About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕಾಂಗ್ರೆಸ್ ಅವನತಿ ಶಿವಮೊಗ್ಗದಿಂದಲೇ ಪ್ರಾರಂಭ: ಆರ್.ಅಶೋಕ್

ಮಂಡ್ಯ: ಕಾಂಗ್ರೆಸ್ ಅವನತಿ ಶಿವಮೊಗ್ಗದಿಂದಲೇ ಪ್ರಾರಂಭವಾಗಿದೆ. ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ದೇಶಾದ್ಯಂತ ಧೂಳಿಪಟವಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.

ಲೋಕಸಭೆ ಉಪ ಚುನಾವಣೆ ಸಂಬಂಧ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪಕ್ಷದ ಮುಖಂಡರ ಸಭೆ ನಡೆಸಿ, ಶ್ರೀ ರಾಘವೇಂದ್ರ ಪಾದಯಾತ್ರೆ ಮೂಲಕ ಚಾಲನೆ ನೀಡಿ ಮಾತನಾಡಿದರು.

ನಮ್ಮದೇ ಗೆಲುವು: ಕಾಂಗ್ರೆಸ್ ಶಿವಮೊಗ್ಗದಲ್ಲಿ ಅಭ್ಯರ್ಥಿಯನ್ನು ಹಾಕಲಾಗದಷ್ಟು ದುರ್ಬಲವಾಗಿದೆ. ಇನ್ನು, ಮಂಡ್ಯದಲ್ಲಿ ಜೆಡಿಎಸ್ ವಿರೋಧಿ ಅಲೆ ಎದ್ದಿದೆ. ಅದು ಬಿಜೆಪಿ ಲಾಭವಾಗಲಿದ್ದು, ನಮ್ಮ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏಳಕ್ಕೆ ಏಳೂ ಸ್ಥಾನಗಳನ್ನು ಜೆಡಿಎಸ್‌ಗೆ ನೀಡಿರುವ ಮಂಡ್ಯ ಜಿಲ್ಲೆಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ನೀಡಿರುವ ಕೊಡುಗೆ ಏನೆಂಬುದು ಪ್ರತಿಯೊಬ್ಬ ಮತದಾರರಿಗೂ ಗೊತ್ತಿದೆ. ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಜೆಡಿಎಸ್‌ಗೆ ತಕ್ಕ ಮತದಾರರು ಸಜ್ಜಾಗಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಮಂಡ್ಯದ ಮಕುಟಪ್ರಾಯವಾಗಿರುವ ಸರಕಾರಿ ಸ್ವಾಮ್ಯದ ಮೈಷುಗರ್ ಪುನಶ್ಚೇತನ ಸೇರಿದಂತೆ ಹಲವು ಯೋಜನೆಗಳಿಗೆ ನೂರಾರು ಕೋಟಿ ರು. ಅನುದಾನ ನೀಡಲಾಗಿದೆ ಅಶೋಕ್ ವಿವರಿಸಿದರು.

ನಮ್ಮ ಆಡಳಿತಾವಧಿಯ ಸಾಧನೆಗಳನ್ನು ಮುಂದಿಟ್ಟು, ಮತದಾರರ ಮನವೊಲಿಸಲಾಗುವುದು. ಸಮ್ಮಿಶ್ರ ಸರಕಾರದಲ್ಲಿ ಮೂಲೆಗುಂಪಾಗುತ್ತಿರುವ ಕಾಂಗ್ರೆಸಿಗರು ಕೂಡ ನಮ್ಮೊಂದಿಗೆ ಕೈ ಜೋಡಿಸಿದ್ದು, ಬಿಜೆಪಿ ಮೊಟ್ಟ ಮೊದಲ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ತೆಕ್ಕೆಗೆ ಎಂದು ತಿಳಿಸಿದರು.

ಧರ್ಮ ಒಡೆಯುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದರು ಎನ್ನುವುದು ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಯಿಂದ ಸಾಬೀತಾಗಿದೆ. ಕಾಂಗ್ರೆಸ್ ಅನುಭವಿಸಿದ ಪಶ್ಚಾತಾಪ ಶಿವಕುಮಾರ್ ಮುಖಾಂತರ ಬಂದಿದೆ.
– ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ

Tags

Related Articles

Leave a Reply

Your email address will not be published. Required fields are marked *

Language
Close