About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕಾಂಗ್ರೆಸ್‌‌ ವರನಿಲ್ಲದ ಮದುವೆ ದಿಬ್ಬದಂತೆ: ರಾಜನಾಥ್ ಸಿಂಗ್

ಭೋಪಾಲ್: ಪ್ರಸ್ತುತ ಕಾಂಗ್ರೆಸ್‌ನ ಸ್ಥಿತಿ ವರನೇ ಇಲ್ಲದೆ ಮದುವೆಗೆ ಸಿದ್ದವಾದ ಮದುವೆ ದಿಬ್ಬಣದಂತಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಕೈ ಪಕ್ಷವನ್ನು ವಿವಾಹದ ದಿಬ್ಬಣಕ್ಕೆ ಹೋಲಿಸಿ ಮಾತನಾಡಿದ್ದಾರೆ. ಕಾಂಗ್ರೆಸ್‌ನ ಸ್ಥಿತಿ ನಮ್ಮ ಪಕ್ಷಕ್ಕಿಂತ ಕಳಪೆಯಾಗಿದೆ ಎಂದ ರಾಜನಾಥ್ ಸಿಂಗ್ ಭಾರತೀಯ ಜನತಾ ಪಕ್ಷ ಚುನಾವಣೆಗೆ ಮುನ್ನವೇ ಆಯಾ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಹಾಗೆಯೇ ಮುಂದಿನ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯನ್ನೂ ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್ ನಾಯಕರಿಗೆ ಈ ಧೈರ್ಯವಿಲ್ಲ ಎಂದು ವಾದಿಸಿದ್ದಾರೆ.

ಬಿಜೆಪಿಯು ಮುಂದಿನ ಚುನಾವಣೆಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢಗಳಲ್ಲಿ ಸ್ಪಷ್ಟ ಅಧಿಕಾರಕ್ಕೆ ಏರುತ್ತದೆ. ಇದಕ್ಕಾಗಿ ಬೇರೆ ಪಕ್ಷದೊಡನೆ ಮೈತ್ರಿ ಅಗತ್ಯವಿಲ್ಲ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ರಾಜ್ಯದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮನ್ನು ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಸಿಂಗ್ ಕಾಂಗ್ರೆಸ್ ನಾಯಕತ್ವವಿಲ್ಲದೆ ಸೊರಗುತ್ತಿದೆ ಎಂದು ಟೀಕಿಸಿದ್ದಾರೆ.

ದೇಶದಲ್ಲಿ ಅಚ್ಚೇ ದಿನ್ ಇದಾಗಲೇ ಅಸ್ತಿತ್ವದಲ್ಲಿದೆ, ಆದರೆ ಸರಕಾರದ ವಿರೋಧಿಗಳಿಗೆ ಇದನ್ನು ಗ್ರಹಿಸುವ ಶಕ್ತಿ ಇಲ್ಲ ಎಂದು ಗೃಹ ಸಚಿವರು ಹೇಳೀದರು.ಪ್ರಸ್ತುತ ದೇಶದ ಆಡಳಿತದಲ್ಲಿ ಅಭೂತಪೂರ್ವ ಪ್ರಗತಿ ಹೊಂದುತ್ತಿದೆ.ಇದೇ ಬಗೆಯ ಬೆಳವಣಿಗೆಯ ದರವು ಮುಂದುವರಿದರೆ ಭಾರತ 2033 ರ ಹೊತ್ತಿಗೆ ಪ್ರಪಂಚದ ಅಗ್ರ ಮೂರು ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ನಿಲ್ಲಲಿದೆ.

ಪ್ರಸ್ತುತ ರಾಜಕೀಯದಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟಿಗೆ ಕಾಂಗ್ರೆಸ್ ಸಂಪೂರ್ಣ ಹೊಣೆಯಾಗಿದೆ ಎಂದ ಸಿಂಗ್ ಕಾಂಗ್ರೆಸ್ ಈ ಹಿಂದೆ ನೀಡಿದ್ದ ಚುನಾವಣೆ ಭರವಸೆಗಳಲ್ಲಿ ಯಾವುದನ್ನು ಸರಿಯಾಗಿ ನೆರವೇರಿಸಿಲ್ಲ ಎಂದ ಸಿಂಗ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಪೋಸ್ಟ್ ಡೇ ಟೆಡ್ ಚೆಕ್‌ನಂತಿದೆ, ಇದರಲ್ಲಿ ಹೊಸದೇನೂ ಇಲ್ಲ ಮತ್ತು ಅದರ ಪ್ರಣಾಳಿಕೆಯ ಪುನರಾವರ್ತನೆಯಾಗಿದೆ ಎಂದು ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close