ಟೈಮ್ಸ್‌ ನೌ ಸಮೀಕ್ಷೆೆ: ಕಾಂಗ್ರೆೆಸ್ ಅತೀ ದೊಡ್ಡ ಪಕ್ಷ, ಮುಖ್ಯಮಂತ್ರಿಯಾಗಿ ಸಿದ್ದು ಬೆಸ್ಟ್‌

Posted In : ರಾಜ್ಯ

ಬೆಂಗಳೂರು: ಮುಂದಿನ ಕರ್ನಾಟಕ ವಿದಾನಸಭೆ ಚುನಾವಣೆ ಮುಂಚಿತವಾಗಿ ಟೈಮ್ಸ್‌ ನೌ ಹಾಗೂ ವಿಎಮ್‌ಆರ್ ನಡೆಸಿರುವ ಚುನಾವಣೆ ಪೂರ್ವ ಸಮೀಕ್ಷೆೆಯಲ್ಲಿ, ಕಾಂಗ್ರೆೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಬಿಜೆಪಿ ಎರಡನೇ ಹಾಗು ಜೆಡಿಎಸ್ ಮೂರನೇ ಸ್ಥಾನ ಪಡೆದು ಕಿಂಗ್ ಮೇಕರ್ ಆಗಲಿದೆ ಎಂದು ಹೇಳಿದೆ. ಪಕ್ಷೇತರರು ನಾಲ್ಕು ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸಲಿದ್ದಾರೆ.

ಸಮೀಕ್ಷೆೆಯ ಪ್ರಕಾರ ಒಟ್ಟು 224 ಕ್ಷೇತ್ರಗಳಲ್ಲಿ ಕಾಂಗ್ರೆೆಸ್ 91 ಸ್ಥಾನಗಳನ್ನು ಗೆಲ್ಲಿಲಿದ್ದು, ಬಿಜೆಪಿ 89 ಸ್ಥಾನಗಳಲ್ಲಿ ಮೇಲುಗೈ ಸಾಧಿಸಲಿದೆ. ಅಲ್ಲದೇ ಪ್ರಾದೇಶಿಕ ಪಕ್ಷ ಜೆಡಿಎಸ್ 40 ಸ್ಥಾಾ ಪಡೆಯಲಿದ್ದು, ಅತಂತ್ರ ವಿಧಾನಸಬೆ ಸೃಷ್ಟಿಯಾಗಲಿದೆ ಎಂದು ಸಮಿಕ್ಷೆೆಯಲ್ಲಿ ಹೇಳಲಾಗಿದೆ. ಬಹುಮತಕ್ಕೆೆ ಬೇಕಾಗಿರುವ 113 ಸ್ಥಾನಗಳನ್ನು ಪಡೆಯಲು ಮೂರೂ ಪಕ್ಷಗಳು ವಿಫಲವಾಗಲಿದೆ.

ಕಳೆದ ಬಾರಿ 122 ಸ್ಥಾನಗಳೊಂದಿಗೆ ಭರ್ಜರಿ ಬಹುಮತದೊಂದಿಗೆ ಗದ್ದುಗೆ ಏರಿದ್ದ ಕಾಂಗ್ರೆೆಸ್‌ಗೆ ಈ ಬಾರಿ 31 ಸೀಟುಗಳು ನಷ್ಟವಾಗಲಿದ್ದು, , ಕಳೆದ ಬಾರಿ 40 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿಗೆ ಮತ್ತೆೆ 49 ಸ್ಥಾನಗಳಲ್ಲಿ ಹೆಚ್ಚುವರಿಯಾಗಿ ಗೆಲ್ಲಲಿದೆ. ಜೆಡಿಎಸ್‌ನ ಸ್ಥಾನ ಗಳಿಕೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಸಮೀಕ್ಷೆೆ ತಿಳಿಸಿದೆ.

ಒಟ್ಟು ಮತ ಹಂಚಿಕೆಯಲ್ಲಿ ಕಾಂಗ್ರೆೆಸ್ 38.6 ಶೇಕಡಾ ಮತ ಪಡೆಯಲಿದ್ದು, ಬಿಜೆಪಿ ಹಾಗೂ ಜೆಡಿಎಸ್ ಕ್ರಮವಾಗಿ ಶೇ. 35.03 ಹಾಗೂ 21.33 ಮತ ಪಡೆಯಲಿದೆ ಎಂದು ಹೇಳಿದೆ. ಕಳೆದ ಬಾರಿಗೆ ಹೋಲಿಸಿದರೆ ಮೂರೂ ಪಕ್ಷಗಳ ಮತ ಗಳಿಕೆ ಪ್ರಮಾಣ ಹೆಚ್ಚಾಗಲಿದ್ದು, ಕಳೆದ ಬಾರಿ ಕಾಂಗ್ರೆೆಸ್ ಶೇ. 36.59%, ಬಿಜೆಪಿ 19.89% ಹಾಗೂ ಜೆಡಿಎಸ್ 20.19% ಮತ ಪಡೆದಿದ್ದವು.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆೆಗೆ ಶೇ.46 ರಷ್ಟು ಜನ ಸಿದ್ದರಾಮಯ್ಯ ಪರ ಒಲವು ತೋರಿದ್ದು, ಶೇ.32 ರಷ್ಟು ಜನ ಯಡಿಯೂರಪ್ಪ ಮಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ. ಜೆಡಿಎಸ್‌ನ ಕುಮಾರಸ್ವಾಮಿಗೆ ಶೇ. 17.63 ಮಂದಿ ಜೈ ಅಂದಿದ್ದಾರೆ.

Leave a Reply

Your email address will not be published. Required fields are marked *

three × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top