About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪ್ರವಾಹ ಸಂತ್ರಸ್ತರಿಗೆ ರಾಹುಲ್ ಅಭಯ

ತಿರುವನಂತಪುರಂಗೆ ಬಂದಿಳಿದ ರಾಹುಲ್ ಗಾಂಧಿಯನ್ನು ಉಮ್ಮನ್ ಚಾಂಡಿ ಹಾಗೂ ಶಶಿ ತರೂರ್‌ ಬರ ಮಾಡಿಕೊಳ್ಳುತ್ತಿರುವುದು

ತಿರುವನಂತಪುರಂ: ಶತಮಾಮದ ಮಹಾ ಮಳೆಗೆ ತತ್ತರಿಸುವ ಕೇರಳಕ್ಕೆ ಎಐಸಿಸಿ ಅದ್ಯಕ್ಷ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಇಂದು ಬೆಳಿಗ್ಗೆ ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಗೆ ಬಂದು ಇಳಿದ ರಾಹುಲ್‌ಗೆ ಕಾಂಗ್ರೆಸ್‌ ನಾಯಕರ ಭವ್ಯ ಸ್ವಾಗತ ದೊರೆಯಿತು. ತಿರುವನಂತಪುರಂ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್‌, ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಏರ್‌ಪೋರ್ಟ್‌ಗೆ ತೆರಳಿ ರಾಹುಲ್ ಗಾಂಧಿಯನ್ನು ಬರಮಡಿಕೊಂಡರು. ಬಳಿಕ ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ಅವರು,ಪ್ರವಾಹ ಪೀಡಿತರ ಸಮಸ್ಯೆಗಳನ್ನು ಆಲಿಸಿ ನೆರವು ನೀಡುವ ಭರವಸೆ ನೀಡಿದರು.ಕೇರಳದ ರಾಜಧಾನಿ ತಿರುವನಂತಪುರಂಗೆ ಭೇಟಿ ನೀಡಿದ ಅವರು, ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ಪ್ರವಾಹ ಪೀಡಿತ ಪ್ರದೇಶಗಳಾದ ಚೆಂಗನ್ನೂರ್​, ಆಲಪ್ಪಿ, ಅಂಗಮಲಿ ಮುಂತಾದ ನಿರಾಶ್ರಿತ ಕೇಂದ್ರಗಳಿಗೆ ತೆರಳಿ ಸಂತ್ರಸ್ಥರ ಜೊತೆ ಮಾತುಕತೆ ನಡೆಸಿದರು.

https://twitter.com/INCIndia/status/1034321656884252672

ಈ ಸಂದರ್ಭ ಜನರ ರಕ್ಷಣೆಗೆ ಜೀವದ ಹಂಗು ತೊರೆದು ಕೆಲಸ ಮಾಡೊದ ಸ್ಥಳೀಯ ಸ್ವಯಂ ಸೇವಕರು ಹಾಗೂ ಮೀನುಗಾರರ ಕೆಲಸವನ್ನು ಶ್ಲಾಘಿಸಿದರು. ಇಂದು ಮತ್ತು ನಾಳೆ ರಾಹುಲ್ ಕೇರಳದಲ್ಲಿಯೇ ಉಳಿಯಲಿದ್ದು, ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿಯ ಅವಲೋಕನ ನಡೆಸಲಿದ್ದಾರೆ. ಪ್ರವಾಹ ಪೀಡಿತ ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ವಿಪತ್ತನ್ನು ಘೋಷಿಸಬೇಕು ಎಂದು ಮನವಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಶೀಘ್ರ ನೆರವು ಎಂದು ಪ್ರವಾಹ ಪೀಡಿತ ಕೇರಳಕ್ಕೆ  500 ಕೋಟಿ ರೂ. ಪರಿಹಾರ ನಿಧಿ ಘೋಷಿಸಿದ್ದರು. ಅಲ್ಲದೇ ಕಾಂಗ್ರೆಸ್ ನಿರಾಶ್ರಿತರಿಗೆ ಸಾವಿರ ಮನೆ ನಿರ್ಮಿಸಿ ಕೊಡುವುದಾಗಿಯೂ ಹೇಳಿದೆ.

Tags

Related Articles

Leave a Reply

Your email address will not be published. Required fields are marked *

Language
Close