About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ಕಾಂಗ್ರೆಸ್‌ ನಾಯಕ ಜೋಶಿ

ದೆಹಲಿ: “ಹಿಂದೂ ಧರ್ಮದ ಕುರಿತು ಕೇವಲ ಬ್ರಾಹ್ಮಣರು ಮಾತ್ರವೇ ಮಾತನಾಡಬಲ್ಲರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಥವಾ ಕೇಂದ್ರ ಸಚಿವೆ ಉಮಾ ಭಾರತಿ ಅಲ್ಲ” ಎಂದು ಹೇಳಿದ್ದ ಕಾಂಗ್ರೆಸ್‌ ನಾಯಕ ಸಿ ಪಿ ಜೋಶಿ ತಮ್ಮ ಮಾತಿಗೆ ಕ್ಷಮೆಯಾಚಿಸಿದ್ದಾರೆ.

“ಲೋಧಿ ಸಮುದಾಯದ ಉಮಾಭಾರತಿ ಹಾಗು ಮತ್ತೊಂದು ಧರ್ಮದ ನರೇಂದ್ರ ಮೋದಿ ಹಿಂದೂ ಧರ್ಮದ ಕರಿತು ಮಾತನಾಡುತ್ತಿರುವುದು ಆಶ್ಚರ್ಯಕರ” ಎಂದು ಜೋಶಿ ಹೇಳಿರುವ ವಿಡಿಯೋ ವೈರಲ್‌ ಆಗಿದೆ.

“ಈ ದೇಶದಲ್ಲಿ ಹಿಂದೂ ಧರ್ಮ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ, ಅದು ಪಂಡಿತರು ಹಾಗು ಬ್ರಾಹ್ಮಣರು ಮಾತ್ರ” ಎಂದು ಜೋಶಿ ಹೇಳಿದ್ದರು.

ಜೋಶಿ ಹೇಳಿಕೆಯನ್ನು ಖಂಡಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಹೇಳಿಕೆಗಳು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಿದ್ದು, ಕೋಡಲೇ ಜೋಶಿ ಕ್ಷಮೆಯಾಚಿಸಬೇಕು ಎಂದಿದ್ದರು.

ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದ ಜೋಶಿ, “ಕಾಂಗ್ರೆಸ್‌ನ ಸಿದ್ಧಾಂತಗಳನ್ನು ಗೌರವಿಸಿ, ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಮರ್ಯಾದೆ ಕೊಟ್ಟು, ಯಾವುದೇ ಸಮುದಾಯದ ಯಾವುದೇ ವರ್ಗಕ್ಕಾದರೂ ನನ್ನ ಮಾತಿನಿಂದ ಅವಮಾನವಾಗಿದ್ದರೆ ಕ್ಷಮೆಯಿರಲಿ” ಎಂದು ಜೋಶಿ ತಿಳಿಸಿದ್ದಾರೆ.

ಈ ಕುರಿತು ದೊಡ್ಡ ಮಟ್ಟದಲ್ಲಿ ವಾಗ್ದಾಳಿ ನಡೆಸಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, “ಕಾಂಗ್ರೆಸ್ಸಿನ ಜಾತಿ ಹಾಗು ಕೋಮಿನ ರಾಜಕಾರಣ ಮನಸ್ಥಿತಿಯನ್ನು ಜೋಶಿ ಹೇಳಿಕೆ ಪ್ರತಿಧ್ವನಿಸುತ್ತದೆ. ಮೋದಿ ಹಾಗು ಉಮಾ ಭಾರತಿರ ಸಮುದಾಯದ ಕುರಿತು ಜೋಶಿ ಮಾತನಾಡಿದ್ದಾರೆ.ಲೋಧಿ ಸಮುದಾಯದ ಜನತೆಗೆ ಗೌರವವಿಲ್ಲವೇ. ಜನರನ್ನು ಒಡೆಯುವ ಕಾಂಗ್ರೆಸ್‌ನ ವ್ಯೂಹಕ್ಕೆ ಯಾವುದೇ ಫಲ ಸಿಗದು” ಎಂದು ತಿಳಿಸಿದ್ದಾರೆ.

“ಜೋಶಿ ಹೇಳಿಕೆಯಿಂದ ರಾಹುಲ್‌ ಗಾಂಧಿಗೆ ನಿಜಕ್ಕೂ ಗಾಯವಾಗಿದ್ದರೆ, ಜೋಶಿರನ್ನು ಕಾಂಗ್ರೆಸ್‌ನಿಂದ ಕೂಡಲೇ ಕಿತ್ತೊಗೆಯಲಿ” ಎಂದು ಪಾತ್ರಾ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close