About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ಹಾದಿ ಬೀದಿಯಲ್ಲಿ ಅಪ್ಪಿಕೋ ಚಳವಳಿಗೆ ಇಳಿದ ಕಾಂಗ್ರೆಸ್‌

ಜುಲೈ 20ರಂದು ಸಂಸತ್‌ನಲ್ಲಿ ಮಾತನಾಡಿ, ಕೇಂದ್ರ ಸರಕಾರದ ಮೇಲೆ ಆಪಾದನೆಗಳನ್ನು ಮಾಡಿದ ರಾಹುಲ್‌ ಗಾಂಧಿ, ನಂತರ ಪ್ರಧಾನಿ ಕುಳಿತಲ್ಲಿಗೆ ಹೋಗಿ ಅವರನ್ನು ಆಲಂಗಿಸಿಕೊಂಡಿದ್ದರು

ದೆಹಲಿ: ಲೋಕಸಭೆಯಲ್ಲಿ ನಡೆದ ಅವಿಶ್ವಾಸ ಚರ್ಚೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಅಪ್ಪಿಕೊಳ್ಳುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಪರವಾಗಿ ನಿಂತಿರುವ ಅವರ ಪಕ್ಷದ ಕಾರ್ಯಕರ್ತರು, ದೇಶಾದ್ಯಂತ ಮುಕ್ತವಾಗಿ ಅಪ್ಪಿಕೊಳ್ಳುವ ಚಳವಳಿ ಆರಂಭಿಸಿದ್ದಾರೆ.

ಈ ಮೂಲಕ ದ್ವೇಷವನ್ನು ಕಿತ್ತೊಗೆದು ಪ್ರೀತಿಯನ್ನು ಬೆಳೆಸುವ ಉದ್ದೇಶ ತನಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ದೆಹಲಿಯ ಕನಾಟ್‌ ಪ್ಲೇಸ್‌ನಲ್ಲಿ ಅಪ್ಪಿಕೋ ಚಳವಳಿ ನಡೆಸಿದ ಕಾಂಗ್ರೆಸ್‌ ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಪ್ರೀತಿಯ ಸಂದೇಶ ರವಾನೆ ಮಾಡುತ್ತಿದೆ. ದ್ವೇಷ ಕಿತ್ತೊಗೆದು ದೇಶ ಉಳಿಸಿ ಎಂಬ ಸಂದೇಶ ಇರುವ ಭಿತ್ತಿಪತ್ರಗಳನ್ನು ಪಕ್ಷದ ಕಾರ್ಯಕರ್ತರು ಹಿಡಿದುಕೊಂಡಿದ್ದರು.

ಜುಲೈ 20ರಂದು ಸಂಸತ್‌ನಲ್ಲಿ ಮಾತನಾಡಿ, ಕೇಂದ್ರ ಸರಕಾರದ ಮೇಲೆ ಆಪಾದನೆಗಳನ್ನು ಮಾಡಿದ ರಾಹುಲ್‌ ಗಾಂಧಿ, ನಂತರ ಪ್ರಧಾನಿ ಕುಳಿತಲ್ಲಿಗೆ ಹೋಗಿ ಅವರನ್ನು ಆಲಂಗಿಸಿಕೊಂಡಿದ್ದರು. ಇದಾದ ಕೂಡಲೇ ತಮ್ಮ ಆಸನದಲ್ಲಿ ಬಂದು ಕುಳಿತ ರಾಹುಲ್‌, ತಮ್ಮ ಪಕ್ಷದ ಸಂಸದರೊಬ್ಬರಿಗೆ ಕಣ್ಣು ಹೊಡೆದಿದ್ದರು.

Related Articles

Leave a Reply

Your email address will not be published. Required fields are marked *

Language
Close