About Us Advertise with us Be a Reporter E-Paper

ದೇಶಪ್ರಚಲಿತ

ಕಾಂಗ್ರೆಸ್ ಮುಸ್ಲಿಂ ಪುರುಷರ ಪಕ್ಷ: ಪ್ರಧಾನಿ ವಾಗ್ದಾಳಿ

ಫೈಲ್ ಚಿತ್ರ

ದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಭರ್ಜರಿ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ದ ವಾಗ್ಬಾಣ ಮುಂದುವರಿಸಿದ್ದಾರೆ. ನಮ್ಮ ಮುಖ್ಯ ವಿರೋಧ ಪಕ್ಷ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದೆಯಂತೆ, ಅದರಲ್ಲೂ ಮುಸ್ಲಿಂ ಪುರುಷರಿಗೆ ಮಾತ್ರ ಎಂದು ಕಾಂಗ್ರೆಸ್ ಬಗ್ಗೆ ಕುಟುಕಿದ್ದಾರೆ.

ಉತ್ತರ ಪ್ರದೇಶದ ಅಜಂಘರ್‌ನಲ್ಲಿ ಪೂರ್ವಾಂಚಲ್‌ ಎಕ್ಸ್‌ಪ್ರೆಸ್ ರೈಲಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕಾಂಗ್ರೆಸ್    ಪಕ್ಷ ಮುಸಲ್ಮಾನರಿಗೆ ಮಾತ್ರ ಮೀಸಲು ಎಂದು ಹೇಳಿದ್ದಾರೆ. ಅದು ಅವರ ನಿರ್ಧಾರ. ಆದರೆ ಸದು ಕೇಲವ ಮುಸ್ಲಿಂ ಪುರುಷರಿಗೆ ಮಾತ್ರ ಸೀಮಿತವಾಗಿದೆಯಾ? ಯಾಕೆಂದರೆ ಅವರಿಗೆ ಮುಸ್ಲಿಂ ಮಹಿಳೆಯರಿಗೆ ತೊಡಕಾಗಿರುವ ತ್ರಿವಳಿ ತಲಾಖ್ ಹಾಗೂ ನಿಖಾ ಹಲಾಲದ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಬಹುಜನ ಸಮಾಜವಾದಿ ಪಕ್ಷ ವಿರುದ್ಧವೈ ಹರಿಹಾಯ್ದಿರುವ ಮೋದಿ, ಹೊಸ ಯೋಜನೆಗಳು ಎಲ್ಲರ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಾಡಲಾಗುತ್ತದೆ. ಆದರೆ ದುರದೃಷ್ಟವೆಂದರೆ ಕೆಲವರು ಅಂಬೇಡ್ಕರ್‌ ಹೆಸರನ್ನು ಹೇಳಿ ಸಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಅಧಿಕಾರದಲ್ಲಿರುವಾಗ ಪೂರ್ವ ಉತ್ತರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಗಮನ ಹರಿಸಲಿಲ್ಲ ಎಂದಿದ್ದಾರೆ.

ಅಂಥ ಪಕ್ಷಗಳಿಂದ ಯಾವುದೇ ಉದ್ಧಾರ ಆಗುವುದಿಲ್ಲ. ಅವರು ತಮ್ಮ ಸ್ವಂತಕ್ಕೆ ಹಾಗೂ ತಮ್ಮ ಪರಿವಾರದ ಅಭಿವೃದ್ಧಿಗೆ ಬಳಸುತ್ತಾರೆ. ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ತಮ್ಮ ರಾಜಕೀಯ ಬೇಳೆ ಬೇಯಿಸಲು ಮಾತ್ರ ಬಳಸುತ್ತಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅವರನ್ನು ಮರೆತು ಬಿಡುತ್ತಾರೆ ಎಂದು ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close