About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮೋದಿ ಕಾಳೆಲೆಯಲು ಹೋಗಿ ಹಳ್ಳಕ್ಕೆ ಬಿದ್ದ ಕಾಂಗ್ರೆಸ್‌!

ದೆಹಲಿ: ರಫೇಲ್ ಡೀಲ್‌ ಪ್ರಕರಣದಲ್ಲಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಲು ಹೋಗಿ, ತಾನೆ ಹಳ್ಳಕ್ಕೆ ಬಿದ್ದಿದೆ. ತನ್ನ ಮುಖಪತ್ರಿಕೆ ನ್ಯಾಷನಲ್‌ ಹೆರಾಲ್ಡ್‌ನ ಮುಖಪುಟದಲ್ಲಿ ರಫೇಲ್ ಮೋದಿಯ ಬೋಫೋರ್ಸ್ ಎಂದು ತಲೆಬರಹದಿ ವರದಿ ಪ್ರಕಟಿಸಿದೆ. ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇಷ್ಟರವರೆಗೂ ಬೋಪೋರ್ಸ್‌ ಹಗರಣವನ್ನು ನಿಎರಾಕರಿಸುತ್ತಲೇ ಬಂದಿರುವ ಕಾಂಗ್ರೆಸ್‌ ಇದ್ದಕ್ಕಿದ್ದ ಹಾಗೆ ಮುಖಪುಟದಲ್ಲಿ ಬೋಪೋರ್ಸ್‌ ಹಗರಣವನ್ನು ರಫೆಲ್‌ ಡೀಲ್‌ಗೆ ಹೋಲಿಕೆ ಮಾಡಿದ್ದು ಬಿಜೆಪಿ ಆಹಾರ ಸಿಕ್ಕಂತಾಗಿದೆ. ರಾಜೀವ್ ಗಾಂಧಿ ಅವಧಿಯಲ್ಲಿ ನಡೆದ ಹಗರಣ ಇದಾಗಿದ್ದು, ಸ್ವೀಡನ್‌ನೊಂದಿಗೆ ವ್ಯವಹಾರ ನಡೆಸಲು ರಾಜೀವ್‌ ಗಾಂಧಿ ಕಿಕ್ ಬ್ಯಾಕ್ ಸ್ವೀಕರಿಸಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಇದಾದ ಬಳಿಕವೂ ಬಿಜೆಪಿ ಈ ಹಗರಣದ ಹೆಸರು ಹೇಳಿಕೊಂಡು ಕಾಂಗ್ರೆಸ್‌ಗೆ ತಿವಿಯುತ್ತಿತ್ತು.

ಇಲ್ಲಿಯವರೆಗೂ ಬೋಫೋರ್ಸ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದಿದೆ ಎನ್ನುವ ಆರೋಪವನ್ನು ಕಾಂಗ್ರೆಸ್ ಇಲ್ಲಿಯವರೆಗೂ ತಿರಸ್ಕಾರ ಮಾಡುತ್ತಲೇ ಬಂದಿತ್ತು. ಈ ಹಿಂದೆ ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್‌ ನಾಯಕ ಪ್ರಣಬ್ ಮುಖರ್ಜಿ ಬೊಫೋರ್ಸ್‌ ಹಗರಣ ಮಾಧ್ಯಮ ಸೃಷ್ಠಿ ಎಂದು ಆರೋಪ ಮಾಡಿದ್ದರು. ಆದರೆ ತನ್ನ ಮುಖವಾಣಿಯಲ್ಲೇ ಈ ಬಗ್ಗೆ ಪ್ರಸ್ತಾಪ ಮಾಡುವ ಮೂಲಕ ಬೋಫೋರ್ಸ್‌ ಹಗರಣ ನಡೆದಿದ್ದನ್ನು ಕಾಂಗ್ರೆಸ್‌ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close