About Us Advertise with us Be a Reporter E-Paper

Breaking Newsದೇಶಪ್ರಚಲಿತ

ಚೊಚ್ಚಲ ಮತದಾರರ ಮೇಲೆ ಕಾಂಗ್ರೆಸ್ ಕಣ್ಣು!

 

ದೆಹಲಿ: 2019 ರಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರ ಪಡೆಯಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್‌ ಮೊದಲ ಬಾರಿ ಮತದಾನ ಮಾಡುತ್ತಿರುವ ಯುವ ಮತದಾರರನ್ನು ಸೆಳೆಯಲು ನಿರ್ಧಾರ ಮಾಡಿದೆ.

ಮುಂದಿನ ಚುನಾವಣೆಯಲ್ಲಿ ಯುವ ಮತದಾರರು ಪ್ರಮುಖ ಪಾತ್ರ ವಹಿಸಲಿದ್ದು, ಅವರ ಮತಗಳನ್ನು ಸೆಳೆಯಬೇಕು ಎಂದು ಕಾರ್ಯರ್ತರಿಗೆ ಸೂಚನೆ ನೀಡಿದೆ. ಇದಕ್ಕಾಗಿ ಹೊಸ ಯೋಜನೆ ಹಾಕಿಕೊಂಡಿರುವ ಕಾಂಗ್ರೆಸ್‌ ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಿರುವ ಅನಕ್ಷರಸ್ಥರಿಗೆ ಇಂಗ್ಲೀಷ್‌ ಕಲಿಸಲು ಹಾಗೂ ಈಶಾನ್ಯ ರಾಜ್ಯದ ವಿದ್ಯಾರ್ಥಿನಿಯತರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡಲು ತೀರ್ಮಾನ ಮಾಡಿದೆ. ಆ ಮೂಲಕ ಯುವ ಮತದಾರರನ್ನು ಸೆಳೆಯಲು ನಿರ್ಧಾರ ಮಾಡಿದೆ.

ಈ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ಬರಲಿದ್ದು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾರ್ಯಕ್ರಮ ಹಾಗೂ ಕಾರ್ಯಗಾರಗಳು ನಡೆಯಲಿದೆ. ಅಲ್ಲದೇ ಎನ್‌ಎಸ್‌ಯುಐ ಮೂಲಕ ವಿದ್ಯಾರ್ಥಿಗಳನನ್‌ಉ ಸಂಘಟಿಸಿ ಪಕ್ಷ ಬಲ ಪಡಿಸಲು ಕಾಂಗ್ರೆಸ್‌ ಹೈ ಕಮಾಂಡ್‌ ಚಿಂತನೆ ನಡೆಸಿದೆ.

Tags

Related Articles

Leave a Reply

Your email address will not be published. Required fields are marked *

Language
Close