About Us Advertise with us Be a Reporter E-Paper

ಗುರು

ವಿಭಿನ್ನ ಸಂಕೇತಗಳನ್ನು ಬಿಂಬಿಸುವ ಗಣನಾಯಕ

ರವಿ ರಾ ಕಂಗಳ

ಯಾವುದೇ ಶುಭ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮುನ್ನ ಶ್ಲೋಕವನ್ನು ಹೇಳುವುದು ಭಾರತೀಯ ಸಂಪ್ರದಾಯದಲ್ಲಿ ರೂಢಿಗತವಾಗಿದೆ. ‘ಶ್ರೇಯಾಂಸಿ ಬಹು ವಿಘ್ನಾನಿಶುಭ ಕಾರ್ಯಗಳಿಗೆ ವಿಘ್ನಗಳೇ ಹೆಚ್ಚು. ಅದನ್ನು ಪೂರ್ಣಗೊಳಿಸುವವರೆಗೆ ಅನೇಕ ಸಂಕಷ್ಟಗಳು ತಲೆದೋರುತ್ತವೆ. ಅದಕ್ಕಾಗಿ ಯಾವುದೇ ವಿಘ್ನಗಳು ಬಾರದಂತೆ ಸಂಕಷ್ಟ ವಿಘ್ನ ನಿವಾರಕ ವಿಘ್ನೇಶ್ವರನನ್ನು ಮೊದಲು ಪ್ರಾರ್ಥಿಸುತ್ತೇವೆ. ಭಾರತದಲ್ಲಿನ ಧಾರ್ಮಿಕ ಆಚರಣೆಗಳು, ನಮ್ಮ ಸಂಸ್ಕೃತಿಯ ಸಾರವನ್ನು ತಿಳಿಸುವುದರೊಂದಿಗೆ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ.

ಪ್ರಾಚೀನರು ಗಣಪತಿಯನ್ನು ಸಪ್ತಾಂಗಃ ಏಕೋನವಿಶಂತಿ ಮುಖಃಎಂದು ವರ್ಣಿಸುತ್ತಿದ್ದರು. ಅಂದರೆ ಅವನು ಏಳು ಅಂಗಗಳನ್ನು ಹತ್ತೊಂಭತ್ತು ಮುಖಗಳನ್ನು ಒಳಗೊಂಡಿರುತ್ತಾನೆ ಎಂದರ್ಥ.

ಗಣೇಶನ ಪ್ರಿಯ ಸಂಖ್ಯೆ 21

ಜಗತ್ತಿನಲ್ಲಿ 25 ಪಕ್ಷಗಳಿವೆ. ಅವುಗಳೆಂದರೆ ಚೇತನ, ಚಿತ್ತ, ಅಹಂಕಾರ, ಬುದ್ಧಿ, ಮನಸ್ಸು, ಶೋತೃ, ತೃಕ್, ಚಕ್ಷು, ರಸನೆ, ಘ್ರಾನ, ಪಾಣಿ, ಪಾದ, ವಾಯು, ಉಪಸ್ಥೆ, ಶಬ್ಧ, ರೂಪ, ರಸ, ಗಂಧೆ, ಸ್ಪರ್ಶ, ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ಇವುಗಳಲ್ಲಿ 21 ನೇಯದು ಆಕಾಶ. ಇದರ ಅಭಿಮಾನಿ ದೇವತೆ ಗಣೇಶ. ಆದ್ದರಿಂದ ಗಣೇಶನಿಗೆ 21 ಸಂಖ್ಯೆ ಬಹಳ ಪ್ರಿಯವಾಗಿದ್ದು, ಅದಕ್ಕೆ ವಿಘ್ನವಿನಾಶಕ ನಿನಗೆ 21 ನಮಸ್ಕಾರಗಳು ಎಂದು ಹೇಳುತ್ತೇವೆ.

ಬಲದ ಸಂಕೇತ

ಪ್ರಾಚೀನರು ಅಶ್ವ ಶಕ್ತಿಯನ್ನು ಬುದ್ಧಿ ಶಕ್ತಿಯ ಪ್ರತೀಕವಾಗಿ, ಗಜ ಶಕ್ತಿಯನ್ನು ಪ್ರತಿರೋಧ ಶಕ್ತಿಯ ಪ್ರತೀಕವಾಗಿ ಬಳಸುತ್ತಿದ್ದರು. ಗಣೇಶ ಬಲದ ಸಂಕೇತ.

ಕೃಷಿಯ ಸಂಕೇತ

ಗಣೇಶನು ಅತಿ ದೊಡ್ಡದಾದ ಉದರವನ್ನು ಹೊಂದಿರುವುದರಿಂದ ಲಂಬೋಧರನೆಂದು ಸಂಬೋಧಿಸುತ್ತೇವೆ. ಅದು ಸಮೃದ್ಧಿಯ ಸಂಕೇತವಾಗಿದ್ದು ಆಹಾರದ ಕಣಜವಾಗಿದೆ. ರೈತನ ಶತ್ರು ಇಲಿಯು ಸಂಗ್ರಹಿಸಿದ ಆಹಾರದ ಕಣಜವನ್ನು ನಾಶಮಾಡದಿರಲೆಂದು ಗಣೇಶನು ಇಲಿಯೊಂದಿಗೆ ಅವುಗಳನ್ನು ನಿಯಂತ್ರಿಸಲು ಸರ್ಪವನ್ನು ಹೊಟ್ಟೆಗೆ ಬಿಗಿದುಕೊಂಡು ಸರ್ಪಬಂಧಿಯಾಗಿದ್ದಾನೆ.

ವಿನಯ ಮತ್ತು ವಿಜಯದ ಪ್ರತೀಕ ವಿನಾಯಕ

ವಿವಿದ್ಯೆಯೊಂದಿಗೆ ವಿನಯ, ವಿವೇಕ ನೀಡಿ ವಿಘ್ನ ನಿವಾರಿಸುವ ವಿಘ್ನೇಶ್ವರ

ನಾನಾಯಕತ್ವ ಗುಣ ಬೆಳೆಸಿ, ನ್ಯಾಯ ನೀತಿ ನಡೆಯುವ ಪ್ರಬುದ್ಧರನ್ನು ಸೃಜಿಸಿ, ಮುನ್ನಡೆಸುವ ಗಣನಾಯಕ

ಯಶಸ್ಸು ಬದುಕಿನ ಅತಿ ಮೌಲ್ಯಯುತ ಕ್ಷಣವಾಗಿದ್ದು, ಅದನ್ನು ಸಂಪಾದಿಸುವ ಸದ್ಬುದ್ಧಿಯನ್ನು ನೀಡುವ ಪ್ರಥಮ ಪೂಜಿತ ದೇವತೆಗಳ ಯಜಮಾನ.

ಕರ್ಮ ಮಾಡುವುದು ಅನಿವಾರ್ಯವಾಗಿದ್ದು, ಅದಕ್ಕೆ ಬೇಕಾದ ಆತ್ಮಬಲವನ್ನು ತುಂಬಿ, ಕತೃತ್ವ ಶಕ್ತಿ ನೀಡುವ ಮೂಲಕ, ನಿರ್ವಿಘ್ನವಾಗಿ ಸಕರ್ಮ ಮಾಡಿಸುವ ಸಂಕಷ್ಟಹರ.

ಗಜವದನನ ಅಂಗಾಂಗಗಳ ವೈಶಿಷ್ಟ್ಯಗಳು

ಬೃಹತ್ ತಲೆನಮ್ಮ ಆಲೋಚನೆಗಳು ವಿಭಿನ್ನವಾಗಿರಬೇಕು, ವಿನಯ ಮತ್ತು ವಿವೇಕದ ಬುದ್ಧಿಯನ್ನು ಹೊಂದಿರಬೇಕು.

ಬೃಹತ್ ಯಾವಾಗಲೂ ಸದ್ವಿಚಾರಗಳನ್ನು ಹೆಚ್ಚು ಹೆಚ್ಚು ಶ್ರವಣ ಮಾಡಬೇಕು. ಕಷ್ಟದಲ್ಲಿರುವ ಜನರ ಆರ್ತನಾದವನ್ನು ಕೇಳಿದೊಡನೆ ಕೈಲಾದಷ್ಟು ಸಹಾಯ, ಸಹಕಾರ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು.

ಸಣ್ಣ ಕಣ್ಣುಗಳು ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಪ್ರಪಂಚದ ಆಗುಹೋಗುಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ,ನಿನ್ನ ಅಗತ್ಯವಿದೆಯೆಂದು ಅರಿವಾದೊಡನೆ ಸ್ಪಂದಿಸುವ ಮನೋಭಾವವನ್ನು ತಾಳುವುದು.

ಕೈಗಳುಗಣಪತಿಯ ನಾಲ್ಕು ಕೈಗಳು ಪುರುಷಾರ್ಥದ ಸಂಕೇತವಾಗಿವೆ. ಸಂಕಷ್ಟದಲ್ಲಿರುವ ಜೀವಿಗಳ ಉದ್ಧಾರಕ್ಕೆ ಯಾವಾಗಲೂ ಕೈಗಳು ಮುಂದಿರಬೇಕು.

ಕಾಲುಗಳುಒಂದು ಕಾಲು ನೆಲಕ್ಕೆ ತಾಗಿದ್ದರೆ, ಇನ್ನೊಂದು ಕಾಲು ಎತ್ತಿರುವುದು ಮತ್ತು ಪರಲೋಕದಲ್ಲಿ ಬದುಕುವ ರೀತಿಯನ್ನು ಅರಿತುಕೊಳ್ಳುವುದು.

ಸಣ್ಣ ಬಾಯಿ ಕಡಿಮೆ ಮಾತನಾಡಬೇಕು.

ದಂತ ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದ್ದನ್ನು ಹೊರಹಾಕಬೇಕು. ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು.

ಉದ್ದ ಸೊಂಡಿಲುದಕ್ಷತೆಯೊಂದಿಕೆ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳುವುದು.

ಬೃಹತ್ ಹೊಟ್ಟೆ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಶಾಂತವಾಗಿ ಜೀರ್ಣಿಸಿಕೊಳ್ಳುವುದು.

Tags

Related Articles

Leave a Reply

Your email address will not be published. Required fields are marked *

Language
Close