About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್
Trending

‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ವಿರೋಧಿಸಿ ‘ಕೈ’ ಕಾರ್ಯಕರ್ತರಿಂದ ದಾಳಿ

ಕೋಲ್ಕತಾ: ‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಚಿತ್ರ ಪ್ರದರ್ಶನಕ್ಕೆ ವಿರೋಧಿಸಿ ಶುಕ್ರವಾರ ಕಾಂಗ್ರೆಸ್​ ಕಾರ್ಯಕರ್ತರು ಕೋಲ್ಕತಾದ ಮಲ್ಟಿಪ್ಲೆಕ್ಸ್​​ವೊಂದರ ಮೇಲೆ  ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರು ಥಿಯೇಟರ್​​ ಧ್ವಂಸಗೊಳಿಸಿದ್ದಾರೆ.

ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಕಾಂಗ್ರೆಸ್​ ಬಾವುಟಗಳನ್ನ ಹಿಡಿದು ಬಂದ ಕಾರ್ಯಕರ್ತರು ಕ್ವೆಸ್ಟ್​​ ಮಾಲ್​​​ನ ಐನಾಕ್ಸ್​​​ ಮಲ್ಟಿಪ್ಲೆಕ್ಸ್​ಗೆ ನುಗ್ಗಿದ್ದಾರೆ. ಸಿನಿಮಾ ಪ್ರದರ್ಶನ ಆರಂಭಕ್ಕೆ ಇನ್ನೇನು ಕೆಲವೇ ಸಮಯ ಬಾಕಿ ಇದ್ದಾಗಲೇ ಸ್ಕ್ರೀನ್​​ ಹರಿದುಹಾಕಿದ್ದಾರೆ. ಅಲ್ಲದೇ ಪ್ರೇಕ್ಷಕರಿಗೆ, ಕೂಡಲೇ ಥಿಯೇಟರ್​​ನಿಂದ ಹೊರನಡೆಯುವಂತೆ ಬೆದರಿಕೆ ಹಾಕಿದ್ದಾರೆ. ಪಕ್ಷದ ಹಿರಿಯ ಮುಖಂಡರಿಗೆ ಅಗೌರವ ತರುವ ಈ ಸಿನಿಮಾವನ್ನ ಬೇರೆಲ್ಲೂ ಪ್ರದರ್ಶನಗೊಳ್ಳಲು ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದಾರೆ.

ನಮ್ಮ ಹಿರಿಯ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮನಮೋಹನ್​ ಸಿಂಗ್​​ ಅವರಿಗೆ ಸಿನಿಮಾ ಅಗೌರವ ತೋರಿದೆ. ಇಲ್ಲಿ ಪ್ರದರ್ಶನ ನಿಲ್ಲಿಸಿದ್ದೇವೆ. ಬೇರೆ ಎಲ್ಲೂ ಈ ಸಿನಿಮಾ ಪ್ರದರ್ಶನಗೊಳ್ಳಲು ಬಿಡುವುದಿಲ್ಲ ಎಂದು ಕಾಂಗ್ರೆಸ್​​ ನಾಯಕ ರಾಕೇಶ್​ ಸಿಂಗ್ ಈ ವೇಳೆ​​ ಹೇಳಿದ್ದಾರೆ. ಕೆಲವು ಪ್ರತಿಭಟನಾಕಾರರು, ರಾಹುಲ್​ ಗಾಂಧಿ ಜಿಂದಾಬಾದ್​​, ಕಾಂಗ್ರೆಸ್​ ಜಿಂದಾಬಾದ್​​ ಎಂಬ ಘೋಷಣೆಗಳನ್ನ ಕೂಗಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ ನಂತರ ಸಿನಿಮಾ ಪ್ರದರ್ಶನ ಮುಂದುವರೆದಿದೆ. ನಾವು ಸಿನಿಮಾ ಪ್ರದರ್ಶನ ನಿಲ್ಲಿಸುವುದಿಲ್ಲ ಎಂದು ಥಿಯೇಟರ್​ ಸಿಬ್ಬಂದಿ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close