ನಿತೀಶ್ ಕುಮಾರ್ ಅಮಿತ್ ಶಾ ಕೈಗೊಂಬೆ: ಕಾಂಗ್ರೆಸ್ ಟೀಕೆ

Posted In : ದೇಶ

ದೆಹಲಿ: ಬಹುತೇಕ ಮಂದಿಯ ಪ್ರೀತಿಪಾತ್ರರಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಟೀಕಿಸಿದೆ. ಕಳೆದ ತಿಂಗಳು ನಿತೀಶ್ ಆರ್‌ಜೆಡಿ ಜತೆಗಿನ ಮಹಾಮೈತ್ರಿಗೆ ಅಂತ್ಯ ಹೇಳಿ, ಬಿಜೆಪಿ ಬೆಂಬಲದಿಂದ ಸರಕಾರ ರಚಿಸಿತ್ತು.

ನಿತೀಶ್ ಅವರ ನಿರ್ಧಾರದಿಂದ ಜೆಡಿಯು ಪಕ್ಷದ ಮುಖಂಡರು ಆತಂಕ ದಲ್ಲಿದ್ದಾರೆ. ಮುಖ್ಯಮಂತ್ರಿಯಿಂದ ಇಂತಹ ಕ್ರಮವನ್ನು ಯಾರೂ ತೆಗೆದು ಕೊಂಡಿರಲಿಲ್ಲ. ತಮ್ಮ ಗೌರವಕ್ಕೆ ತಾವೇ ಧಕ್ಕೆ ತಂದುಕೊಂಡಿದ್ದು, ದುರ್ಬಲ ಮುಖ್ಯಮಂತ್ರಿಯೆಂದು ಸಾಬೀತುಪಡಿಸಿದ್ದಾರೆ ಎಂದರು. ಒಂದು ಕಾಲದಲ್ಲಿ ಎಲ್ಲರ ಪ್ರೀತಿಪಾತ್ರ ಸಿಎಂ ಆಗಿದ್ದರು. ಆದರೀಗ ಶಾರ ಕೈಗೊಂಬೆಯಾಗಿದ್ದಾರೆ.

ಆರ್‌ಜೆಡಿ ಜತೆಗಿನ ಮಹಾಮೈತ್ರಿ ಮುರಿದ ನಂತರ ಶರದ್ ಯಾದವ್ ನಿತೀಶ್ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಇಂದು ಸಂಜೆ ನಿತೀಶ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಸಲಿದ್ದು, ಇದಕ್ಕೆ ಪರ್ಯಾಯವಾಗಿ ಶರದ್ ದೆಹಲಿಯಲ್ಲಿ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆಯಿದೆ. ಶರದ್ ಮೇಲೆ ನಮಗೆ ಅಸಮಾಧಾನವಿಲ್ಲ. ಇವರ ರಾಜಕೀಯ ನಡೆ ಭವಿಷ್ಯದಲ್ಲಿ ತಿರುಗುಮುರುಗಾಗ ಲಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಶರದ್ ಯಾದವ್ ಇತ್ತೀಚೆಗಷ್ಟೇ, ಸಾಂಝಿ ವಿರಾಸತ್ ಬಚಾವೋ ಮಂಚ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಿಜೆಪಿ ರಾಜಕೀಯ ವಾಗಿ ತಾರತಮ್ಯವೆಸಗುತ್ತಿದೆ ಎಂದು ಆರೋಪಿಸಿದ್ದರು.

Leave a Reply

Your email address will not be published. Required fields are marked *

5 × 5 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top