು ದೊಡ್ಡ ತೊಡಕೇನೂ ಅಲ್ಲ. ನಿಮ್ಮ ಸಂಕಲ್ಪ ಮತ್ತು ಅಪೇಕ್ಷೆಯನ್ನು ದೃಢಗೊಳಿಸಿಕೊಳ್ಳುವುದರ ಮೂಲಕ ಸಂಪರ್ಕವನ್ನು ಸಾಧಿಸಬೇಕು

ರೇಡಿಯೋದಂತೆ ಮೊದಲು ಅದನ್ನು ಟ್ಯೂನ್ ಮಾಡಬೇಕು. ಸರಿಯಾಗಿ ತಿರುವಿದಾಗ ಸಂವಹನ ಮೊಳೆಯುತ್ತದೆ. ಬೆಳೆಯುತ್ತದೆ. ಇತರೆ ವ್ಯಕ್ತಿ ಮಾತುಗಳನ್ನು ತಡೆ ಸಂವಹನ ವಿಕಾಸವಾಗುತ್ತದೆ. ಮಾತುಕತೆಗೆ ಮುನ್ನ ಕೆಲ ಕ್ಷಣದ ಮೌನ ಮಾತುಕತೆ ಸರಾಗಗೊಳ್ಳುವುದಕ್ಕೆ ನಿಮ್ಮನ್ನು ಚೆನ್ನಾಗಿ ಸಜ್ಜುಗೊಳಿಸುತ್ತದೆ.

ನೇರಾನೇರ ಮಾತುಕತೆ
ನೇರಾ ನೇರ ಮಾತುಕತೆ ಅಪಾರ್ಥ ಮಾಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ಎದುರು ಬದುರು ಮಾತನಾಡುವುದಕ್ಕೆ ಅಸಾಧ್ಯವಾದರೆ ಮಧ್ಯವರ್ತಿಗಳು ಮತ್ತು ಅತಿ ಮಾತುಗಳನ್ನಾಡುವುದನ್ನು ಕಡಿಮೆ ಮಾಡಬೇಕು.
ಪರೋಕ್ಷ ಸಂವಹನ ಮಾಡುವ ಬಗೆಯಿಂದ ಅಪಾರ್ಥ, ಗೊಂದಲ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಏನನ್ನು ಹೇಳಬೇಕಾಗಿದೆಯೋ ಅದನ್ನು ರವಾನಿಸುವುದಕ್ಕೂ ಹೆಚ್ಚು ಸಮಯ

ಒಂದು ಕಾಲ್ಪನಿಕ ದೃಶ್ಯ: ಒಂದು ಪುಟ್ಟ ವೃತ್ತದಲ್ಲಿ ಕುಳಿತುಕೊಳ್ಳಿ. ನಿಮ್ಮ ಪಕ್ಕ ಇರುವವರ ಕಿವಿಯಲ್ಲಿ ಒಂದು ಸಂದೇಶವನ್ನು ಉಸುರಿ. ಇದೇ ರೀತಿ ಅವರು ಬೇರೆಯವರಿಗೆ ಹೇಳಲಿ. ಈ ಸಂದೇಶ ಒಬ್ಬರಿಂದ ಮತ್ತೊಬ್ಬರಿಗೆ ಸಾಗಿಹೋಗುವಾಗ ಆ ಸಂದೇಶ ಏನೆಲ್ಲಾ ರೂಪಾಂತರ, ಅವತಾರಗಳನ್ನು ಎತ್ತುತ್ತದೆ ಎಂಬುದನ್ನು ಗಮನಿಸಿ.
ಆತ್ಮಪೂರ್ವಕ ಸಂವಹನ

ಆತ್ಮಪೂರ್ವಕ ಮಾತುಕತೆಯನ್ನು ಸಂವಹನದ ಪರಮ ರೂಪವಾಗಿ ಕಾಣಲಾಗುತ್ತದೆ. ಏಕೆಂದರೆ ಅದು ನಿಮ್ಮ ಪ್ರಾಣಸ್ವರೂಪವಾದ ಚೈತನ್ಯದಿಂದ ಬಂದಿರುತ್ತದೆ. ಇದು ಕೇವಲ ಶಾಬ್ದಿಕ ದೈಹಿಕ ಸಂವಹನಕ್ಕಿಂಥ ಮೇಲ್ಮಟ್ಟದ್ದಾಗಿರುತ್ತದೆ. ಇಲ್ಲಿ ಮಾಹಿತಿ ಎಂಬುದು ಜೀವದ ಮೂಲ ಶಕ್ತಿಯಿಂದ ಹೊರ ಹೊಮ್ಮಿದ್ದಾಗಿರುತ್ತದೆಯೇ ಹೊರತು ಅಸ್ತಿತ್ವ/ಇರುವಿಕೆಯ ಮೇಲ್ಪಟ್ಟದ ಪದರದಿಂದ ಹೊಮ್ಮಿದ್ದಾಗಿರುವುದಿಲ್ಲ.

ಆತ್ಮಪೂರ್ವಕ ಸಂವಹನ ನಿಮ್ಮ ಗಂಟಲಿನಿಂದ ಹೊಮ್ಮಿದ್ದಲ್ಲ; ಅದಕ್ಕೂ ಆಳವಾದ ಅಭಿವ್ಯಕ್ತಿಯಿದು. ಇಲ್ಲಿ ಏನಾಗುತ್ತದೆ ಎಂದರೆ, ನೀವು ಇತರರಿಗಾಗಿ ಅರ್ಥವನ್ನು ಮತ್ತು ಚೈತನ್ಯವನ್ನು, ಗ್ರಹಿಕೆ ಮತ್ತು ಪ್ರತಿಕ್ರಿಯೆಗಾಗಿ ಉತ್ಪತ್ತಿ ಮಾಡುತ್ತೀರಿ. ಇಲ್ಲಿ ಸಂವಹನ ಎಂಬುದು ಪರಿಪೂರ್ಣವಾಗಿದ್ದು, ಉನ್ನತ ಮತ್ತು ಹೆಚ್ಚು ಅರ್ಥವತ್ತಾದ ಸ್ತರಕ್ಕೆ ಅದು ಮುನ್ನಡೆಯುತ್ತದೆ. ನಿಮ್ಮ ಸ್ತರವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೀವು ಬೇಕಾದರೆ ಆಂಗಿಕ ಸಂಜ್ಞೆ ಮತ್ತು ಕಣ್ಣುಗಳನ್ನು ಬಳಸಿಕೊಳ್ಳಬಹುದು.

ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ನೀವೇನು ಮಾಡಬಹುದು? ನಿಮ್ಮ ಭಾವನಾತ್ಮಕ ಸಂವಹನವನ್ನು ಬಳಸಬೇಕು. ನಿಮ್ಮ ಸಂಕಲ್ಪ, ಪ್ರಜ್ಞೆ ಮತ್ತು ಆಳವಾದ ಭಾವನೆಯನ್ನೊಳಗೊಂಡ ಸಂದೇಶವನ್ನು ಮುಂದಿಡಬೇಕು. ಆಗ ಕಾಂತ ವಲಯವೊಂದು ಉಂಟಾಗುತ್ತದೆ. ಅದು ಕೆಲವೊಂದು ಮಾಹಿತಿಯ ಶಕ್ತಿಯನ್ನು ಹಿಡಿದಿಟ್ಟುಕೊಂಡಿರುತ್ತದೆ. ಇದು ಉತ್ಕಟ. ಆದರೆ ನಿಮ್ಮ ಆರ್ದ್ರ ಹೃದಯ ಮಾತ್ರ ಇದನ್ನು ಹೀರಿಕೊಳ್ಳಬಲ್ಲದು. ಆನಂತರ ಇದನ್ನು ಮನಸ್ಸು

Tags

Related Articles

Leave a Reply

Your email address will not be published. Required fields are marked *

Language
Close