About Us Advertise with us Be a Reporter E-Paper

Breaking NewsCompany Announcementsದೇಶಪ್ರಚಲಿತ

ಮೋದಿ ಮಣಿಸಲು ಪಾಕ್‌‌ ಜತೆ ಸೇರಿದೆ ’ಹಸ್ತ’ಲಾಘವ : ಉಮಾ ಭಾರತಿ

ದಮೋಹ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಕಾಂಗ್ರೆೆಸ್, ಪಾಕಿಸ್ತಾನದ ಜತೆ ಕೈ ಜೋಡಿಸಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಆಪಾದಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಸ್ಥಳಗಳಲ್ಲಿ ಪ್ರಚಾರ ನಡೆಸಿದ ಅವರು ಕಾಂಗ್ರೆೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಾಂಗ್ಲಾ ದೇಶಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಯುದ್ಧ ನಡೆಸಿದಾಗ ಅಂದು ಪ್ರತಿಪಕ್ಷ ನಾಯಕರಾಗಿದ್ದ ವಾಜಪೇಯಿ, ಪಾಕಿಸ್ತಾನವನ್ನು ಸೋಲಿಸಲು ಜನಸಂಘವು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬೆಂಬಲ ನೀಡುತ್ತದೆ ಎಂದು ಸಂಸತ್ತಿನಲ್ಲೇ ಹೇಳಿದ್ದರು.

ಆದರೆ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಕಾಂಗ್ರೆೆಸ್ ಮುಖಂಡರು ಸೇನಾ ಮುಖ್ಯಸ್ಥರನ್ನು ಗೂಂಡಾ ಎಂದು ಜರಿದರು. ಕಾಂಗ್ರೆೆಸ್ ನಾಯಕರೊಬ್ಬರು ಪಾಕಿಸ್ತಾನಕ್ಕೆೆ ತೆರಳಿ ಮೋದಿ ಅವರನ್ನು ಸೋಲಿಸಲೇಬೇಕು ಎಂದರು. ಮೋದಿ ಅವರನ್ನು ಮಣಿಸಲು ಕಾಂಗ್ರೆೆಸ್ ಪಾಕಿಸ್ತಾನದ ಜತೆ ಸೇರಿ ಪಿತೂರಿ ನಡೆಸಿದೆ ಎನ್ನುವುದನ್ನು ಈ ಘಟನೆಗಳು ತೋರಿಸುತ್ತವೆ ಎಂದು ಅವರು ಗುಡುಗಿದರು.

Tags

Related Articles

Leave a Reply

Your email address will not be published. Required fields are marked *

Language
Close